Kannada Translation

Ayah by Ayah

Tags

Download Links

Kannada Translation translation for Surah Al-Waqi'ah — Ayah 75

56:75
۞ فَلَآ أُقۡسِمُ بِمَوَٰقِعِ ٱلنُّجُومِ ٧٥
ಖಂಡಿತ ನಾನು ನಕ್ಷತ್ರಗಳ ಅಸ್ತಮಯ ಸ್ಥಾನಗಳ ಆಣೆಯಿಡುತ್ತೇನೆ1.
Footnotes
  • [1] ಲಾ ಉಖ್‍ಸಿಮು ಎಂಬುದರಲ್ಲಿರುವ `ಲಾ' ನಿಷೇದಾರ್ಥಕವಾದ `ಲಾ' ಅಲ್ಲ. ಖಂಡಿತ ಎಂಬ ಅರ್ಥ ಬರಲು ಉಖ್‍ಸಿಮ್ ಎಂಬ ಪದಕ್ಕೆ `ಲಾ' ಸೇರಿಸುವುದು ಅರಬಿಯಲ್ಲಿರುವ ಒಂದು ವಿಶಿಷ್ಟ ಶೈಲಿ. `ಅನ್ನುಜೂಮ್' ಎಂಬುದಕ್ಕೆ `ಕಂತುಗಳು' ಎಂದೂ ಅರ್ಥ ನೀಡಿದವರಿದ್ದಾರೆ. ಖುರ್‍ಆನ್ ಕಂತು ಕಂತುಗಳಾಗಿ ಅವತೀರ್ಣವಾಗಿದ್ದು ಆ ಕಂತುಗಳು ಇಲ್ಲಿ ಉದ್ದೇಶ ಎಂದಾಗಿದೆ ಅವರ ವ್ಯಾಖ್ಯಾನ. ಈ ಅರ್ಥ ನೀಡುವಾಗ `ವಾಖಿಅï' ಎಂಬುದಕ್ಕೆ ಸಂದರ್ಭಗಳು ಎಂಬ ಅರ್ಥ ನೀಡಬೇಕು. ನುಜೂಮ್‍ಗೆ ನಕ್ಷತ್ರಗಳು ಎಂಬ ಅರ್ಥ ಕೊಡುವಾಗ `ಮವಾಖಿಅï'ಗೆ ಅವು ಅಸ್ತಮಿಸುವ ಸ್ಥಾನಗಳು ಎಂಬ ಅರ್ಥ ಬರುತ್ತದೆ.