Kannada Translation

Ayah by Ayah

Tags

Download Links

Kannada Translation translation for Surah As-Saf — Ayah 6

61:6
وَإِذۡ قَالَ عِيسَى ٱبۡنُ مَرۡيَمَ يَٰبَنِيٓ إِسۡرَٰٓءِيلَ إِنِّي رَسُولُ ٱللَّهِ إِلَيۡكُم مُّصَدِّقٗا لِّمَا بَيۡنَ يَدَيَّ مِنَ ٱلتَّوۡرَىٰةِ وَمُبَشِّرَۢا بِرَسُولٖ يَأۡتِي مِنۢ بَعۡدِي ٱسۡمُهُۥٓ أَحۡمَدُۖ فَلَمَّا جَآءَهُم بِٱلۡبَيِّنَٰتِ قَالُواْ هَٰذَا سِحۡرٞ مُّبِينٞ ٦
ಮರ್ಯಮರ ಪುತ್ರ ಈಸಾ ಹೇಳಿದ ಸಂದರ್ಭ (ಸ್ಮರಿಸಿರಿ) “ಇಸ್ರಾಈಲ್ ಸಂತತಿಗಳೇ, ನಾನು, ನನಗಿಂತ ಮೊದಲು ಬಂದಿರುವ ತೌರಾತನ್ನು ದೃಢೀಕರಿಸುವವನಾಗಿಯೂ1 ನನ್ನ ಬಳಿಕ ಬರಲಿರುವ ಅಹ್ಮದ್2 ಎಂಬ ಹೆಸರಿನ ಓರ್ವ ದೂತರ ಕುರಿತು ಸುವಾರ್ತೆ ನೀಡುವವನಾಗಿಯೂ ನಿಮ್ಮ ಕಡೆಗೆ ಅಲ್ಲಾಹನಿಂದ ಕಳುಹಿಸಲಾದ ದೂತನಾಗಿರುತ್ತೇನೆ”. ಅಂತೆಯೇ, ಅವರು ಸುಸ್ಪಷ್ಟ ನಿದರ್ಶನದೊಂದಿಗೆ ಅವರ ಬಳಿಗೆ ಹೋದಾಗ ‘ಇದು ಸ್ಪಷ್ಟ ಜಾಲ ವಿದ್ಯೆ’ ಎಂದು ಅವರು ಹೇಳಿ ಬಿಟ್ಟರು3.
Footnotes
  • [1] ತೌರಾತನ್ನು ದೃಢಪಡಿಸುವುದು ಅಂದರೆ ಅದು ಅಲ್ಲಾಹನ ಗ್ರಂಥ ಹೌದೆಂದೂ ಅದರಲ್ಲಿರುವುದೆಲ್ಲ ಸತ್ಯವೆಂದೂ ವಿಶ್ವಾಸವಿಡುತ್ತೇನೆ ಎಂದರ್ಥ. ನನ್ನ ಶರೀಅತ್‍ನಲ್ಲಿ ತೌರಾತ್‍ನ ವಿಧಿಗಳಿಗಿಂತ ಭಿನ್ನವಾದ ಯಾವುದೇ ವಿಧಿ ಇರಲಾರದು ಎಂದು ಇದಕ್ಕೆ ಅರ್ಥವಿಲ್ಲ. ಕೆಲವು ಬದಲಾವಣೆಗಳನ್ನು ಅವರು ಮಾಡಿದ್ದರು ಎಂದು ಖುರ್‍ಆನ್ (3:50) ನಲ್ಲೇ ಇದೆ. ತೌರಾತಿನ ಕೆಲವು ನಿಯಮಗಳನ್ನು ಈಸಾ ನಬಿಯವರು ರದ್ದುಪಡಿಸಿದ್ದರು.
  • [2] ಅಹ್ಮದ್ ಅಂದರೆ ಮುಹಮ್ಮದ್ ನಬಿ . ನನಗೆ ಅಹ್ಮದ್ ಎಂಬ ಹೆಸರೂ ಇದೆ ಎಂಬ ನಬಿ ಮಾತು ಬುಖಾರಿಯಲ್ಲಿರುವ ಹದೀಸ್‍ನಲ್ಲಿದೆ. ಅಲ್ಲದೆ ನಬಿಯವರ ನಂತರ ಬೇರೆ ನಬಿ ಇಲ್ಲ. ಆದ್ದರಿಂದ ಬೈಬಲ್‍ನಲ್ಲಿ ಯೇಸು ಪ್ರಸ್ತಾಪಿಸಿದ್ದು ಮುಹಮ್ಮದ್ ನಬಿಯವರ ಬಗ್ಗೆ ಎಂಬುದು ಸ್ಪಷ್ಟ. ಈಸಾ ನಬಿ ಯವರ ಶಿಷ್ಯರಲ್ಲೊಬ್ಬರಾದ ಬರ್ನಾಬಾಸ್ ಬಗ್ಗೆ ಹೊಸ ಒಡಂಬಡಿಕೆಯಲ್ಲಿ ಪ್ರಸ್ತಾಪವಿದೆ. (ಅಪೋಸ್ತಲರ ಕೃತ್ಯಗಳು ಎಂಬ ಕೃತಿಯಲ್ಲಿ 4, 9, 11, 13, 14, 15 ಎಂಬೀ ಅಧ್ಯಾಯಗಳನ್ನು ನೋಡಿರಿ). ಕ್ರೈಸ್ತ ಧರ್ಮದಲ್ಲಿ ಬಹಳ ಸ್ಥಾನವಿರುವ ಈ ವ್ಯಕ್ತಿ ಬರೆದ ಒಂದು ಬೈಬಲ್ ಬರ್ನಾಬಾಸರ ಬೈಬಲ್ ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಅವರು ಯೇಸು ಹೇಳಿದ ಪ್ರವಾದಿ ಮುಹಮ್ಮದ್ ನಬಿಯವರೇ ಆಗಿರುವರೆಂದು ಅನೇಕ ಕಡೆಗಳಲ್ಲಿ ದಾಖಲಿಸಿದ್ದಾರೆ. ಇಂದು ಕ್ರೈಸ್ತರ ವಶವಿರುವ ನಿಜವಾದ ಬೈಬಲ್‍ನ ಪಳೆಯುಳಿಕೆಗಳಲ್ಲೂ ಕೂಡಾ ಖುರ್‍ಆನಿನ ಈ ಪ್ರಸ್ತಾಪವನ್ನು ಪುಷ್ಠೀಕರಿಸುವ ಅನೇಕ ಸಾಕ್ಷ್ಯಾಧಾರಗಳು ಇವೆ.
  • [3] ಇಲ್ಲಿ ಜನರು ಪ್ರವಾದಿ ಈಸಾ ರ ಕೈಯಲ್ಲಿ ಪ್ರಕಟವಾದ ಪವಾಡಗಳನ್ನು ಜಾಲವಿದ್ಯೆಯೆಂದು ಕರೆದಿದ್ದಾರೆ. 6. ಅರ್ಥಾತ್ ಅಲ್ಲಾಹನ ಪ್ರವಾದಿಯನ್ನು ಇಂದ್ರಜಾಲಿಯೆಂದೂ ಅಲ್ಲಾಹನಿಂದ ಅವತೀರ್ಣಗೊಂಡ ಪುರಾವೆಗಳನ್ನು ಇಂದ್ರಜಾಲವೆಂದೂ ಕರೆಯುವ ಮೂಲಕ ಅಲ್ಲಾಹನ ಮೇಲೆ ಸುಳ್ಳನ್ನು ಹೆಣೆಯುವುದು.