Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 13

55:13
فَبِأَيِّ ءَالَآءِ رَبِّكُمَا تُكَذِّبَانِ ١٣
ಮತ್ತೆ ನೀವೆರಡು ವಿಭಾಗದವರು ನಿಮ್ಮ ಪ್ರಭುವಿನ ಯಾವ ಉಪಕಾರವನ್ನು ಸುಳ್ಳಾಗಿಸುತ್ತಿರುವಿರಿ?1
Footnotes
  • [1] ಈ ಅಧ್ಯಾಯದಲ್ಲಿ ಈ ಪ್ರಶ್ನೆಯನ್ನು 31 ಬಾರಿ ಪುನರಾವರ್ತಿಸಲಾಗಿದೆ. ಪ್ರಸ್ತಾಪಿಸಲಾಗುವ ವಿಷಯ ಹೆಚ್ಚು ಗಂಭೀರ ಹಾಗೂ ಚಿಂತನೀಯವಾಗಿರುವುದರಿಂದ ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವುದೇ ಪುನರಾವರ್ತನೆಯ ಉದ್ದೇಶ. ಒಂದೊಂದೇ ಅನುಗ್ರಹವನ್ನು ಮುಂದಿಟ್ಟು, `ಇದನ್ನು ನೀವು ಸುಳ್ಳಾಗಿಸುವಿರಾ?' ಎಂದು ಪದೇ ಪದೇ ಪ್ರಶ್ನಿಸುವಾಗ ಸಹಜವಾಗಿಯೇ ಹೃದಯ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಜಿನ್ನ್‍ಗಳಿಗೆ ಈ ಸೂಕ್ತಗಳನ್ನು ಓದಿ ಕೇಳಿಸ ಲಾದಾಗ ಪ್ರತಿ ಸಲವೂ ‘ಲಾ ಬಿ-ಶಯಿಇನ್ ಮಿನ್ ನಿಅಮಿಕ ರಬ್ಬನಾ ನುಕದ್ದ್ಸಿಬು ಫಲಕಲ್ ಹಮ್ದ್’ (ನಮ್ಮ ಪ್ರಭು, ನಿನ್ನ ಅನುಗ್ರಹಗಳಲ್ಲಿ ಏನನ್ನೂ ನಾವು ಸುಳ್ಳಾಗಿಸುವುದಿಲ್ಲ. ನಿನಗೆ ಸ್ತುತಿ) ಎಂದು ಹೇಳಿದ್ದಾಗಿ ವರದಿಯಾಗಿದೆ. (ತುರ್ಮುದಿ, ಬಝ್ಝೂರ್) ಎರಡು ವಿಭಾಗ ಎಂದರೆ ಮನುಷ್ಯರು ಮತ್ತು ಜಿನ್ನ್‍ಗಳು ಉದ್ದೇಶ.