Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 39

55:39
فَيَوۡمَئِذٖ لَّا يُسۡـَٔلُ عَن ذَنۢبِهِۦٓ إِنسٞ وَلَا جَآنّٞ ٣٩
ಯಾವನೇ ಮಾನವನೊಂದಿಗೂ ಜಿನ್ನ್‍ನೊಂದಿ ಗೂ ಅವನ ಪಾಪಗಳ ಕುರಿತು ಆ ದಿನ ಪ್ರಶ್ನಿಸಲಾಗುವುದಿಲ್ಲ1.
Footnotes
  • [1] ಪಾಪದ ಬಗ್ಗೆ ಅಂದು ಜಿನ್ನ್, ಇನ್ಸ್‍ಗಳಲ್ಲಿ ಪ್ರಶ್ನಿಸಲಾಗುವುದಿಲ್ಲ. ಅಂದರೆ ನೀವು ಪಾಪ ಮಾಡಿದ್ದು ಹೌದೋ ಅಲ್ಲವೋ ಎಂಬ ಪ್ರಶ್ನೆ ಅಲ್ಲಿ ಇಲ್ಲ ಎಂದರ್ಥ. ಯಾಕೆಂದರೆ ಪಾಪಿಗಳು ಪಾಪವೆಸಗಿದ್ದನ್ನು ಖಚಿತಪಡಿಸುವ ಪುರಾವೆಗಳು ಧಾರಾಳ ಇವೆ. ಮತ್ತೆ ಅಲ್ಲಿ ವಿಚಾರಣೆ ಇರುವುದು ಯಾಕೆ ಪಾಪ ಮಾಡಿದಿರಿ? ಯಾಕೆ ನನ್ನ ಎಚ್ಚರಿಕೆಯನ್ನು ಧಿಕ್ಕರಿಸಿದಿರಿ? ಈ ದಿನದ ಬಗ್ಗೆ ನಿಮಗೆ ನೆನಪು ಮಾಡಿಕೊಟ್ಟರೂ ಯಾಕೆ ನಿರ್ಲಕ್ಷ್ಯ ತೋರಿದಿರಿ ಎಂಬ ಪ್ರಶ್ನೆಗಳ ಮೂಲಕವಾಗಿದೆ. ಅಥವಾ ಸಮಾಧಿಯಿಂದ ಹೊರಡುವ ಆ ದಿನ ವಿಚಾರಣೆಯಿಲ್ಲ. ವಿಚಾರಣೆ ನಡೆಯುವುದು ಮಹ್‍ಶರಾದಲ್ಲಿ ಎಲ್ಲರೂ ಒಟ್ಟು ಸೇರಿದ ನಂತರ ಎಂದೂ ಅರ್ಥೈಸಬಹುದು.