Kannada Translation

Ayah by Ayah

Tags

Download Links

Kannada Translation translation for Surah Al-Jumu'ah — Ayah 5

62:5
مَثَلُ ٱلَّذِينَ حُمِّلُواْ ٱلتَّوۡرَىٰةَ ثُمَّ لَمۡ يَحۡمِلُوهَا كَمَثَلِ ٱلۡحِمَارِ يَحۡمِلُ أَسۡفَارَۢاۚ بِئۡسَ مَثَلُ ٱلۡقَوۡمِ ٱلَّذِينَ كَذَّبُواْ بِـَٔايَٰتِ ٱللَّهِۚ وَٱللَّهُ لَا يَهۡدِي ٱلۡقَوۡمَ ٱلظَّٰلِمِينَ ٥
ತೌರಾತಿನ (ಅನುಸರಣೆಯ) ಹೊಣೆ ಹೊರಿಸಲ್ಪಟ್ಟು, ತದನಂತರ ಅದರ ಹೊಣೆಗಾರಿಕೆಯನ್ನು ಹೊರದೆ ಇರುವವರ ಉದಾಹರಣೆಯು ಗ್ರಂಥಗಳನ್ನು ಹೊತ್ತುಕೊಂಡ ಕತ್ತೆಯಂತಿದೆ1. ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದ ಜನತೆಯ ಉಪಮೆ ಬಹಳ ನಿಕೃಷ್ಟ. (ಇಂತಹ) ಅಕ್ರಮಿಗಳಾದ ಜನತೆಗೆ ಅಲ್ಲಾಹನು ಮಾರ್ಗದರ್ಶನ ಮಾಡುವುದಿಲ್ಲ.
Footnotes
  • [1] ಗ್ರಂಥಗಳನ್ನು ಹೊತ್ತುಕೊಂಡು ನಡೆಯುವ ಕತ್ತೆಗಳಿಗೆ ತಾವೇನನ್ನು ಹೊತ್ತುಕೊಂಡಿದ್ದೇವೆ ಎಂಬುದರ ಪರಿವೆಯಿಲ್ಲ. ಅದೇ ವೇಳೆ ಹೊರೆಯ ಭಾರವನ್ನು ವಹಿಸಿಕೊಳ್ಳಲೂಬೇಕು. ಇದೇ ರೀತಿ ತೌರಾತ್ ಪ್ರಕಾರ ನಡೆಯುವ ಜವಾಬ್ದಾರಿಯನ್ನು ಹೊತ್ತುಕೊಂಡ ಯಹೂದರು ಅದನ್ನು ಯಥಾವಿಧಿ ಅನುಸರಿಸದೇ ಹೋದರು. ಮಾತ್ರವಲ್ಲ, ಅದನ್ನೇ ತಿದ್ದಿ ತಿರುಚುವ ದುಸ್ಸಾಹಸಕ್ಕೆ ಕೈಹಾಕಿದರು. ಈ ರೀತಿ ವೇದಗ್ರಂಥವು ಅವರಿಗೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ಮಾತ್ರವಲ್ಲ, ತಮ್ಮ ಪಾಪದ ಫಲವಾಗಿ ಅಲ್ಲಾಹನ ಶಾಪ - ಕೋಪಗಳನ್ನೂ ಕಠಿಣ ಸಜೆಯನ್ನೂ ಹೇರಿಕೊಂಡರು.