Kannada Translation

Ayah by Ayah

Tags

Download Links

Kannada Translation translation for Surah Al-Jathiyah — Ayah 32

45:32
وَإِذَا قِيلَ إِنَّ وَعۡدَ ٱللَّهِ حَقّٞ وَٱلسَّاعَةُ لَا رَيۡبَ فِيهَا قُلۡتُم مَّا نَدۡرِي مَا ٱلسَّاعَةُ إِن نَّظُنُّ إِلَّا ظَنّٗا وَمَا نَحۡنُ بِمُسۡتَيۡقِنِينَ ٣٢
‘ಅಲ್ಲಾಹನ ವಾಗ್ದಾನ ಸತ್ಯಪೂರ್ಣವಾಗಿದೆ. ಅಂತಿಮ ಘಳಿಗೆಯಲ್ಲಿ ಯಾವ ಸಂದೇಹವೂ ಇಲ್ಲ’, ಎಂದು ಹೇಳಲಾದಾಗ ನೀವು, ‘ಅಂತಿಮ ಘಳಿಗೆಯೇನೆಂದು ನಮಗೆ ತಿಳಿಯದು. ನಮಗೊಂದು ಊಹೆ ಮಾತ್ರ ಇದೆ, ನಾವು ದೃಢವಾಗಿ ನಂಬಿದವರಲ್ಲ’ ಎಂದು ಹೇಳುತ್ತಿದ್ದಿರಿ1.
Footnotes
  • [1] ರಾಝೀ ಹೇಳುತ್ತಾರೆ, ಪರಲೋಕ ಜೀವನದ ಬಗ್ಗೆ ಅವರು ಎರಡು ಅಭಿಪ್ರಾಯವನ್ನು ಹೊಂದಿದ್ದರು. ಒಂದು ವಿಭಾಗವು ಅಂತ್ಯ ದಿನ ಹಾಗೂ ಪುನರುತ್ಥಾನವನ್ನು ದೃಢವಾಗಿ ನಿಷೇಧಿಸುವವರು. ಅವರ ಬಗ್ಗೆ ಇದರ ಮೊದಲಿನ ಸೂಕ್ತದಲ್ಲಿ `ಜೀವನವೆಂದರೆ ನಮ್ಮ ಈ ಲೋಕದ ಜೀವನ ಮಾತ್ರ' (45:24) ಎಂದು ಹೇಳಲಾಗಿದೆ. ಎರಡನೆಯ ವಿಭಾಗವು ಪ್ರವಾದಿವರ್ಯ ರು ಹೇಳುತ್ತಿದ್ದುದನ್ನು ಬಹಳಷ್ಟು ಕೇಳಿ ಹಾಗೂ ಪ್ರವಾದಿವರ್ಯರು ಹೇಳುವ ವಾದದ ಸಮರ್ಪಕವಾದ ಆಧಾರ ಪ್ರಮಾಣಗಳನ್ನು ಸಾಕಷ್ಟು ಕೇಳಿ ಅದರಲ್ಲಿ ಅವರು ಸಂಶಯ ತಾಳಿದರು. ಅವರನ್ನು ಈ ಆಯತ್‍ನಲ್ಲಿ ಉದ್ದೇಶಿಸಲಾಗಿದೆ. ಅಲ್ಲಾಹನನ್ನು ದೃಢವಾಗಿ ನಿಷೇಧಿಸಿದವರ ಬಗ್ಗೆ ಉತ್ತರಿಸಿದ ನಂತರ ಇನ್ನೊಂದು ವಿಭಾಗದ ಮಾತನ್ನೂ ಉದ್ಧರಣೆಯನ್ನೂ ಕೊಟ್ಟನು. ಹೀಗಾಗಿ ಈ ಮಂದಿ ಒಂದನೆಯ ವಿಭಾಗದೊಂದಿಗೆ ಭಿನ್ನಮತ ಹೊಂದಿದವರೆಂದು ವ್ಯಕ್ತವಾಗುತ್ತದೆ. (ರಾಝೀ 14/275)