Kannada Translation

Ayah by Ayah

Tags

Download Links

Kannada Translation translation for Surah At-Tur — Ayah 21

52:21
وَٱلَّذِينَ ءَامَنُواْ وَٱتَّبَعَتۡهُمۡ ذُرِّيَّتُهُم بِإِيمَٰنٍ أَلۡحَقۡنَا بِهِمۡ ذُرِّيَّتَهُمۡ وَمَآ أَلَتۡنَٰهُم مِّنۡ عَمَلِهِم مِّن شَيۡءٖۚ كُلُّ ٱمۡرِيِٕۭ بِمَا كَسَبَ رَهِينٞ ٢١
ಸತ್ಯವಿಶ್ವಾಸಿಗಳನ್ನೂ ಅವರನ್ನು ಸತ್ಯವಿಶ್ವಾಸ ದಲ್ಲಿ ಅನುಸರಿಸಿದ ಅವರ ಸಂತಾನಗಳನ್ನೂ ನಾವು ಅವರೊಂದಿಗೆ ಸ್ವರ್ಗದಲ್ಲಿ ಸೇರಿಸುವೆವು1 ಮತ್ತು ನಾವು ಅವರ ಕರ್ಮದಲ್ಲೇನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿಡಲ್ಪಟ್ಟವನಾಗಿದ್ದಾನೆ.
Footnotes
  • [1] ಮುಸ್ಲಿಮ್ ದಂಪತಿಗಳ ಮಕ್ಕಳು ಮುಸ್ಲಿಮರೇ ಆಗಿ ಜನಿಸುವರು. ಆದ್ದರಿಂದ ಅವರಿಗೆ ಪ್ರತ್ಯೇಕ ಶಹಾದತ್ ಹೇಳಿ ವಿದ್ಯುಕ್ತ ಸೇರ್ಪಡೆ ಬೇಕೆಂದಿಲ್ಲ. ಅದೇ ಪ್ರಕಾರ ಅಮುಸ್ಲಿಮ್ ದಂಪತಿಗಳು ಇಸ್ಲಾಮಿಗೆ ಸೇರಿದರೆ ಅವರ ಪ್ರಾಯ ಪೂರ್ತಿಯಾಗದ ಮಕ್ಕಳೂ ಮುಸ್ಲಿಮರಾಗುತ್ತಾರೆ. ಆದ್ದರಿಂದ ಅವರೂ ಪ್ರತ್ಯೇಕ ಶಹಾದತ್ ಹೇಳಬೇಕಾಗಿಲ್ಲ. ಆದರೆ ಇಸ್ಲಾಮಿಗೆ ಸೇರಿದ ಅಮುಸ್ಲಿಮ್ ದಂಪತಿಗಳ ಪ್ರಾಯಪೂರ್ತಿಯಾದ ಮಕ್ಕಳಿಗೆ ತಾಯಿ ತಂದೆಯರ ಸೇರ್ಪಡೆಯಿಂದ ಪ್ರವೇಶಾತಿ ದೊರೆಯುವುದಿಲ್ಲ. ಅವರು ಪ್ರತ್ಯೇಕ ಶಹಾದತ್ ಹೇಳಿ ಸೇರ್ಪಡೆಗೊಳ್ಳಬೇಕು. ಮುಸ್ಲಿಮರ ಮಕ್ಕಳು ಮುಸ್ಲಿಮರಾಗಿಯೇ ಜನಿಸುವರು ಎಂಬುದರಲ್ಲಿ ಸರ್ವಾನುಮತ (ಇಜ್‍ಮಾ) ಇರುವುದಾಗಿ ತುಹ್ಫಾ, ನಿಹಾಯ, ಮುಗ್ನಿ ಮುಂತಾದ ಫಿಕ್ರ್ ಗ್ರಂಥಗಳಲ್ಲಿದೆ.