Kannada Translation

Ayah by Ayah

Tags

Download Links

Kannada Translation translation for Surah Al-Jumu'ah — Ayah 2

62:2
هُوَ ٱلَّذِي بَعَثَ فِي ٱلۡأُمِّيِّـۧنَ رَسُولٗا مِّنۡهُمۡ يَتۡلُواْ عَلَيۡهِمۡ ءَايَٰتِهِۦ وَيُزَكِّيهِمۡ وَيُعَلِّمُهُمُ ٱلۡكِتَٰبَ وَٱلۡحِكۡمَةَ وَإِن كَانُواْ مِن قَبۡلُ لَفِي ضَلَٰلٖ مُّبِينٖ ٢
ಅವನೇ ನಿರಕ್ಷರಿಗಳ ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ನಿಯೋಗಿಸಿದವನು. ಅವರು ಅವರಿಗೆ ಅವನ ಸೂಕ್ತಗಳನ್ನು ಓದಿ ಹೇಳು ತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ತತ್ವಜ್ಞಾನವನ್ನು ಕಲಿಸುತ್ತಾರೆ. ಅದಕ್ಕಿಂತ ಮುಂಚೆ ಅವರು ಸ್ಪಷ್ಟ ಪಥಭ್ರಷ್ಟತೆಗೆ ಒಳಗಾಗಿದ್ದರು1.
Footnotes
  • [1] ಅಕ್ಷರಾಭ್ಯಾಸ ಇಲ್ಲದವರು ಎಂದಾಗಿದೆ `ಉಮ್ಮಿಯ್ಯೂನ್' ಎಂಬುದರ ಅರ್ಥ. ಅಂದಿನ ಅರಬರಲ್ಲಿ ಹೆಚ್ಚಿನವರು ಅಕ್ಷರಾಭ್ಯಾಸ ಇಲ್ಲದವರಾಗಿದ್ದರು. ಅವರಿಂದಲೇ ಬಂದ ನಬಿ ಎಂದಿರುವುದು ಅವರಿಗೆ ನಬಿಯವರ ಬಗ್ಗೆ ಚೆನ್ನಾಗಿ ಗೊತ್ತಿರುವ ಅವರೊಂದಿಗೇ ಒಡನಾಟದಲ್ಲಿದ್ದ ವ್ಯಕ್ತಿ ಎಂದು ಸೂಚಿಸಲು. ಆದ್ದರಿಂದ ನಬಿಯವರ ಮೇಲೆ ತಪ್ಪು ಕಲ್ಪನೆಗೆ ಅವಕಾಶವಿರಲಿಲ್ಲ. `ಉಮ್ಮಿಯ್ಯೂನ್‍ಗಳಿಂದ ನಿಯೋಜಿಸಲಾಗಿದೆ' ಎಂದರೆ ಅವರಿಗೆ ಮಾತ್ರ ಎಂದು ತಪ್ಪು ಕಲ್ಪನೆಗೆ ಅವಕಾಶವಿಲ್ಲವೆಂದು 3ನೇ ಆಯತ್ ಸ್ಪಷ್ಟಪಡಿಸುತ್ತಿದೆ. ಉಮ್ಮಿಯ್ಯಿ (ನಿರಕ್ಷರಿ) ಎಂಬ ವಿಶೇಷಣ ಉಳಿದವರ ಪಾಲಿಗೆ ಕೊರತೆಯಾದರೂ ನಬಿಯವರ ಪಾಲಿಗೆ ಘನತೆ ಎಂದು ಜ್ಞಾನಿಗಳು ಉಲ್ಲೇಖಿಸಿದ್ದಾರೆ. ಖುರ್‍ಆನ್ ನಬಿಯವರ ಸ್ವಸೃಷ್ಟಿಯಲ್ಲ, ದೇವವಾಣಿ ಎಂಬುದಕ್ಕೆ ನಬಿಯವರ ಅನಕ್ಷರತೆ ಒಂದು ಮಹತ್ವದ ಪುರಾವೆಯಾಗಿದೆ. ಇಡೀ ಮಾನವಕುಲಕ್ಕೆ ದಾರಿದೀಪವಾದ ಒಂದು ದೇವಗ್ರಂಥಕ್ಕೆ ಪ್ರಬಲ ಸಾಕ್ಷಿಯಾಗಿರುವ ಅವರ ಉಮ್ಮಿಯ್ಯಿ ವಿಶೇಷಣವು ಅವರ ಪಾಲಿಗೆ ಘನತೆಯೆನ್ನುವುದು ಸ್ಪಷ್ಟ.