Kannada Translation

Ayah by Ayah

Tags

Download Links

Kannada Translation translation for Surah Al-Jumu'ah — Ayah 11

62:11
وَإِذَا رَأَوۡاْ تِجَٰرَةً أَوۡ لَهۡوًا ٱنفَضُّوٓاْ إِلَيۡهَا وَتَرَكُوكَ قَآئِمٗاۚ قُلۡ مَا عِندَ ٱللَّهِ خَيۡرٞ مِّنَ ٱللَّهۡوِ وَمِنَ ٱلتِّجَٰرَةِۚ وَٱللَّهُ خَيۡرُ ٱلرَّٰزِقِينَ ١١
ಅವರು ಒಂದು ವ್ಯಾಪಾರವನ್ನೋ, ಮನರಂಜನೆ ಯನ್ನೋ ಕಂಡಾಗ ಅದರೆಡೆಗೆ ಧಾವಿಸಿ ಹೋ ದರು ಮತ್ತು ನಿಮ್ಮನ್ನು ನಿಂತಲ್ಲೇ ಉಪೇಕ್ಷಿಸಿ ಬಿಟ್ಟರು. ತಾವು ಹೇಳಿರಿ, ಅಲ್ಲಾಹನ ಬಳಿ ಇರು ವುದು ವ್ಯಾಪಾರಕ್ಕಿಂತಲೂ ಮನರಂಜನೆಗಿಂ ತಲೂ ಉತ್ತಮವಾಗಿದೆ. ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ1.
Footnotes
  • [1] ಆ ಕಾಲದಲ್ಲಿ ಮೊದಲು ನಮಾಝ್ ಆಮೇಲೆ ಖುತ್ಬಾ ಎಂಬ ಕ್ರಮ ಅನುಸರಿಸಲಾಗುತ್ತಿತ್ತು. ಹಾಗೆ ಒಂದು ಜುಮುಆ ದಿನ ಖುತ್ಬಾದಲ್ಲಿದ್ದಾಗ ಮದೀನಾಕ್ಕೆ ಸರಕು ಪೂರೈಸುವ ವರ್ತಕರ ತಂಡ ಆಗಮಿಸಿತು. ದಿನಸಿ ಮತ್ತು ಆಹಾರ ವಸ್ತುಗಳನ್ನು ತರುವ ಆ ತಂಡದ ಬಳಿ ಜನ ಧಾವಿಸಿ ಸರಕು ಖರೀದಿಸುತ್ತಿದ್ದರು. ಸ್ವಲ್ಪ ಹೊತ್ತು ಬಿಟ್ಟರೆ ಸರಕುಗಳು ಖಾಲಿಯಾಗುವ ಸಂಭವ ಇರುವುದರಿಂದ ಎಲ್ಲರೂ ತ್ವರೆಮಾಡಿ ಧಾವಿಸುವುದು ರೂಢಿಯಾಗಿತ್ತು. ಅದೇ ಗಡಿಬಿಡಿಯಲ್ಲಿ ಖುತ್ಬಾ ನಡೆಯುತ್ತಿರುವ ಪರಿವೆಯಿಲ್ಲದೆ ಸಹಾಬಿಗಳು ಎದ್ದು ವ್ಯಾಪಾರಿ ಸರಕುಗಳತ್ತ ಧಾವಿಸಿಬಿಟ್ಟರು. ಅಬೂಬಕರ್ ಉಮರ್ ಮುಂತಾದ 12 ಮಂದಿ ಮಾತ್ರ ಹೋಗದೆ ಉಳಿದರು. ಆ ಸಂದರ್ಭದಲ್ಲಾಗಿತ್ತು ಈ ಆಯತ್‍ನ ಅವತೀರ್ಣ. ವ್ಯಾಪಾರಿ ತಂಡ ತಲುಪಿದೆ ಎಂಬ ಸುದ್ದಿ ಮುಟ್ಟಿಸುವ ಸಲುವಾಗಿ ತಂಡದವರು