Kannada Translation

Ayah by Ayah

Tags

Download Links

Kannada Translation translation for Surah Al-Mujadila — Ayah 8

58:8
أَلَمۡ تَرَ إِلَى ٱلَّذِينَ نُهُواْ عَنِ ٱلنَّجۡوَىٰ ثُمَّ يَعُودُونَ لِمَا نُهُواْ عَنۡهُ وَيَتَنَٰجَوۡنَ بِٱلۡإِثۡمِ وَٱلۡعُدۡوَٰنِ وَمَعۡصِيَتِ ٱلرَّسُولِۖ وَإِذَا جَآءُوكَ حَيَّوۡكَ بِمَا لَمۡ يُحَيِّكَ بِهِ ٱللَّهُ وَيَقُولُونَ فِيٓ أَنفُسِهِمۡ لَوۡلَا يُعَذِّبُنَا ٱللَّهُ بِمَا نَقُولُۚ حَسۡبُهُمۡ جَهَنَّمُ يَصۡلَوۡنَهَاۖ فَبِئۡسَ ٱلۡمَصِيرُ ٨
ಗೂಢಾಲೋಚನೆ ನಡೆಸುವುದನ್ನು ವಿರೋಧಿಸಲ್ಪಟ್ಟ ಒಂದು ವಿಭಾಗ ಜನರನ್ನು ತಾವು ನೋಡಲಿಲ್ಲವೇ? ಅವರು ಮತ್ತೆ ಅದೇ ವಿರೋಧಿಸಲ್ಪಟ್ಟ ಕೃತ್ಯದ ಕಡೆಗೆ ಮರಳುತ್ತಾರೆ. ಅವರು ಪಾಪ, ಅತಿರೇಕ ಹಾಗೂ ದೂತರೊಂದಿಗಿರುವ ಧಿಕ್ಕಾರದಿಂದ ಪರಸ್ಪರ ಗೂಢಾಲೋಚನೆ ನಡೆಸುತ್ತಾರೆ. ಅವರು ತಮ್ಮ ಬಳಿಗೆ ಬಂದಾಗ ಅಲ್ಲಾಹನು ತಮಗೆ ಸಲಾಮ್ ಹೇಳಿರದ ರೀತಿಯಲ್ಲಿ ತಮಗೆ ಸಲಾಮ್ ಹೇಳುತ್ತಾರೆ ಮತ್ತು ನಮ್ಮ ಈ ಮಾತುಗಳಿಗಾಗಿ ಅಲ್ಲಾಹನು ನಮಗೆ ಶಿಕ್ಷೆ ನೀಡುವುದಿಲ್ಲವೇಕೆ ಎಂದು ಅವರು ಪರಸ್ಪರ ಕೇಳಿಕೊಳ್ಳುತ್ತಾರೆ1. ಅವರಿಗೆ ನರಕವೇ ಸಾಕು. ಅವರು ಅದರಲ್ಲಿ ಕರಟುವರು. ಅವರ ಪರ್ಯವಸಾನ ಬಹಳ ನಿಕೃಷ್ಟ.
Footnotes
  • [1] ``ಅಲ್ಲಾಹು ಅಭಿವಂದನೆ ಮಾಡದ್ದನ್ನು ಅವರು ಅಭಿವಂದನೆ ಮಾಡುತ್ತಾರೆ'' ಎಂಬುದು ಯಹೂದಿಗಳ ಒಂದು ದುಷ್ಟ ಪ್ರವರ್ತಿಯ ಅನಾವರಣವಾಗಿದೆ. ಅಸ್ಸಲಾಮು ಅಲೈಕುಂ ಎಂಬುದಾಗಿದೆ ಅಲ್ಲಾಹನು ಕಲಿಸಿದ ಅಭಿವಂದನೆ. ಆದರೆ ಯಹೂದಿಗಳು `ಅಸ್ಸಾಮು ಅಲೈಕುಂ' ಎಂದು ನಬಿಯವರಿಗೆ ಹೇಳುತ್ತಿದ್ದರು. ನಿಮಗೆ ಸಾವು ಬರಲಿ ಎಂದರ್ಥ. `ಅಸ್ಸಲಾಮು ಅಲೈಕುಂ' ಹೇಳಿದಂತೆಯೇ ಇದೂ ಕೇಳುತ್ತಿರುವುದರಿಂದ ಅವರ ದುಷ್ಟ ಬುದ್ಧಿ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ಯಹೂದಿಗಳು ಒಳಗೊಳಗೇ ಖುಷಿ ಪಡುತ್ತಿದ್ದರು. ಅವರು ತಮ್ಮ ತಮ್ಮಲ್ಲಿ ಹೇಳಿ ಪರಿಹಾಸ್ಯ ಮಾಡುತ್ತಿದ್ದರು. ಇಂತಹ ಪರಿಹಾಸ್ಯ ಮಾಡಿದರೂ ಕೂಡಾ ನಮಗೆ ದೈವ ಶಿಕ್ಷೆ ದೊರೆಯುತ್ತಿಲ್ಲ. ಆದ್ದರಿಂದ ನಾವೇ ಸತ್ಯದವರು ಎಂದವರು ಹೆಮ್ಮೆ ಪಟ್ಟುಕೊಳ್ಳುತ್ತಲೇ ಇದ್ದರು. ಅವರಿಗೆ ದೇವ ಶಿಕ್ಷೆಯಾಗಿ ಜಹನ್ನಮ್ ಸಿದ್ಧವಿದೆ ಎಂದು ಅಲ್ಲಾಹನು ಇಲ್ಲಿ ಸ್ಪಷ್ಟಪಡಿಸಿರುತ್ತಾನೆ.