Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 18

48:18
۞ لَّقَدۡ رَضِيَ ٱللَّهُ عَنِ ٱلۡمُؤۡمِنِينَ إِذۡ يُبَايِعُونَكَ تَحۡتَ ٱلشَّجَرَةِ فَعَلِمَ مَا فِي قُلُوبِهِمۡ فَأَنزَلَ ٱلسَّكِينَةَ عَلَيۡهِمۡ وَأَثَٰبَهُمۡ فَتۡحٗا قَرِيبٗا ١٨
ಆ ವೃಕ್ಷದಡಿಯಲ್ಲಿ ನಿಮ್ಮೊಂದಿಗೆ ಸತ್ಯವಿಶ್ವಾಸಿ ಗಳು ಆಜ್ಞಾನುಸರಣೆಯ ಒಪ್ಪಂದ ಮಾಡುತ್ತಿದ್ದಾಗ ಅಲ್ಲಾಹನು ಅವರಿಂದ ಸಂತುಷ್ಟನಾದನು1. ಅವನು ಅವರ ಮನಸ್ಸಿನಲ್ಲಿರುವುದನ್ನು ತಿಳಿದಿದ್ದನು. ಆದುದರಿಂದ ಅವನು ಅವರ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಅವರಿಗೆ ಶೀಘ್ರ ವಿಜಯವನ್ನು ಪ್ರತಿಫಲವನ್ನಾಗಿ ನೀಡಿದನು.
Footnotes
  • [1] ‘ವೃಕ್ಷದಡಿಯ ಒಪ್ಪಂದ’ ಅಂದರೆ ಹುದೈಬಿಯಾದಲ್ಲಿ ನಡೆದ ಬೈಅತ್. ಹಿಜ್‍ರಾ 6ನೇ ವರ್ಷ ದ್ಸುಲ್‍ಕಅದ್ ತಿಂಗಳಲ್ಲಿ ಸಾವಿರಕ್ಕೂ ಮಿಕ್ಕಿದ ಸಹಾಬಿಗಳೊಂದಿಗೆ ನಬಿಯವರು ಉಮ್ರಾಕ್ಕೆಂದು ಮಕ್ಕಾಕ್ಕೆ ಹೊರಟು ಹುದೈಬಿಯಾ ಎಂಬಲ್ಲಿಗೆ ತಲುಪಿ ಅಲ್ಲಿ ಬೀಡುಬಿಟ್ಟರು. ಮಕ್ಕಾಕ್ಕೆ ದೂತರನ್ನು ಕಳುಹಿಸಿ, ಯುದ್ಧಕ್ಕೆ ಬಂದುದಲ್ಲ, ಉಮ್ರಾಕ್ಕೆ ಎಂದು ಖುರೈಶಿಗಳಿಗೆ ಸುದ್ದಿ ಮುಟ್ಟಿಸಿದರು. ಆದರೆ ಖುರೈಶಿಗಳು ಅವರ ಬಳಿ ತಲುಪಿದ ನಬಿಯವರ ದೂತನ ಸವಾರಿಯ ಒಂಟೆಯನ್ನೇ ಕೊಂದು ಹಾಕಿದರು. ವಾಪಾಸು ಬಂದ ದೂತನಿಂದ ಖುರೈಶಿಗಳ ದುಂಡಾವರ್ತನೆ ತಿಳಿದಾಗ ಖುರೈಶಿಗಳ ವಿರುದ್ಧ ಯುದ್ಧ ಮಾಡುವುದಾದರೆ ನಾವೆಲ್ಲ ಸಿದ್ಧರಿದ್ದೇವೆ. ಕೆಚ್ಚೆದೆಯಿಂದ ಹೋರಾಡುತ್ತೇವೆ ಎಂದು ಸಹಾಬಿಗಳು ನಬಿಯವರ ಪವಿತ್ರ ಹಸ್ತ ಮುಟ್ಟಿ ಮಾಡಿದ ಪ್ರತಿಜ್ಞೆಯೇ ಬೈಅತ್. ಇದು ಒಂದು ವೃಕ್ಷದ ಅಡಿಯಲ್ಲಿ ನಡೆದಿತ್ತು. ಆದರೆ ಯುದ್ಧ ನಡೆಯದೆ ಮುಸ್ಲಿಮ್-ಖುರೈಶ್‍ಗಳ ನಡುವೆ ಐತಿಹಾಸಿಕ ಸಂಧಾನ ನಡೆಯಿತು. ಹುದೈಬಿಯಾ ಸಂಧಾನವೆಂದು ಇದು ಪ್ರಸಿದ್ಧ. ಈ ಸೂಕ್ತವು ಈ ಪ್ರತ್ಯೇಕ ಘಟನೆಯ ಕುರಿತು ಅವತೀರ್ಣಗೊಂಡಿದ್ದರೂ ಇಮಾಮರೊಂದಿಗೆ ಆಜ್ಞಾನುಸರಣೆಯ ಒಡಂಬಡಿಕೆ ಹಾಗೂ ಅಲ್ಲಾಹು ಮತ್ತು ರಸೂಲರ ಸ್ನೇಹ, ಅದರ ಶಿಷ್ಟಾಚಾರಗಳಲ್ಲಿ ಓರ್ವ ಆತ್ಮಜ್ಞಾನಿಯಾದ ಶೈಖ್‍ರೊಂದಿಗೆ `ಬೈಅತ್' ಮಾಡುವುದೂ ಇದರಲ್ಲಿ ಸೇರುತ್ತದೆ. (ಹಾಶಿಯ: ಸಾವಿ)