ಚೆಂಡೆ ಬಡಿಯುವ ರೂಢಿ ಇತ್ತು. `ವಿನೋದ' ಎಂದು ಆಯತ್‍ನಲ್ಲಿ ಹೇಳಿರುವುದು ಇದನ್ನಾಗಿದೆ. ನಬಿಯವರು ಉಪದೇಶ ಮಾಡುತ್ತಿರುವಾಗ ಎಡೆಯಲ್ಲಿ ಎದ್ದು ಹೋದುದು ಸಂಗತವಲ್ಲವೆಂದೂ ಅದಕ್ಕಿಂತ ಅಲ್ಲಾಹನಿಂದ ದೊರೆಯುವ ಪುಣ್ಯ ಎಷ್ಟೋ ಪಾಲು ವಾಸಿಯೆಂದೂ ಇಲ್ಲಿನ ತಾತ್ಪರ್ಯ. ಇಂತಹ ಪರಿಸ್ಥಿತಿ ತಲೆದೋರಲು ಕಾರಣವೇನೆಂದರೆ, ಅದು ಹಿಜ್‍ರಾದ ಆರಂಭ ಕಾಲವಾಗಿತ್ತು. ಹಲವರು ಇಸ್ಲಾಮೀ ಶರೀಅತಿನ ಶಿಷ್ಟಾಚಾರಗಳ ಬಗ್ಗೆ ಸರಿಯಾಗಿ ಗ್ರಹಿಸಿರದ ಕಾಲವಾಗಿತ್ತು. ಮಾತ್ರವಲ್ಲ, ಅಂದು ಮದೀನ ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಜೀವನಾವಶ್ಯಕ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿದ್ದುವು. ಇಂತಹ ಪರಿಸ್ಥಿತಿಯಲ್ಲಿ ವಸ್ತುಗಳನ್ನು ಬೇರೆಯವರು ಖರೀದಿಸಿ ಮುಗಿದುಬಿಟ್ಟರೆ ಹಸಿವೆಯಿಂದ ಬಳಲಬಹುದೆ ಎಂಬ ಬಲವಾದ ಭಯಾಶಂಕೆಯು ಅವರನ್ನು ಕಾಡಿದ್ದು ಸಹಜವಾಗಿದೆ. ಆದರೆ ಉನ್ನತ ವ್ಯಕ್ತಿತ್ವಗಳಾದ ಹಝ್ರತ್ ಅಬೂಬಕ್ರ್, ಉಮರ್ ಮುಂತಾz ಸ್ವರ್ಗ ವಾಗ್ದಾನ ಮಾಡಲ್ಪಟ್ಟ ಸಹಾಬಿಗಳು ಅಲ್ಲಿಂದ ಕದಲಲಿಲ್ಲವೆಂಬುದೂ ಗಮನಾರ್ಹ. ಇಂತಹ ಕಾರಣವಿರುವುದರಿಂದಲೇ ಈ ವರ್ತನೆಯ ಹೆಸರಲ್ಲಿ ಅಲ್ಲಾಹನು ನರಕ ಶಿಕ್ಷೆಯನ್ನೋ ಇನ್ನಿತರ ಶಿಕ್ಷಾಕ್ರಮಗಳನ್ನೋ ಎಚ್ಚರಿಕೆಯಾಗಿ ನೀಡದೆ ಕೇವಲ ತರಬೇತಿ ಕೋಡುವ ಶೈಲಿಯಲ್ಲಿ ತಪ್ಪನ್ನು ತೋರಿಸಿ ಸಲಹೆ-ಸೂಚನೆಗಳನ್ನು ಕೊಟ್ಟು ಭೋದಿಸಲಾಗಿದೆ. (ರೂಹುಲ್ ಮಆನಿ 28/94) ಆದ್ದರಿಂದಲೇ ಇಲ್ಲಿ ತರಬೇತಿಯ ಕೊರತೆಯೇ ಪ್ರಸ್ತುತ ಘಟನೆಗೆ ಕಾರಣವಾಗಿತ್ತೇ ವಿನಃ ಈಮಾನಿನ ದೌರ್ಬಲ್ಯವೋ ಉದ್ದೇಶ ಪೂರ್ವಕವಾಗಿ ಪರಲೋಕಕ್ಕಿಂತ ಇಹಲೋಕಕ್ಕೆ ಪ್ರಾಮುಖ್ಯತೆ ನೀಡುವ ಮನಸ್ಥಿತಿಯೋ ಆಗಿರಲಿಲ್ಲವೆಂದು ವ್ಯಕ್ತ.