Kannada Translation

Ayah by Ayah

Tags

Download Links

Kannada Translation translation for Surah Muhammad — Ayah 1

47:1
ٱلَّذِينَ كَفَرُواْ وَصَدُّواْ عَن سَبِيلِ ٱللَّهِ أَضَلَّ أَعۡمَٰلَهُمۡ ١
ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಯಾರೋ ಅವರ ಕರ್ಮ ಗಳನ್ನು ಅಲ್ಲಾಹನು ವ್ಯರ್ಥಗೊಳಿಸಿಬಿಟ್ಟನು1.
Footnotes
  • [1] *ಅಧ್ಯಾಯದ ಎರಡನೆಯ ಆಯತ್‍ನಲ್ಲಿರುವ ಪ್ರವಾದಿಯವರ ಹೆಸರೇ ಸೂರಾಕ್ಕೆ ಆಯ್ಕೆಯಾಗಿದೆ. ಈ ಅಧ್ಯಾಯದಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಪ್ರಚೋದನೆ ಇರುವುದರಿಂದ ಖಿತಾಲ್ ಎಂಬ ಹೆಸರೂ ಇದೆ. ಭಕ್ತರಿಗೆ ದೊರೆಯುವ ಸ್ವರ್ಗೀಯ ಭೋಜನಗಳು ಹಾಗೂ ಯುದ್ಧದ ಆದೇಶ ಬಂದಾಗ ಅರೆ ವಿಶ್ವಾಸಿಗಳ ಪ್ರತಿಕ್ರಿಯೆ ಮುಂತಾದ ವಿಷಯಗಳೂ ಇವೆ. ಅರ್ಥಾತ್ ಸತ್ಯನಿಷೇಧಿಗಳು ಇಹಲೋಕದಲ್ಲಿ ಮಾಡುವ ದಾನ ಧರ್ಮಗಳಾದಿ ಪುಣ್ಯ ಕರ್ಮಗಳಿಗೆ ಪರಲೋಕದಲ್ಲಿ ಯಾವುದೇ ಪ್ರತಿಫಲ ಲಭ್ಯವಿಲ್ಲ. ಅವುಗಳ ಸ್ವೀಕೃತಿಯ ಪ್ರಥಮ ಉಪಾದಿ ಎಂದರೆ ಸತ್ಯವಿಶ್ವಾಸವಾಗಿದೆ. ಆದರೆ ಪರಮ ದಯಾನಿಧಿಯಾದ ಅಲ್ಲಾಹನು ಐಹಿಕ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ದೇಹಾರೋಗ್ಯ ಮುಂತಾದ ಒಳಿತುಗಳನ್ನು ದಯಪಾಲಿಸುವುದಕ್ಕೆ ಅಡ್ಡಿ ಇಲ್ಲ.