Kannada Translation

Ayah by Ayah

Tags

Download Links

Kannada Translation translation for Surah As-Saf — Ayah 10

61:10
يَٰٓأَيُّهَا ٱلَّذِينَ ءَامَنُواْ هَلۡ أَدُلُّكُمۡ عَلَىٰ تِجَٰرَةٖ تُنجِيكُم مِّنۡ عَذَابٍ أَلِيمٖ ١٠
ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರದ ಬಗ್ಗೆ ನಿಮಗೆ ತಿಳಿಸಿಕೊಡಲೇ?1
Footnotes
  • [1] ಸತ್ಯವಿಶ್ವಾಸ ಹಾಗೂ ಅಲ್ಲಾಹನ ಮಾರ್ಗದಲ್ಲಿನ ಹೋರಾಟವನ್ನು ಇಲ್ಲಿ ವ್ಯಾಪಾರವೆಂದು ಕರೆಯಲಾಗಿದೆ. ವ್ಯಾಪಾರವೆಂದರೆ ಲಾಭದಾಸೆಯಿಂದ ಒಂದು ವಸ್ತುವಿಗೆ ಬದಲಾಗಿ ಇನ್ನೊಂದು ವಸ್ತುವನ್ನು ಪಡೆಯುವುದು. ಅರ್ಥಾತ್ ಯಾರಾದರೂ ಸತ್ಯವಿಶ್ವಾಸವಿರಿಸಿ ತನ್ನ ತನು-ಧನದಿಂದ ಹೋರಾಡಿದರೆ ತನ್ನ ಪ್ರಭುವಿನ ಬಳಿಯ ವಿಶಿಷ್ಟ ಕೊಡುಗೆಯ ಪ್ರಾಪ್ತಿ ಹಾಗೂ ಭಯಾನಕ ಶಿಕ್ಷೆಯಿಂದ ರಕ್ಷಣೆಯನ್ನು ಪಡೆಯುತ್ತಾನೆ.