Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 2

59:2
هُوَ ٱلَّذِيٓ أَخۡرَجَ ٱلَّذِينَ كَفَرُواْ مِنۡ أَهۡلِ ٱلۡكِتَٰبِ مِن دِيَٰرِهِمۡ لِأَوَّلِ ٱلۡحَشۡرِۚ مَا ظَنَنتُمۡ أَن يَخۡرُجُواْۖ وَظَنُّوٓاْ أَنَّهُم مَّانِعَتُهُمۡ حُصُونُهُم مِّنَ ٱللَّهِ فَأَتَىٰهُمُ ٱللَّهُ مِنۡ حَيۡثُ لَمۡ يَحۡتَسِبُواْۖ وَقَذَفَ فِي قُلُوبِهِمُ ٱلرُّعۡبَۚ يُخۡرِبُونَ بُيُوتَهُم بِأَيۡدِيهِمۡ وَأَيۡدِي ٱلۡمُؤۡمِنِينَ فَٱعۡتَبِرُواْ يَٰٓأُوْلِي ٱلۡأَبۡصَٰرِ ٢
ಗ್ರಂಥದವರಾದ ಸತ್ಯನಿಷೇಧಿಗಳನ್ನು ಪ್ರಥಮ ಗಡೀಪಾರಿನಲ್ಲಿ ಅವರ ಮನೆಗಳಿಂದ ಹೊರ ಹಾಕಿದವನು ಅವನೇ. ಅವರು ಹೊರಟು ಬರುವರೆಂದು ನೀವು ಭಾವಿಸಿರಲಿಲ್ಲ. ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ಪ್ರತಿರೋಧಿಸಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಊಹಿಸದ ಕಡೆಯಿಂದ ಅಲ್ಲಾಹ್ ಅವರ ಹತ್ತಿರ ಬಂದನು1. ಅವನು ಅವರ ಹೃದಯದಲ್ಲಿ ಭೀತಿಯನ್ನು ಹಾಕಿದನು. ಅವರು ಸ್ವತಃ ಕೈಗಳಿಂದಲೂ ಸತ್ಯ ವಿಶ್ವಾಸಿಗಳ ಕೈಗಳಿಂದಲೂ ತಮ್ಮ ಮನೆಗಳನ್ನು ಹಾಳುಗೆಡಹಿದ್ದರು. ಆದುದರಿಂದ ಕಣ್ಣುಳ್ಳವರೇ ನೀವು ಗುಣ ಪಾಠ ಕಲಿಯಿರಿ.
Footnotes
  • [1] ‘ಅಲ್ಲಾಹನು ಅವರ ಹತ್ತಿರ ಬಂದನು’ ಎಂಬುದು ಅಲಂಕಾರಿಕ ಮಾತು. ಅಲ್ಲಾಹನ ಶಿಕ್ಷೆ ಅವರಿಗೆ ಬಂತು ಎಂದರ್ಥ. ತಮ್ಮ ಭದ್ರಕೋಟೆಯಲ್ಲಿ ತಾವು ಸುರಕ್ಷಿತರಾಗಬಹುದೆಂದು ಅವರು ಭಾವಿಸಿದ್ದರು. ಅವರು ಸ್ವಯಂ ಹೊರಬರುವರೆಂದು ಭಾವಿಸಲು ಮುಸ್ಲಿಮರಿಗೆ ಯಾವುದೇ ಕಾರಣವಿರಲಿಲ್ಲ. ಆದರೆ ಅಲ್ಲಾಹನು ಅವರ ಹೃದಯಗಳಲ್ಲಿ ಭಯಾಶಂಕೆಯನ್ನು ಸೃಷ್ಟಿಸಿದ್ದೇ ಅವರು ಹೊರಬರಲು ಕಾರಣ. ಮುಸ್ಲಿಮರ ಯಾವುದೇ ಅಸ್ತ್ರ ಬಲದಿಂದಲ್ಲ.