Kannada Translation

Ayah by Ayah

Tags

Download Links

Kannada Translation translation for Surah At-Tur — Ayah 49

52:49
وَمِنَ ٱلَّيۡلِ فَسَبِّحۡهُ وَإِدۡبَٰرَ ٱلنُّجُومِ ٤٩
ರಾತ್ರೆಯಲ್ಲಿ ಸ್ವಲ್ಪ ಸಮಯವೂ ಮತ್ತು ನಕ್ಷತ್ರಗಳು ಅಸ್ತಮಿಸುವಾಗಲೂ ಅವನ (ಅಲ್ಲಾಹನ) ಪರಿಶು ದ್ಧತೆಯನ್ನು ಪ್ರಕೀರ್ತಿಸಿರಿ1.
Footnotes
  • [1] ತಸ್‍ಬೀಹ್ ಹೇಳಲು ಇಲ್ಲಿ ಮೂರು ಸಮಯಗಳನ್ನು ಹೇಳಿದ್ದು ಆ ಸಮಯಗಳು ತಸ್‍ಬೀಹ್‍ಗೆ ವಿಶೇಷ ಸಮಯಗಳು ಎಂಬುದರಿಂದಾಗಿದೆ. ತಸ್‍ಬೀಹ್ (ದೇವಕೀರ್ತನೆ) ಎಂಬುದಕ್ಕೆ ಮನಸಾ, ವಾಚಾ, ಕಾಯೇನ ನಿರ್ವಹಿಸುವ ಎಲ್ಲ ಉಪಾಸನೆಗಳು ಎಂಬ ಅರ್ಥವೂ ಇರುವುದಾಗಿ ಇಮಾಮ್ ರಾಗಿಬ್ ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ ನಮಾಝ್‍ಗೂ `ತಸ್‍ಬೀಹ್' ಪದ ಬಳಕೆಯಾಗಿದೆ. ಎದ್ದೇಳುವ ಸಮಯ ಅಂದರೆ ನಿಷ್ಠೆಯಿಂದ ಎದ್ದೇಳುವ, ನಮಾಝ್‍ಗಾಗಿ ಎದ್ದೇಳುವ, ಕೂತಲ್ಲಿಂದ ಎದ್ದೇಳುವ ಮುಂತಾದ ಸಂದರ್ಭಗಳಲ್ಲಿ ಎಂದರ್ಥ. ತಸ್‍ಬೀಹ್‍ಗೆ ಯೋಗ್ಯವಾದ ಇನ್ನೊಂದು ಸಮಯವು ರಾತ್ರಿಯ ಒಂದಂಶವೆಂದು ಇಲ್ಲಿ ಹೇಳಲಾಗಿದೆ. ನಕ್ಷತ್ರಗಳು ಅಸ್ತಮಿಸುವ ವೇಳೆ ಅಂದರೆ ಬೆಳಗ್ಗಿನ ಜಾವ ಎಂದು ಉದ್ದೇಶ. ಬೆಳಗ್ಗಿನ ಜಾವದಲ್ಲಿ ಉಷಾಕಾಲದ ಪ್ರಭೆಯಲ್ಲಿ ನಕ್ಷತ್ರಗಳು ಮಂಕಾಗುತ್ತವೆ. ಕೆಲವು ಮಾಯವಾಗುತ್ತವೆ. ಸುಬ್‍ಹ್ ನಮಾಝ್‍ಗೆ ಮೊದಲಿನ ಎರಡು ರಕಅತ್ ಸುನ್ನತ್ ನಮಾಝ್ ಇದರಲ್ಲಿ ಒಳಪಡುತ್ತದೆ. ಪ್ರವಾದಿವರ್ಯ ರು ಈ ನಮಾಝ್‍ಗೆ ಆಸಕ್ತಿ ವಹಿಸುವಷ್ಟು ಬೇರೆ ಸುನ್ನತ್ ನಮಾಝ್‍ಗೆ ಆಸಕ್ತಿ ವಹಿಸಿದ್ದು ನಾನು ಕಾಣಲಿಲ್ಲ ಎಂದಿದ್ದಾರೆ ಆಇಶಾ ಬೀವಿ. (ಬುಖಾರಿ, ಮುಸ್ಲಿಮ್)