Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 25

48:25
هُمُ ٱلَّذِينَ كَفَرُواْ وَصَدُّوكُمۡ عَنِ ٱلۡمَسۡجِدِ ٱلۡحَرَامِ وَٱلۡهَدۡيَ مَعۡكُوفًا أَن يَبۡلُغَ مَحِلَّهُۥۚ وَلَوۡلَا رِجَالٞ مُّؤۡمِنُونَ وَنِسَآءٞ مُّؤۡمِنَٰتٞ لَّمۡ تَعۡلَمُوهُمۡ أَن تَطَـُٔوهُمۡ فَتُصِيبَكُم مِّنۡهُم مَّعَرَّةُۢ بِغَيۡرِ عِلۡمٖۖ لِّيُدۡخِلَ ٱللَّهُ فِي رَحۡمَتِهِۦ مَن يَشَآءُۚ لَوۡ تَزَيَّلُواْ لَعَذَّبۡنَا ٱلَّذِينَ كَفَرُواْ مِنۡهُمۡ عَذَابًا أَلِيمًا ٢٥
ಇವರೇ ಅವಿಶ್ವಾಸ ತಾಳಿದವರು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದವರು ಮತ್ತು ಬಲಿ ಪ್ರಾಣಿಗಳನ್ನು ಅವುಗಳ ನೆಲೆಗೆ ತಲುಪಲು ಬಿಡದವರು. ನಿಮಗೆ ತಿಳಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರು (ಮಕ್ಕಾದಲ್ಲಿ ಇವರ ಜೊತೆ) ಇಲ್ಲದಿರುತ್ತಿದ್ದರೆ, ಅಂದರೆ (ನಿಮಗೆ ಯುದ್ಧಾನುಮತಿ ಸಿಕ್ಕಿದರೆ) ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಅವಿಶ್ವಾಸಿಗಳೊಂದಿಗೆ) ವಧಿಸಿ ಬಿಡುವ ಹಾಗೂ ಮತ್ತು ಅದರಿಂದ ನಿಮಗೆ ದೋಷ ಬರುವ ಅಪಾಯವಿಲ್ಲದಿರುತ್ತಿದ್ದರೆ, (ಮಕ್ಕಾದ ಮೇಲೆ ದಾಳಿ ಮಾಡಲು ನಿಮಗೆ ಅನುಮತಿ ನೀಡಲಾಗುತ್ತಿತ್ತು). ಇದು ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯಲ್ಲಿ ಸೇರಿಸಿಕೊಳ್ಳುವಂತಾಗಲು. ಆ ಸತ್ಯವಿಶ್ವಾಸಿಗಳು (ಅವಿಶ್ವಾಸಿಗಳಿಂದ) ಬೇರ್ಪಟ್ಟಿರುತ್ತಿದ್ದರೆ ಸತ್ಯನಿಷೇಧಿಗಳಿಗೆ ನಾವು ಖಂಡಿತವಾಗಿಯೂ ವೇದನಾಯುಕ್ತ ಶಿಕ್ಷೆ ಕೊಡುತ್ತಿದ್ದೆವು1.
Footnotes
  • [1] ಇದು ಮಕ್ಕಾದ ಮೇಲೆ ದಾಳಿ ಮಾಡಲು ಅನುಮತಿ ನಿರಾಕರಿಸಿದುದರ ಹಿಂದಿನ ಔಚಿತ್ಯದ ವಿವರಣೆ. ಹುದೈಬಿಯಾ ಸಂಧಿ ನಡೆಯುವ ವೇಳೆ ಸತ್ಯವಿಶ್ವಾಸಿಗಳಾದ ಕೆಲವು ಸ್ತ್ರೀ - ಪುರುಷರು ಮಕ್ಕಾದಲ್ಲಿದ್ದರು. ತಮ್ಮ ವಿಶ್ವಾಸವನ್ನು ಬಹಿರಂಗಗೊಳಿಸಲಿಕ್ಕಾಗಲಿ ವಲಸೆ ಹೋಗಲಿಕ್ಕಾಗಲಿ ಅವರಿಗೆ ಸಾಧ್ಯವಿರಲಿಲ್ಲ. ಶತ್ರುಗಳ ಪೀಡನೆಯನ್ನು ಭಯಪಡುತ್ತ ಅವರು ದಿನ ದೂಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಯುದ್ಧ ನಡೆಯುತ್ತಿದ್ದರೆ ಮನಪೂರ್ವಕವಲ್ಲದಿದ್ದರೂ ಅವಿಶ್ವಾಸಿಗಳ ಜತೆಗೆ ಅಲ್ಲಿನ ಮುಸ್ಲಿಮರೂ ವಿಪತ್ತಿಗೆ ಗುರಿಯಾಗುತ್ತಿದ್ದರು.