Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 27

57:27
ثُمَّ قَفَّيۡنَا عَلَىٰٓ ءَاثَٰرِهِم بِرُسُلِنَا وَقَفَّيۡنَا بِعِيسَى ٱبۡنِ مَرۡيَمَ وَءَاتَيۡنَٰهُ ٱلۡإِنجِيلَۖ وَجَعَلۡنَا فِي قُلُوبِ ٱلَّذِينَ ٱتَّبَعُوهُ رَأۡفَةٗ وَرَحۡمَةٗۚ وَرَهۡبَانِيَّةً ٱبۡتَدَعُوهَا مَا كَتَبۡنَٰهَا عَلَيۡهِمۡ إِلَّا ٱبۡتِغَآءَ رِضۡوَٰنِ ٱللَّهِ فَمَا رَعَوۡهَا حَقَّ رِعَايَتِهَاۖ فَـَٔاتَيۡنَا ٱلَّذِينَ ءَامَنُواْ مِنۡهُمۡ أَجۡرَهُمۡۖ وَكَثِيرٞ مِّنۡهُمۡ فَٰسِقُونَ ٢٧
ಅವರ ಬಳಿಕ ನಾವು ಒಬ್ಬರ ನಂತರ ಒಬ್ಬರಂತೆ ಸಂದೇಶವಾಹಕರನ್ನು ಕಳುಹಿಸಿದೆವು ಮತ್ತು ಬಳಿಕ ಮರ್ಯಮರ ಪುತ್ರ ಈಸಾರನ್ನು ಕಳುಹಿಸಿದೆವು. ಅವರಿಗೆ ಇಂಜೀಲನ್ನು ದಯಪಾಲಿಸಿ ದೆವು. ಅವರ ಅನುಯಾಯಿಗಳ ಹೃದಯಗಳಲ್ಲಿ ನಾವು ಅನುಕಂಪ ಮತ್ತು ಕರುಣೆಯನ್ನಿರಿಸಿದೆವು. ಸನ್ಯಾಸವನ್ನು ಅವರು ತಾವೇ ಸೃಷ್ಟಿಸಿಕೊಂಡರು1. ಅಲ್ಲಾಹನ ಸಂಪ್ರೀತಿಯ ಅಭಿಲಾಷೆಯಿಂದ ಅವರೇ ಈ ಆಚಾರವನ್ನು ಆರಂಭಿಸಿಕೊಂಡರೇ ಹೊರತು ನಾವು ಅದನ್ನವರಿಗೆ ಕಡ್ಡಾಯಗೊಳಿಸಿರಲಿಲ್ಲ. ಆದರೆ ಅವರು ಅದನ್ನು ಪಾಲಿಸಬೇಕಾದ ರೀತಿಯಲ್ಲಿ ಪಾಲಿಸಲಿಲ್ಲ. ಅವರ ಪೈಕಿ ಸತ್ಯವನ್ನು ಸ್ವೀಕರಿಸಿದವರಿಗೆ ಅವರ ಪ್ರತಿಫಲವನ್ನು ನಾವು ದಯಪಾಲಿಸಿದೆವು.ಆದರೆ ಅವರಲ್ಲಿ ಹೆಚ್ಚಿನವರು ದುರ್ಮಾರ್ಗಿಗಳಾಗಿರುತ್ತಾರೆ.
Footnotes
  • [1] ಕ್ರೈಸ್ತ ಧರ್ಮದಲ್ಲಿ ಸನ್ಯಾಸ ಜೀವನವು ಆ ಧರ್ಮದ ಮೂಲ ಆಚಾರವಾಗಿರದೆ ಮುಂದೆ ತನ್ನಷ್ಟಕ್ಕೆ ಅವರೇ ನಿರ್ಮಿಸಿಕೊಂಡು ಅದನ್ನು ಪಾಲಿಸಬೇಕಾದ ಕ್ರಮದಲ್ಲಿ ಪಾಲಿಸದೆ ಹಾಳುಗೆಡಹಿದರು ಎಂದಿಲ್ಲಿ ಪ್ರಸ್ತಾಪಿಸಲಾಗಿದೆ. ಕ್ರಿ. ಶ. 3ನೇ ಶತಮಾನದ ಕೊನೆಯಲ್ಲಿ ಪೌಲೋಸನು ರಾಜಮರ್ಧನಕ್ಕೆ ಹೆದರಿ ಸನ್ಯಾಸ ಜೀವನ ಆರಂಭಿಸಿದನು ಎಂದು ಕ್ರಿ. ಶ. 1883ರಲ್ಲಿ ಪ್ರಕಟವಾದ ``ಚರ್ಚ್‍ಗಳ ಚರಿತ್ರೆ'' (ಅಲ್-ಖರೀದತುನ್ನಫೀಸಾ, ಫೀ ತಾರೀಖಿಲ್ ಕನೀಸಾ) ಎಂಬ ಗ್ರಂಥದ ಪ್ರಥಮ ಆವೃತ್ತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಗ್ರಂಥ ಬರೆದವರು ಓರ್ವ ಕ್ರೈಸ್ತ ಪಾದ್ರಿ ಎಂಬುದು ಗಮನಾರ್ಹ. ಕ್ರೈಸ್ತ ಧರ್ಮ ದಲ್ಲಿ ಸನ್ಯಾಸ ಆರಂಭಗೊಂಡದ್ದು ಮರ್ಧನಕ್ಕೆ ಹೆದರಿಯಾಗಿತ್ತು ಎಂದು ಇಬ್ನು ಅಬೀಹಾತಂ, ಇಬ್ನು ಜರೀರ್ ಉದ್ಧರಿಸುವ ಒಂದು ಹದೀಸ್‍ನಲ್ಲೂ ಇದೆ.