Kannada Translation

Ayah by Ayah

Tags

Download Links

Kannada Translation translation for Surah As-Saf — Ayah 14

61:14
يَٰٓأَيُّهَا ٱلَّذِينَ ءَامَنُواْ كُونُوٓاْ أَنصَارَ ٱللَّهِ كَمَا قَالَ عِيسَى ٱبۡنُ مَرۡيَمَ لِلۡحَوَارِيِّـۧنَ مَنۡ أَنصَارِيٓ إِلَى ٱللَّهِۖ قَالَ ٱلۡحَوَارِيُّونَ نَحۡنُ أَنصَارُ ٱللَّهِۖ فَـَٔامَنَت طَّآئِفَةٞ مِّنۢ بَنِيٓ إِسۡرَٰٓءِيلَ وَكَفَرَت طَّآئِفَةٞۖ فَأَيَّدۡنَا ٱلَّذِينَ ءَامَنُواْ عَلَىٰ عَدُوِّهِمۡ فَأَصۡبَحُواْ ظَٰهِرِينَ ١٤
ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿರಿ, ಮರ್ಯಮರ ಪುತ್ರ ಈಸಾ ಹವಾರಿಗಳೊಡನೆ (ಶಿಷ್ಯರೊಂದಿಗೆ) ‘ಅಲ್ಲಾಹನ ಕಡೆಗೆ ಕರೆ ನೀಡುವಲ್ಲಿ ನನ್ನ ಸಹಾಯಕರು ಯಾರಿದ್ದಾರೆ?’ ಎಂದು ಹೇಳಿದ್ದಂತೆ. ಹವಾರಿಗಳು ಹೇಳಿದರು; ನಾವು ಅಲ್ಲಾಹನ ಸಹಾಯಕರು. ಆಗ ಇಸ್ರಾಈಲ ಸಂತತಿಗಳ ಪೈಕಿ ಒಂದು ವಿಭಾಗ ಸತ್ಯವಿಶ್ವಾಸವನ್ನು ಸ್ವೀಕರಿಸಿತು ಮತ್ತು ಇನ್ನೊಂದು ವಿಭಾಗವು ನಿರಾಕರಿಸಿತು. ತರುವಾಯ ನಾವು ಸತ್ಯವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ಧ ಬಲ ನೀಡಿದೆವು. ಹಾಗೆ ಅವರು ವಿಜಯಿಗಳಾಗಿ ಬಿಟ್ಟರು1.
Footnotes
  • [1] `ಹವಾರಿ' ಬಗ್ಗೆ 3 : 52ನೇ ಆಯತ್‍ನ ವ್ಯಾಖ್ಯಾನದಲ್ಲಿ ವಿವರಿಸಲಾಗಿದೆ. ಈಸಾ ನಬಿಯವರನ್ನು ಒಂದು ವಿಭಾಗ ಅಂಗೀಕರಿಸಿದರು. ಯಹೂದಿಗಳು ಧಿಕ್ಕರಿಸಿದರು. ಅಂಗೀಕರಿಸಿದವರು ಅಲ್ಲಾಹನ ಸಹಾಯಕ್ಕೆ ಅರ್ಹರಾದರು. ಆದ್ದರಿಂದ ಸತ್ಯವಿಶ್ವಾಸಿಗಳೇ ನೀವು ಕೂಡಾ ಅಲ್ಲಾಹನ ಧರ್ಮಕ್ಕೆ ನೆರವಾದರೆ (ನಿಷ್ಟರಾದರೆ) ಅಲ್ಲಾಹ್ ನಿಮಗೆ ನೆರವಾಗುತ್ತಾನೆ ಎಂಬ ಉಪದೇಶ ಕೂಡಾ ಇದರಲ್ಲಿ ನಮಗೆ ಇದೆ.