Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 19

51:19
وَفِيٓ أَمۡوَٰلِهِمۡ حَقّٞ لِّلسَّآئِلِ وَٱلۡمَحۡرُومِ ١٩
ಅವರ ಸೊತ್ತುಗಳಲ್ಲಿ ಬೇಡುವವನಿಗೂ ಬೇಡಲು ತಟಸ್ಥವಿದ್ದವನಿಗೂ ಹಕ್ಕಿರುವುದು1.
Footnotes
  • [1] ಅಪೇಕ್ಷಿಸಿದವರಿಗೆ ಮಾತ್ರವಲ್ಲ, ಮರ್ಯಾದೆ, ಸ್ವಾಭಿಮಾನ, ಸಂಕೋಚ ಅಥವಾ ಇನ್ಯಾವುದೇ ಕಾರಣದಿಂದ ಅಪೇಕ್ಷಿಸದೆ ಕಷ್ಟದಲ್ಲಿ ದಿನದೂಡುವವರನ್ನು ಗುರುತಿಸಿ ಕೊಡುವುದು ಕೂಡಾ ಅಲ್ಲಾಹು ಮೆಚ್ಚುವ ಸದ್ವರ್ತನೆ (ಇಹ್‍ಸಾನ್) ಎಂದು ಇಲ್ಲಿ ಹೇಳಲಾಗಿದೆ. ಅವರ ಸೊತ್ತುಗಳಲ್ಲಿ ಕೇಳಿದವರಿಗೂ ಕೇಳದವರಿಗೂ ಹಕ್ಕು ಇದೆ ಎಂದಿರುವುದು ಗಮನಾರ್ಹ. ಇಬ್ನುಅಬ್ಬಾಸ್‍ರವರ ಪ್ರಕಾರ ಇದು ಝಕಾತ್ ಅಲ್ಲದ ಹಕ್ಕಾಗಿತ್ತು. ಇಮಾಮ್ ಖತಾದ ಹಾಗೂ ಇಬ್ನುಸೀರೀನರ ಪ್ರಕಾರ ಝಕಾತ್ ಎಂದೂ ಅಭಿಪ್ರಾಯವಿದೆ. ತಾನು ನೀಡುತ್ತಿರುವುದು ನನ್ನ ಔದಾರ್ಯವಲ್ಲ, ಪರಂತು, ಅವರ ಹಕ್ಕು ಎಂಬ ಭಾವನೆಯಿಂದ ಕೊಡುವುದು ಉದಾತ್ತ ಮನಸ್ಸಿನ ಭಕ್ತರ ಲಕ್ಷಣ. ಸೃಷ್ಟಿಕರ್ತನಲ್ಲಿರುವ ಬಾಧ್ಯತೆಯನ್ನು ಪೂರೈಸುವುದರೊಂದಿಗೆ ಸಹಜೀವಿಗಳ ಬಾಧ್ಯತೆಗಳನ್ನು ಪೂರೈಸುವವರೇ ನಿಜವಾದ ಧರ್ಮನಿಷ್ಟರು.