Kannada Translation

Ayah by Ayah

Tags

Download Links

Kannada Translation translation for Surah Al-Mujadila — Ayah 22

58:22
لَّا تَجِدُ قَوۡمٗا يُؤۡمِنُونَ بِٱللَّهِ وَٱلۡيَوۡمِ ٱلۡأٓخِرِ يُوَآدُّونَ مَنۡ حَآدَّ ٱللَّهَ وَرَسُولَهُۥ وَلَوۡ كَانُوٓاْ ءَابَآءَهُمۡ أَوۡ أَبۡنَآءَهُمۡ أَوۡ إِخۡوَٰنَهُمۡ أَوۡ عَشِيرَتَهُمۡۚ أُوْلَٰٓئِكَ كَتَبَ فِي قُلُوبِهِمُ ٱلۡإِيمَٰنَ وَأَيَّدَهُم بِرُوحٖ مِّنۡهُۖ وَيُدۡخِلُهُمۡ جَنَّٰتٖ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَاۚ رَضِيَ ٱللَّهُ عَنۡهُمۡ وَرَضُواْ عَنۡهُۚ أُوْلَٰٓئِكَ حِزۡبُ ٱللَّهِۚ أَلَآ إِنَّ حِزۡبَ ٱللَّهِ هُمُ ٱلۡمُفۡلِحُونَ ٢٢
ಅಲ್ಲಾಹು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿ ಸುವ ಒಂದು ಜನತೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಸ್ಪರ್ಧಿಸುವವರೊಂದಿಗೆ ಮೈತ್ರಿ ಬೆಳೆಸುವುದನ್ನು ತಾವೆಂದೂ ಕಾಣಲಾರಿರಿ1. ಅಂಥವರು ಅವರ ತಂದೆಯೋ, ಪುತ್ರ ರೋ ಸಹೋದರರೋ ಮತ್ತು ಆಪ್ತಬಂಧುಗಳೋ ಆಗಿದ್ದರೂ ಸರಿಯೇ. ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸವನ್ನು ದಾಖಲು ಮಾಡಿರುತ್ತಾನೆ. ಮತ್ತು ತನ್ನ ಕಡೆಯಿಂದ ಒಂದು ಆತ್ಮ ಚೈತನ್ಯದ ಮೂಲಕ ಅವರಿಗೆ ರಟ್ಟೆಬಲ ನೀಡಿರುತ್ತಾನೆ. ಅವನು ಅವರನ್ನು, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು, ಅಲ್ಲಾಹು ಅವರನ್ನು ತೃಪ್ತಿಪಟ್ಟಿರುವನು ಮತ್ತು ಅವರು ಅಲ್ಲಾಹನನ್ನೂ ತೃಪ್ತಿಪಟ್ಟಿರುವರು. ಅವರು ಅಲ್ಲಾಹನ ಪಕ್ಷದವರು, ತಿಳಿಯಿರಿ, ಅಲ್ಲಾಹನ ಪಕ್ಷದವರೇ ವಿಜಯಿಗಳು.
Footnotes
  • [1] ಅಲ್ಲಾಹು, ಮತ್ತು ರಸೂಲರ ವಿರುದ್ಧ ಸ್ಪರ್ಧಿಸುವವರು ಎಂಬುದರ ಉದ್ದೇಶ. ಕಪಟ ವಿಶ್ವಾಸಿಗಳು, ಯಹೂದರು, ಪಾಪಿಗಳು, ಅಕ್ರಮಿಗಳು, ಮತ್ತು ನೂತನವಾದಿಗಳಾಗಿದ್ದಾರೆ. (ರೂಹುಲ್ ಬಯಾನ್) ಆದ್ದರಿಂದ ಇಂಥವರೊಂದಿಗೆ ಅಲ್ಲಾಹು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿಸಿದ ಸತ್ಯವಿಶ್ವಾಸಿಗಳು ಯಾವುದೇ ಸ್ನೇಹ ಸಂಬಂಧವನ್ನು ಬಳಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಾಹನ ಶತ್ರುಗಳಲ್ಲಿ ಪ್ರೀತಿ ಮತ್ತು ಈಮಾನ್ ಒಟ್ಟುಗೂಡಲಾರವು. ಒಬ್ಬನಲ್ಲಿ ಪ್ರೀತಿ ಇದ್ದರೆ ಅವನ ಶತ್ರುವನ್ನು ಪ್ರೀತಿಸಲು ಸಾಧ್ಯವಿಲ್ಲ. (ರಾಝಿ : 29-276) ಒಬ್ಬನ ಈಮಾನ್ ಭದ್ರವಾಗಿದ್ದು ಅವನ ತೌಹೀದ್ ನಿರ್ಮಲವಾಗಿದ್ದರೆ ಆತ ಬಿದ್‍ಅತ್‍ಗಾರನ ಸಹವಾಸ ಮಾಡಲಾರ. ಅವನ ಮೇಲೆ ವೈರ ಹುಟ್ಟುವುದು. ಬಿದ್‍ಅತ್‍ಗಾರನ ಸಹವಾಸದಿಂದ ಧರ್ಮದ ಮಾಧುರ್ಯ ಅಳಿಯುವುದು, ಹೃದಯದಿಂದ ಈಮಾನಿನ ಪ್ರಕಾಶ ಮಂಕಾಗುವುದು. (ಮದಾರಿಕುತ್ತನ್‍ಝೀಲ್)