Kannada Translation

Ayah by Ayah

Tags

Download Links

Kannada Translation translation for Surah An-Najm — Ayah 38

53:38
أَلَّا تَزِرُ وَازِرَةٞ وِزۡرَ أُخۡرَىٰ ٣٨
ಯಾವನೇ (ಪಾಪದ ಹೊರೆ) ಹೊರುವಾತನು ಇನ್ನೊಬ್ಬನ (ಪಾಪದ) ಹೊರೆ ಹೊರಲಾರನು1.
Footnotes
  • [1] ಇನ್ನೊಬ್ಬನ ಶಿಕ್ಷೆಯನ್ನು ಮತ್ತೊಬ್ಬ ವಹಿಸಿಕೊಳ್ಳುವ ವಿಚಿತ್ರ ನಡವಳಿಕೆಗೆ ಉತ್ತರವಾಗಿ ಬಂದಿರುವುದು ಗಮನಾರ್ಹ. ಒಬ್ಬನ ಪುಣ್ಯಫಲ ಮತ್ತೊಬ್ಬನಿಗೋ ಪಾಪದ ಫಲ ಇನ್ನೊಬ್ಬನಿಗೋ ಹೊರಿಸುವ ಪ್ರಶ್ನೆ ಅಲ್ಲಿ ಇಲ್ಲ ಎಂದಾಗಿದೆ ಸಾರ. ಒಬ್ಬನಿಗೆ ಮತ್ತೊಬ್ಬನಿಂದ ಯಾವ ಉಪಕಾರವೂ ದೊರೆಯದು ಎಂದು ಇದಕ್ಕೆ ಅರ್ಥವಿಲ್ಲ. ಒಬ್ಬನ ಪಾಪ - ಪುಣ್ಯಗಳನ್ನು ಮತ್ತೊಬ್ಬನಿಗೆ ಇಡಿಯಾಗಿ ತೆಗೆದು ಕೊಡುವುದಿಲ್ಲ ಎಂದಾಗಿದೆ ಇಲ್ಲಿನ ತಾತ್ಪರ್ಯ. ಉಪಕಾರ ಹಾಗಲ್ಲ. ಮಹಾತ್ಮರು ಅಲ್ಲಾಹನಲ್ಲಿ ಪ್ರಾರ್ಥಿಸಿ ರಕ್ಷಣೆ ದೊರಕಿಸಿಕೊಡುವುದರಿಂದ ಸ್ವಂತ ಕರ್ಮಫಲ ಮಹಾತ್ಮರಿಗೆ ನಷ್ಟವಾಗುವುದಿಲ್ಲ. ಮನುಷ್ಯನಿಗೆ ತನ್ನ ಕರ್ಮಫಲ ಮಾತ್ರವೇ ಪ್ರಯೋಜನ ಕೊಡುವುದೆಂದು ಯಾರಾದರೂ ಬಗೆದರೆ ಅವನು ಇಜ್‍ಮಾಅನ್ನು ಹರಿದೊಗೆದವನಾಗುವನು ಎಂದು ತಖಿಯುದ್ದೀನ್ ಇಬ್ನುತೈಮಿಯ್ಯ 11 ಆಧಾರಗಳನ್ನು ಉದ್ಧರಿಸಿ ಸಮರ್ಥಿಸಿದ್ದಾರೆ. ಅದೇ ಪ್ರಕಾರ ಮೃತರಿಗೆ ಖುರ್‍ಆನ್ ಓದಿ ಹದ್‍ಯಾ ಮಾಡಿದರೆ ಮೃತರಿಗೆ ತಲುಪುವ ವಿಚಾರಕ್ಕೂ ಕೂಡ ಈ ಆಯತ್ ಎದುರಾಗುವುದಿಲ್ಲ. ಇಮಾಮ್ ಮಾಲಿಕ್, ಇಮಾಮ್ ಅಬೂ ಹನೀಫಾ ಹಾಗೂ ಇಮಾಮ್ ಅಹ್ಮದ್ ಬಿನ್ ಹಂಬಲ್ ಎಂಬೀ ಮೂರು ಮದ್ಸ್‍ಹಬ್‍ನ ವಿದ್ವಾಂಸರೂ ಮೃತರಿಗೆ ಪುಣ್ಯ ತಲುಪುತ್ತದೆ ಎಂದು ಪ್ರಸ್ತಾಪಿಸಿದ್ದಾರೆ. ಶಾಫಿಈ ಮದ್ಸ್‍ಹ ಬಿನ ಅನೇಕ ಇಮಾಮ್‍ಗಳೂ ಇದೇ ಅಭಿಪ್ರಾಯದವರು. 'ತಲುಪಲಾರದು' ಎಂಬ ಇಮಾಮ್ ಶಾಫಿಯವರ ಅಭಿಪ್ರಾಯವನ್ನು ``ಬೇಷರತ್ತಾಗಿ ಅಲ್ಲ; ಓದುವ ಮೊದಲು ಮೃತರಿಗಾಗಿ ಎಂಬ ನಿಯ್ಯತ್ ಮಾಡದಿದ್ದರೆ ಅಥವಾ ಓದಿದ ನಂತರ ``ಇಂತವರಿಗೆ ತಲುಪಿಸು'' ಎಂದು ದುಆ ಮಾಡದಿದ್ದರೆ ತಲುಪಲಾರದು ಎಂದಾಗಿದೆ ಇಮಾಮ್ ಶಾಫಿಯವರ ಮಾತಿನ ಅರ್ಥವೆಂದು ಇಮಾಮ್ ನವವೀ ಸಹಿತ ಅನೇಕ ಇಮಾಮ್‍ಗಳು ವ್ಯಾಖ್ಯಾನಿಸಿದ್ದಾರೆ. ``ತನ್ನ ಸುಕೃತ್ಯದ ಪುಣ್ಯಫಲವನ್ನು ಇತರರಿಗೆ ದಾನ ಮಾಡುವ ಅವಕಾಶ ಇದೆಯೆಂಬುದು ಅಹ್ಲುಸ್ಸುನ್ನಃದ ಮದ್‍ಹಬ್'' ಎಂದು ಇಮಾಮ್ ಶಅರಾನೀ ತನ್ನ ವಿೂರhೂನ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.