Kannada Translation

Ayah by Ayah

Tags

Download Links

Kannada Translation translation for Surah Muhammad — Ayah 36

47:36
إِنَّمَا ٱلۡحَيَوٰةُ ٱلدُّنۡيَا لَعِبٞ وَلَهۡوٞۚ وَإِن تُؤۡمِنُواْ وَتَتَّقُواْ يُؤۡتِكُمۡ أُجُورَكُمۡ وَلَا يَسۡـَٔلۡكُمۡ أَمۡوَٰلَكُمۡ ٣٦
ಇಹಲೋಕದ ಜೀವನವು ಕೇವಲ ಆಟ ಮತ್ತು ವಿನೋದವಾಗಿದೆ. ನೀವು ವಿಶ್ವಾಸವಿರಿಸಿದರೆ ಮತ್ತು (ಧರ್ಮನಿಷ್ಟರಾಗಿ ಅಲ್ಲಾಹನನ್ನು) ಭಯ ಪಟ್ಟರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ನೀಡುವನು. ಅವನು ನಿಮ್ಮಿಂದ ನಿಮ್ಮ ಸೊತ್ತುಗಳನ್ನು ಕೇಳಲಾರನು1.
Footnotes
  • [1] ‘ನಿಮ್ಮ ಸೊತ್ತುಗಳನ್ನು ಅವನು ಕೇಳುವುದಿಲ್ಲ’ ಎಂಬ ಮಾತಿಗೆ ಮೂರು ವಿಧ ಅರ್ಥ ಕಲ್ಪಿಸಬಹುದಾಗಿದೆ. 1. ನಿಮ್ಮ ಸೊತ್ತುಗಳನ್ನು ಧರ್ಮ ಕಾರ್ಯಕ್ಕೆ ವೆಚ್ಚ ಮಾಡುವಂತೆ ಅವನು ಹೇಳುತ್ತಿರುವುದು ಅವನಿಗೆ ಅದರ ಅಗತ್ಯ ಇರುವುದರಿಂದಲ್ಲ. ನಿಮ್ಮ ಹಿತಕ್ಕೇ ಆಗಿದೆ. ಈ ಅರ್ಥಕ್ಕೆ 38ನೇ ಆಯತ್‍ನಲ್ಲಿರುವ; “ಅಲ್ಲಾಹನು ಪರಾಶ್ರಯ ನಿರಪೇಕ್ಷನೂ ನೀವು ಪರಾಶ್ರಯಾಪೇಕ್ಷಕರೂ ಆಗಿರುವಿರಿ ಎಂಬ ಮಾತು ಹೊಂದಿಕೆಯಾಗುತ್ತದೆ. 2. “ನಿಮ್ಮ ಎಲ್ಲ ಸೊತ್ತುಗಳನ್ನು ವೆಚ್ಚ ಮಾಡಬೇಕೆಂದು ಅವನು ಆದೇಶಿಸುವುದಿಲ್ಲ. ನಿಮಗೆ ತೊಂದರೆಯಾಗದ ರೀತಿಯಲ್ಲಾಗಿದೆ ಅವನ ಆದೇಶ. 37ನೇ ಆಯತ್ ಈ ಅರ್ಥಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ. 3. ನಿಮ್ಮಲ್ಲಿ ವೆಚ್ಚ ಮಾಡಲು ಆದೇಶ ಕೊಡುತ್ತಿರುವುದು ನಿಮ್ಮ ಸೊತ್ತನ್ನಲ್ಲ, ನಿಜದಲ್ಲಿ ಅದು ನನ್ನ ಸೊತ್ತು. ನನ್ನ ಸೊತ್ತನ್ನೇ ವೆಚ್ಚ ಮಾಡುವಂತೆ ನಿಮ್ಮಲ್ಲಿ ಹೇಳುತ್ತಿದ್ದೇನೆ, ನಿಮ್ಮ ಅಂತರ್ಯದ ಪರೀಕ್ಷೆ ಇಲ್ಲಿಯ ಉದ್ದೇಶ.