Kannada Translation

Ayah by Ayah

Tags

Download Links

Kannada Translation translation for Surah Muhammad — Ayah 4

47:4
فَإِذَا لَقِيتُمُ ٱلَّذِينَ كَفَرُواْ فَضَرۡبَ ٱلرِّقَابِ حَتَّىٰٓ إِذَآ أَثۡخَنتُمُوهُمۡ فَشُدُّواْ ٱلۡوَثَاقَ فَإِمَّا مَنَّۢا بَعۡدُ وَإِمَّا فِدَآءً حَتَّىٰ تَضَعَ ٱلۡحَرۡبُ أَوۡزَارَهَاۚ ذَٰلِكَۖ وَلَوۡ يَشَآءُ ٱللَّهُ لَٱنتَصَرَ مِنۡهُمۡ وَلَٰكِن لِّيَبۡلُوَاْ بَعۡضَكُم بِبَعۡضٖۗ وَٱلَّذِينَ قُتِلُواْ فِي سَبِيلِ ٱللَّهِ فَلَن يُضِلَّ أَعۡمَٰلَهُمۡ ٤
ಆದುದರಿಂದ ಸತ್ಯನಿಷೇಧಿಗಳನ್ನು (ಯುದ್ಧದಲ್ಲಿ) ನೀವು ಎದುರುಗೊಂಡರೆ, ನೀವು ಅವರ ಕತ್ತು ಕಡಿಯಿರಿ. ನೀವು ಅವರನ್ನು ಸದೆಬಡಿದ ಬಳಿಕ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಆ ಬಳಿಕ ನೀವು ಅವರ ಮೇಲೆ ಸೌಜನ್ಯ ತೋರಿ ಬಿಡಬಹುದು ಅಥವಾ ಮೋಕ್ಷದ್ರವ್ಯ ಪಡೆದು ಬಿಟ್ಟು ಬಿಡಬಹುದು. ಇದು ಯುದ್ಧವು ಅದರ (ಆಯುಧ) ಹೊರೆಗಳನ್ನು ಕೆಳಗಿಡುವ ತನಕ. ಇದು ಯುದ್ಧದ ವಿಧಾನ. ಅಲ್ಲಾಹನಿಚ್ಛಿಸುತ್ತಿದ್ದರೆ (ಯುದ್ಧ ರಹಿತವಾಗಿ) ಸ್ವತಃ ಅವನೇ ಅವರನ್ನು ಶಿಕ್ಷಿಸುತ್ತಿದ್ದನು. ಆದರೆ, ನಿಮ್ಮನ್ನು ಪರಸ್ಪರರ ಮೂಲಕ ಪರೀಕ್ಷಿಸಲಿಕ್ಕಾಗಿ (ಅವನು ನಿಮ್ಮೊಂದಿಗೆ ಯುದ್ಧಕ್ಕೆ ಆದೇಶಿಸಿದನು)1. ಅಲ್ಲಾಹನು ತನ್ನ ಮಾರ್ಗದಲ್ಲಿ ಹತರಾಗುವವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.
Footnotes
  • [1] ಶತ್ರು ನಾಶ ಅಲ್ಲಾಹನಿಗೆ ಸುಲಭ. ಅದಕ್ಕೆ ಯುದ್ಧ ಬೇಕಿಲ್ಲ. ಆದ್ದರಿಂದ ಯುದ್ಧಕ್ಕೆ ಅವನ ಆಹ್ವಾನದಲ್ಲಿ ಹಲವು ಉದ್ದೇಶಗಳಿವೆ. ಮನುಷ್ಯರ ಪಾಲಿಗೆ ಅದರಲ್ಲಿ ಕೆಲವು ಪರೀಕ್ಷಣೆಗಳಿವೆ. ಆ ಪರೀಕ್ಷೆಗಳಲ್ಲಿ ಗೆದ್ದವರಿಗೆ ಪ್ರತಿಫಲಗಳಿವೆ.