Kannada Translation

Ayah by Ayah

Tags

Download Links

Kannada Translation translation for Surah Al-Waqi'ah — Ayah 79

56:79
لَّا يَمَسُّهُۥٓ إِلَّا ٱلۡمُطَهَّرُونَ ٧٩
ಪರಿಶುದ್ಧರಲ್ಲದೆ ಬೇರಾರೂ ಇದನ್ನು ಸ್ಪರ್ಶಿಸಲಾರರು1 .
Footnotes
  • [1] `ಕಿತಾಬುನ್ ಮಕ್‍ನೂನ್' ಅಂದರೆ `ಲೌಹುಲ್ ಮಹ್ಫೂಳ್' ಎಂದು ವ್ಯಾಖ್ಯಾನಿಸಿದವರ ಪ್ರಕಾರ `ಶುದ್ಧರಲ್ಲದೆ ಅದನ್ನು ಸ್ಪರ್ಶಿಸಲಾರರು' ಎಂಬುದರ ತಾತ್ಪರ್ಯ ಪರಿಶುದ್ಧಾತ್ಮರಾದ ಮಲಕ್‍ಗಳು ಮಾತ್ರ ಅದನ್ನು ಸ್ಪರ್ಶಿಸುವರು ಎಂದಾಗುತ್ತದೆ. ಇನ್ನೊಂದು ವಿಭಾಗ ಮುಫಸ್ಸಿರ್‍ಗಳ ವ್ಯಾಖ್ಯಾನ ಪ್ರಕಾರ 'ಕಿತಾಬುನ್‍ಮಕ್‍ನೂನ್' ಅಂದರೆ ಖುರ್‍ಆನ್ ಗ್ರಂಥ. ಹಾಗಾಗುವಾಗ 79ನೇ ಆಯತ್‍ಗೆ ಶುದ್ಧರಲ್ಲದೆ ಅದನ್ನು ಸ್ಪರ್ಶಿಸಬಾರದು ಎಂದು ಅರ್ಥ ಬರುತ್ತದೆ. 78ನೇ ಆಯತ್‍ಗೆ ಲೌಹುಲ್ ಮಹ್ಫೂಳ್ ಎಂದೇ ಅರ್ಥವಾದರೂ ಕೂಡಾ 79ರ ತಾತ್ಪರ್ಯ ಖುರ್‍ಆನ್ ಗ್ರಂಥವನ್ನು ಶುದ್ಧಿ ಇಲ್ಲದೆ ಮುಟ್ಟಬಾರದು ಎಂದೇ ಅರ್ಥವೆಂದೂ ಹೇಳಿದ ಮುಫಸ್ಸಿರ್‍ಗಳಿದ್ದಾರೆ. `ಅದರಂತೆ ಶುದ್ಧರಲ್ಲದೆ ಅದನ್ನು ಸ್ಪರ್ಶಿಸುವುದಿಲ್ಲ' ಎಂಬ ವಾಕ್ಯವು ಸ್ಪರ್ಶಿಸಕೂಡದು ಎಂಬ `ನಿಷೇಧಾತ್ಮಕ' ಅರ್ಥವನ್ನು ಒಳಗೊಂಡಿದೆಯೆಂದು ಹಲವು ಕುರ್‍ಆನ್ ವ್ಯಾಖ್ಯಾನಗಾರರು ಸ್ಪಷ್ಟಪಡಿಸುತ್ತಾರೆ. ಉದಾ : ಅಲ್‍ಬಕರ ಅಧ್ಯಾಯದ 228ನೇ ಸೂಕ್ತ `ತಲಾಕ್ ಹೇಳಲ್ಪಟ್ಟ ಮಹಿಳೆಯರು ಮೂರು ಆರ್ತವ ಕಾಲದವರೆಗೆ ಕಾಯುವರು'' ಎಂದಿದೆ. ಇಲ್ಲಿ ಸೂಕ್ತದಲ್ಲಿರುವ `ಯತರಬ್ಬಸ್‍ನ' ಎಂಬ ಪದಕ್ಕೆ `ಕಾಯುವರು' ಎಂದು ನೇರ ಭಾಷಾರ್ಥವಿದ್ದರೂ ಇದು `ಕಾಯಬೇಕು' ಎಂಬ ಆಜ್ಞೆಯನ್ನು ಒಳ ಗೊಂಡಿದೆ. ಅದರಂತೆ `ಲಾ ಯಮಸ್ಸುಹೂ' ಎಂಬ ಪದದ ನೇರ ಭಾಷಾರ್ಥ `ಸ್ಪರ್ಶಿಸುವುದಿಲ್ಲ' ಎಂದಾದರೂ `ಸ್ಪರ್ಶಿಸಕೂಡದು' ಎಂಬ ನಿಷೇಧವನ್ನು ಒಳಗೊಂಡಿದೆಯೆಂದು ಹಲವು ವ್ಯಾಖ್ಯಾನಗಾರರು ಸ್ಪಷ್ಟಪಡಿಸುತ್ತಾರೆ. ಒಟ್ಟಿನಲ್ಲಿ ಕಿತಾಬುನ್ ಮಕ್‍ನೂನ್ ಬಗ್ಗೆಯಿರುವ ಎರಡು ಅಭಿಪ್ರಾಯಗಳನ್ನೂ `ಲಾ ಯಮಸ್ಸುಹೂ' ಎಂಬಲ್ಲಿರುವ ಎರಡು ಅಭಿಪ್ರಾಯಗಳನ್ನೂ ಮುಂದಿಟ್ಟಾಗ ಈ ಕೆಳಗಿನ ಎರಡು ಅರ್ಥಗಳು ಬರುತ್ತವೆ. 1. ಲವ್‍ಹುಲ್ ಮಹ್‍ಫೂಳನ್ನು ಶುದ್ಧಾತ್ಮರಾದ ಮಲಕ್‍ಗಳಲ್ಲದೆ ಸ್ಪರ್ಶಿಸುವುದಿಲ್ಲ. 2. ಖುರ್‍ಆನ್ ಬರೆದುದನ್ನು ಶುದ್ಧರಲ್ಲದೆ ಸ್ಪರ್ಶಿಸಕೂಡದು. ಇಮಾಮ್ ಶಾಫಿಈ ಯವರು ಈ ಆಯತ್‍ನಿಂದಲೇ ಅಶುದ್ಧಿಯುಳ್ಳವರು ಖುರ್‍ಆನ್ ಬರೆದುದನ್ನು ಸ್ಪರ್ಶಿಸಕೂಡದೆಂದು ಸಂಶೋಧಿಸಿರಬಹುದು. ಅಥವಾ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಮ್‍ರ್ ಬಿನ್ ಹಝಮ್ ರವರೊಡನೆ `ಅಶುದ್ಧಿಯುಳ್ಳವರು ಖುರ್‍ಆನ್ ಸ್ಪರ್ಶಿಸಕೂಡದೆಂದು' ಹೇಳಿದ್ದನ್ನು ಆಧಾರವಾಗಿಟ್ಟುಕೊಂಡೂ ಆಗಿರಬಹುದು. ಶುದ್ಧಿಯೊಂದಿಗೆ ಸ್ಪರ್ಶಿಸುವುದು ಗೌರವದ ಸೂಚನೆಯಾಗಿರುತ್ತದೆ. ಅಶುದ್ಧಿಯೊಂದಿಗೆ ಸ್ಪರ್ಶಿಸುವುದು ತಾತ್ಸಾರತೆಯ ಸೂಚನೆಯಾಗಿರುತ್ತದೆ. ಆದಕಾರಣ ಅಶುದ್ಧಿಯೊಂದಿಗೆ ಸ್ಪರ್ಶಿಸುವುದು ಅನುವದನೀಯವಲ್ಲ. (ತಫ್‍ಸೀರುಲ್ ಕಬೀರ್ 29/168)