Kannada Translation

Ayah by Ayah

Tags

Download Links

Kannada Translation translation for Surah Al-Jathiyah — Ayah 21

45:21
أَمۡ حَسِبَ ٱلَّذِينَ ٱجۡتَرَحُواْ ٱلسَّيِّـَٔاتِ أَن نَّجۡعَلَهُمۡ كَٱلَّذِينَ ءَامَنُواْ وَعَمِلُواْ ٱلصَّٰلِحَٰتِ سَوَآءٗ مَّحۡيَاهُمۡ وَمَمَاتُهُمۡۚ سَآءَ مَا يَحۡكُمُونَ ٢١
ಅದಲ್ಲ, ದುಷ್ಕರ್ಮಗಳನ್ನೆಸಗಿದವರು ಭಾವಿಸಿರುವರೇ? ನಾವು ಅವರನ್ನು ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮವೆಸಗಿದವರಿಗೆ ಸಮಾನರಾಗಿ ಅಂದರೆ ಅವರಿಬ್ಬರ ಜೀವನ ಹಾಗೂ ಮರಣಗಳು ಸಮಾನ ರೂಪದಲ್ಲಿ ಮಾಡುತ್ತೇವೆಂದು1. ಅವರು ಮಾಡುವ ತೀರ್ಮಾನ ಬಹಳ ಕೆಟ್ಟದ್ದೇ ಸರಿ.
Footnotes
  • [1] ಅರ್ಥಾತ್ ಇಹದಲ್ಲಿ ಸುಖ ಸಿಕ್ಕಿದಂತೆ ಪರದಲ್ಲೂ ಸುಖ ಸಿಗಬಹುದೆಂದು ದುರ್ಜನರು ಎಣಿಸುತ್ತಿರುವರೇನು? ಆ ಧೋರಣೆ ತಪ್ಪು. ಅರ್ಥಾತ್ ಸಚ್ಚರಿತರಾದ ಸತ್ಯವಿಶ್ವಾಸಿಗಳ ಜೀವನವೂ ಮರಣವೂ ಸಂತೋಷ ಹಾಗೂ ಕರಾಮತ್‍ನಲ್ಲಿ ಸಮಾನವಾಗಿರುವಂತೆ ಸತ್ಯನಿಷೇಧಿಗಳದ್ದು ಸಮಾನವಾಗಿಲ್ಲ. ಆದ್ದರಿಂದ ಸತ್ಯವಿಶ್ವಾಸಿಗಳು ಮಾತ್ರ ಉಭಯ ಜೀವನದಲ್ಲೂ ಅಲ್ಲಾಹನ ಕೃಪಾಪಾತ್ರರೂ, ತೃಪ್ತರೂ, ಗೌರವಾನ್ವಿತರೂ ಆಗಿರುವರು ಎಂದರ್ಥ (ಬೈಳಾವಿ).