Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 56

51:56
وَمَا خَلَقۡتُ ٱلۡجِنَّ وَٱلۡإِنسَ إِلَّا لِيَعۡبُدُونِ ٥٦
ನಾನು ಜಿನ್ನ್‍ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ1.
Footnotes
  • [1] ಇಬಾದತ್ ಎರಡು ವಿಧ. 1. ಅಲ್ಲಾಹನ ವ್ಯವಸ್ಥೆಗೆ ವಿಧೇಯತೆ. ಇದು ದ್ರವ, ಘನ, ಮೂರ್ತ, ಅಮೂರ್ತ, ಸಜೀವಿ, ನಿರ್ಜೀವಿ ಎಂಬ ವ್ಯತ್ಯಾಸವಿಲ್ಲದೆ ಜಗತ್ತಿನ ಸರ್ವ ಸೃಷ್ಟಿಗಳಿಗೂ ಅನ್ವಯವಾಗುತ್ತದೆ. “ಇಷ್ಟವಿದ್ದರೂ ಇಲ್ಲದಿದ್ದರೂ ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸಾಷ್ಟಾಂಗವೆರÀಗುತ್ತವೆ” ಎಂದು ಖುರ್‍ಆನಿನಲ್ಲಿ (13: 15) ಅಲ್ಲಾಹು ಹೇಳಿದ್ದು ಇದನ್ನೇ. ಪ್ರತಿಯೊಂದು ವಸ್ತುವಿನ ಅಸ್ತಿತ್ವ, ಬದಲಾವಣೆ, ಚಲನೆ, ಸ್ಥಿರತೆ, ಹುಟ್ಟು, ಸಾವು ಎಲ್ಲವೂ ಅಲ್ಲಾಹನ ವ್ಯವಸ್ಥೆ. ಈ ವ್ಯವಸ್ಥೆಗೆ ಅವೆಲ್ಲವೂ ವಿಧೇಯರಾಗಲೇಬೇಕಾಗಿದೆ. ವಿದ್ಯುಚ್ಛಕ್ತಿ ತನ್ನ ಕೆಲಸ ನಿರ್ವಹಿಸುವುದು, ಪರಮಾಣುವಿನ ಒಳಗಡೆ ಎಲೆಕ್ಟ್ರೋನ್, ನ್ಯೂಟ್ರೋನ್‍ಗಳು ಸುತ್ತುತ್ತಿರುವುದು, ಅಯಸ್ಕಾಂತವು ಕಬ್ಬಿಣವನ್ನು ಸೆಳೆಯುವುದು, ಕಡಲು ನಿರಂತರ ತೆರೆಗಳನ್ನು ಅಪ್ಪಳಿಸುವುದು, ಭೂಮಿ ತಿರುಗುತ್ತಿರುವುದು, ಚಂದ್ರನು ಭೂಮಿಗೆ ಪ್ರದಕ್ಷಿಣೆ ಬರುತ್ತಿರುವುದು, ಉಳಿದ ಗ್ರಹಗಳು ತನ್ನದೇ ಆದ ಕ್ರಮದಲ್ಲಿ ಪರಿಕ್ರಮಣ, ಪರಿಭ್ರಮಣಗಳಲ್ಲಿ ನಿರತರಾಗಿರುವುದು. ಸಸ್ಯ, ವೃಕ್ಷ, ಲತಾದಿಗಳು ಮೊಳೆತು, ಚಿಗುರಿ, ಹಬ್ಬಿ ಬೆಳೆದು ಸಾಯುವುದು, ಎಲೆಗಳು ಉದುರುವುದು ಮುಂತಾದ ಜಗತ್ತಿನ ಪ್ರತಿಯೊಂದು ಅಣು ರೇಣು ತೃಣ ಕಾಷ್ಟಗಳ ಹುಟ್ಟು ಇರವು, ಚಲನೆ, ಅಂತ್ಯ ಎಲ್ಲವೂ ನಿರ್ಭಂಧಿತವಾಗಿ ಅಲ್ಲಾಹನ ವಿಧಿಗೆ ವ್ಯವಸ್ಥೆಗೆ ಬದ್ಧವಾಗಲೇಬೇಕಾಗಿದೆ. ಈ ಅರ್ಥದಲ್ಲಿ ಇವೆಲ್ಲವೂ ನಡೆಸುತ್ತಿರುವುದು ಇಬಾದತ್. 2. ಇಚ್ಛಾನುಸಾರ ನಿರ್ವಹಿಸುವ ಇಬಾದತ್. ಇದು ಮನುಷ್ಯ ಜಿನ್ನ್, ಮಲಕ್ ಎಂಬ ವಿಶೇಷ ಬುದ್ಧಿಯುಳ್ಳ ಸೃಷ್ಟಿಗಳಿಗೆ ಮಾತ್ರ ಬಾಧ್ಯತೆ. “ನೀವು ನಿಮ್ಮ ಪ್ರಭುವಿಗೆ ಆರಾಧಿಸಿರಿ”, ನೀವು ಅಲ್ಲಾಹನಿಗೆ ಆರಾಧಿಸಿರಿ” ಮುಂತಾದ ಖುರ್‍ಆನಿನ ಆದೇಶಗಳು ಈ ವಿಧದ ಇಬಾದತ್‍ಗಾಗಿದೆ. ಇಲ್ಲಿನ ಈ ಆಯತ್‍ನಲ್ಲಿ ಹೇಳಿದ ಇಬಾದತ್ ಕೂಡಾ ಇದುವೇ. ಇಮಾಮ್ ಮುಜಾಹಿದರು ‘ನನ್ನನ್ನು ಅವರು ಆರಾಧಿಸಲಿಕ್ಕಾಗಿ’ ಎಂಬುದನ್ನು ‘ನನ್ನನ್ನು ಅವರು ಅರಿಯಲಿಕ್ಕಾಗಿ’ ಎಂದು ವ್ಯಾಖ್ಯಾನಿಸಿದ್ದಾರೆ. (ಖುರ್ತುಬಿ 17/55)