Kannada Translation

Ayah by Ayah

Tags

Download Links

Kannada Translation translation for Surah Al-Hujurat — Ayah 10

49:10
إِنَّمَا ٱلۡمُؤۡمِنُونَ إِخۡوَةٞ فَأَصۡلِحُواْ بَيۡنَ أَخَوَيۡكُمۡۚ وَٱتَّقُواْ ٱللَّهَ لَعَلَّكُمۡ تُرۡحَمُونَ ١٠
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರು. ಆದುದರಿಂದ ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ನಡೆಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ನೀವು ಅನುಗ್ರಹೀತರಾಗಬಹುದು1.
Footnotes
  • [1] ಪ್ರವಾದಿವರ್ಯ ರು ಒಂದು ಕೂಟಕ್ಕೆ ಹೋದಾಗ ಓರ್ವ ಕಪಟವಿಶ್ವಾಸಿಯು ಪ್ರವಾದಿವರ್ಯ ರು ಸವಾರಿಗೆ ಬಳಸಿದ್ದ ಕತ್ತೆಯನ್ನು ಹೀನೈಸಿ ಮಾತಾಡಿದನು. ಇದರಿಂದ ಕುಪಿತನಾದ ಓರ್ವ ಅನುಯಾಯಿಯು; “ಪ್ರವಾದಿವರ್ಯ ರ ಕತ್ತೆಯ ಉಚ್ಚೆ ಕೂಡಾ ನಿನಗಿಂತ ಪರಿಮಳ ಪೂರ್ಣ” ಎಂದು ಹೇಳಿದರು. ಈ ಕಾರಣದಿಂದ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಯಿತು. ಈ ಪರಸ್ಪರ ಜಗಳವನ್ನು ನಿಲ್ಲಿಸಿ ಕೂಡಲೇ ಸಂಧಾನ ಮಾಡಿಕೊಳ್ಳುವಂತೆ ಆದೇಶ ನೀಡಲಾದ ಈ ಆಯತ್‍ಗಳಲ್ಲಿ ಮುಸ್ಲಿಮರು ಏಕೋದರ ಸಹೋದರರು ಎಂಬ ಉದಾತ್ತ ತತ್ವವನ್ನು ಪ್ರತಿಪಾದಿಸಿದೆ. ಏಕೋದರ ಸಹೋದರರ ನಡುವೆ ಭಿನ್ನಾಭಿಪ್ರಾಯ ತಲೆದೋರಿದರೂ ತಳಮಟ್ಟದ ವೈರಾಗ್ಯ ಬೆಳೆಯುವುದಿಲ್ಲ. ಎಷ್ಟೇ ಹಗೆ ಹುಟ್ಟಿದರೂ ಸುಲಭದಲ್ಲಿ ಮಾಯವಾಗಿ ಒಂದಾಗುತ್ತಾರೆ. ಇದು ಸಾಹೋದರ್ಯದ ಅಬೇಧ್ಯ ನಂಟಿನ ಫಲ. ಇಂತಹ ಅಬೇಧ್ಯ ನಂಟಿನ ಬೆಸುಗೆ ಮುಸ್ಲಿಮರು ಎಲ್ಲಿದ್ದರೂ ಪರಸ್ಪರ ಹೊಂದಿರಬೇಕು ಎಂಬ ಆಶಯವನ್ನು ಇಲ್ಲಿ ಪ್ರಕಟಪಡಿಸಲಾಗಿದೆ. ವಿಶ್ವದ ಯಾವ ಮೂಲೆಯಲ್ಲೇ ಇರುವ ಮುಸ್ಲಿಮನು ನನ್ನ ಸಹೋದರ ಎಂಬ ಭಾವನೆ ಎಷ್ಟು ಮಹತ್ವಪೂರ್ಣದ್ದು!