Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 6

51:6
وَإِنَّ ٱلدِّينَ لَوَٰقِعٞ ٦
(ಅಂತ್ಯ ದಿನದ) ವಿಧಿಯ ತೀರ್ಪು ಖಂಡಿತವಾಗಿಯೂ ಸಂಭವನೀಯವಾಗಿದೆ1.
Footnotes
  • [1] ಧೂಳೆಬ್ಬಿಸುವ ಗಾಳಿ, ಭಾರವೇರಿದ ಮೇಘಗಳು, ಅನಾಯಾಸ ಚಲಿಸುತ್ತಿರುವ ಹಡಗುಗಳು, ಕಾರ್ಯಗಳನ್ನು ವಿಂಗಡಿಸಿ ನಿರ್ವಹಿಸುವ ಮಲಕ್‍ಗಳು ಎಂಬೀ ನಾಲ್ಕು ವಸ್ತುಗಳ ಮೇಲೆ ಆಣೆ ಹಾಕಿ ಅಲ್ಲಾಹನು ನೀಡುವ ವಾಗ್ದಾನಗಳು ಮತ್ತು ಎಚ್ಚರಿಕೆಗಳನ್ನು ಸುಸ್ಥಿರಗೊಳಿಸಲಾಗಿದೆ. ಮರಣಾನಂತರ ಪ್ರತಿಯೊಬ್ಬರಿಗೂ ಅವರವರ ಗುಣದೋಷಗಳ ಫಲಗಳನ್ನು ನೀಡಲಾಗುವುದೆಂಬುದನ್ನೂ ರುಜುವಾತುಪಡಿಸಲಾಗಿದೆ. ಇವೆಲ್ಲ ಕೇವಲ ಬೆದರಿಕೆಗಳೋ, ಉತ್ಪೇಕ್ಷೆಗಳೋ ಅಲ್ಲ, ಖಂಡಿತವಾಗಿಯೂ ನಡೆಯಲಿರುವ ಸಂಭವಗಳು ಎಂದರ್ಥ. ಅಲ್ಲದೆ ಯಾವ ಹೆಸರನ್ನೆತ್ತಿ ಆಣೆ ಹಾಕಲಾಗಿದೆಯೋ ಆ ವಸ್ತುಗಳ ಸೃಷ್ಟಿಲೀಲೆಗಳ ಬಗ್ಗೆ ಯೋಚಿಸಿ ಅಲ್ಲಾಹನ ಇರವು, ಏಕತ್ವ, ಪರಮಾದ್ಭುತ ನೈಪುಣ್ಯತೆ ಹಾಗೂ ಅವನ ಪರಮಾಧಿಕಾರವನ್ನು ಗ್ರಹಿಸಿಕೊಳ್ಳುವಂತೆ ಸೂಚನೆಯೂ ಇದೆ.