Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 15

59:15
كَمَثَلِ ٱلَّذِينَ مِن قَبۡلِهِمۡ قَرِيبٗاۖ ذَاقُواْ وَبَالَ أَمۡرِهِمۡ وَلَهُمۡ عَذَابٌ أَلِيمٞ ١٥
ಇವರ ಸ್ಥಿತಿಯು, ಇವರಿಗಿಂತ ಸ್ವಲ್ಪವೇ ಕಾಲ ಹಿಂದೆ ಗತಿಸಿಹೋದ ಜನರಂತಿದೆ. ಅವರ ಕೃತ್ಯಗಳ ದುಷ್ಪರಿಣಾಮವನ್ನು ಅವರು ಸವಿದುಬಿಟ್ಟರು1. ಇವರಿಗೆ ವೇದನಾಯುಕ್ತ ಶಿಕ್ಷೆ ಕಾದಿದೆ.
Footnotes
  • [1] ಬನೂ ನಳೀರ್ ಸಂಭವಕ್ಕೆ ಮೊದಲು ಅನ್ಯಾಯವೆಸಗಿದ್ದ ಇನ್ನೊಂದು ವಿಭಾಗದವರ ಮೇಲೆ ಅಲ್ಲಾಹನು ಕ್ರಮ ಕೈಗೊಂಡಿದ್ದರ ಬಗ್ಗೆ ಪ್ರಸ್ತಾಪ. ಇದು ಮಕ್ಕಾ ಮುಶ್ರಿಕರಿಗೆ ಬದ್‍ರ್‍ನಲ್ಲಿ ತಟ್ಟಿದ ಅನಾಹುತ ಎಂದಾಗಿದೆ ಕೆಲವು ಮುಫಸ್ಸಿರ್‍ಗಳ ವ್ಯಾಖ್ಯಾನ. ಬನೂ ಕೈನುಕಾಅ ಎಂಬ ಯಹೂದಿ ಗೋತ್ರವೊಂದನ್ನು ನಬಿಯವರು ಗಡಿಪಾರು ಮಾಡಿಸಿದ್ದರು. ಇದು ಬನೂನಳೀರ್ ಸಂಭವಕ್ಕೆ ಮೊದಲಾಗಿತ್ತು. ಈ ಘಟನೆಯಾಗಿದೆ ಉದ್ದೇಶ ಎಂದು ಬೇರೆ ಕೆಲವರ ಅಭಿಪ್ರಾಯವಾಗಿದೆ. ಇಬ್ನ್‍ಕಸೀರ್ ಇದಕ್ಕೆ ಒತ್ತು ನೀಡಿದ್ದಾರೆ.