Kannada Translation

Ayah by Ayah

Tags

Download Links

Kannada Translation translation for Surah Al-Jumu'ah — Ayah 9

62:9
يَٰٓأَيُّهَا ٱلَّذِينَ ءَامَنُوٓاْ إِذَا نُودِيَ لِلصَّلَوٰةِ مِن يَوۡمِ ٱلۡجُمُعَةِ فَٱسۡعَوۡاْ إِلَىٰ ذِكۡرِ ٱللَّهِ وَذَرُواْ ٱلۡبَيۡعَۚ ذَٰلِكُمۡ خَيۡرٞ لَّكُمۡ إِن كُنتُمۡ تَعۡلَمُونَ ٩
ಸತ್ಯವಿಶ್ವಾಸಿಗಳೇ, ಶುಕ್ರವಾರ ದಿನದ ನಮಾಝಿ ಗಾಗಿ ನಿಮ್ಮನ್ನು ಕರೆಯಲಾದರೆ ನೀವು ಅಲ್ಲಾ ಹನ ದಿಕ್ರ್‍ನ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ ವನ್ನು ತ್ಯಜಿಸಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಅತ್ಯುತ್ತಮವಾಗಿದೆ1.
Footnotes
  • [1] ಜುಮುಅಕ್ಕೆ ಹಾಜರಾಗುವಂತೆ ಆಹ್ವಾನ ನೀಡುವಲ್ಲಿ ``ಯಾಅಯ್ಯುಹಲ್ಲದ್ಸೀನ ಆಮನೂ” ಎಂದು ಪುಲ್ಲಿಂಗ ವಾಕ್ಯ ಬಳಸಲಾಗಿದೆ. ಇಂತಹ ಪುಲ್ಲಿಂಗ ಪ್ರಯೋಗದಲ್ಲಿ ಸ್ತ್ರೀಯರು ಒಳಪಡುವುದಿಲ್ಲ ಎಂಬುದು ಪ್ರಬಲಾಭಿಪ್ರಾಯವೆಂದು ಇಮಾಮ್ ಗರh್ಝೂಲಿ ಪ್ರಸ್ತಾಪಿಸಿದ್ದಾರೆ. (ಅಲ್-ಮುಸ್ತಸ್‍ಫಾ 252) ಇಂತಹ ಪುಲ್ಲಿಂಗ ಪ್ರಯೋಗದಲ್ಲಿ ಸ್ತ್ರೀಯರು ಒಳಪಡಬೇಕಾದರೆ ಸ್ತ್ರೀಯರೂ ಒಳಪಡುತ್ತಾರೆ ಎಂದು ತಿಳಿಸುವ ಪುರಾವೆ ಅಲ್ಲಿ ಇರಬೇಕು ಎಂದಾಗಿದೆ ನಿಯಮ. ಅಂತಹ ಪುರಾವೆ ಇಲ್ಲದಿದ್ದಲ್ಲಿ ಪುರುಷರಿಗೆ ಮಾತ್ರ ಅನ್ವಯವಾಗುತ್ತಿದ್ದು ಸ್ತ್ರೀಯರು ಹೊರತಾಗುತ್ತಾರೆ. ಜುಮುಅಃಕ್ಕೆ ಕರೆಕೊಡುವ ಈ ಜಾಗದಲ್ಲಿ ಸ್ತ್ರೀಯರೂ ಒಳಪಡುತ್ತಾರೆ ಎಂದು ತಿಳಿಸುವ ಪುರಾವೆ ಇರುವುದಿಲ್ಲ. ಆದ್ದರಿಂದ ಈ ಕರೆ ಪುರುಷರಿಗೆ ಮಾತ್ರ ಸೀಮಿತ. ``ಗುಲಾಮ, ಸ್ತ್ರೀ, ಮಕ್ಕಳು ಹಾಗೂ ರೋಗಿ ಇವರ ಹೊರತು ಉಳಿದವರಿಗೆ ಜುಮುಅಃ ಕಡ್ಡಾಯವಾಗಿದೆ'' ಎಂದಿದ್ದಾರೆ ಪ್ರವಾದಿವರ್ಯರು. (ಅಬು ದಾವೂದ್) ಇದು ಪ್ರಮಾಣಯೋಗ್ಯ ಹದೀಸ್ ಎಂದು ಇಮಾಮ್ ನವವಿ ಪ್ರಸ್ತಾಪಿಸಿದ್ದಾರೆ. (ಶರಹುಲ್ ಮುಹದ್ಸಬ್ 4:483) ಆದ್ದರಿಂದ ಸ್ತ್ರೀಯರಿಗೆ ಜುಮುಆಃ ಇಲ್ಲ ಎಂಬುದು ಒಮ್ಮತಾಭಿಪ್ರಾಯದಿಂದ ಸಾಬೀತಾಗಿದೆ. ``ಯಾ ಅಯ್ಯುಹಲ್ಲದ್ಸೀನ'' ಎಂಬ ಪ್ರಯೋಗದಲ್ಲಿ ಸ್ತ್ರೀಯರೂ ಒಳಪಡುತ್ತಾರೆ ಎಂದು ಅಭಿಪ್ರಾಯಪಟ್ಟ ಕೆಲವು ಇಮಾಮ್‍ಗಳು ಕೂಡಾ ಸ್ತ್ರೀಯರಿಗೆ ಬೇರೆ ಪುರಾವೆಗಳ ಮೂಲಕ ಜುಮುಅಃ ಕಡ್ಡಾಯವಿಲ್ಲವೆಂದು ಪ್ರಸ್ತಾಪಿಸಿದ್ದಾರೆ. ಹನಫೀ ವಿದ್ವಾಂಸ ಅಲ್ಲಾಮ ಮುರ್ತಝ ಸ್ಸಬೀರಿ ಹೇಳುತ್ತಾರೆ. ``ಈ ಆಯತ್‍ನಲ್ಲಿ ಸ್ತ್ರೀಯರು ಒಳಪಡುತ್ತಿದ್ದರೂ ``ಮಹಿಳೆಯರು ಮನೆಯಲ್ಲಿ ಅವಿತಿರಲಿ'' ಎಂಬ ಆಯತ್‍ನ ಮೂಲಕ ಇದರಿಂದ ಸ್ತ್ರೀಯರನ್ನು ಹೊರತುಪಡಿಸಲಾಗಿದೆ. ಇದು ನಮ್ಮ ಇಮಾಮ್‍ಗಳು ಸ್ಥಿರಪಡಿಸಿದ ವಿಚಾರ''. (ಇತ್‍ಹಾಫ್ 3:132) ನಮಾಝ್‍ಗೆ ಕರೆಯಲಾದರೆ ಎಂಬ ಮಾತಿನ `ಕರೆ'ಯ ಉದ್ದೇಶ ಮಿನ್ಬರಿಗೆ ಹತ್ತಿದ ಕೂಡಲೇ ಕೊಡುವ ಅರhೂನ್ ಆಗಿದೆ. ನಬಿಯವರ ಕಾಲದಲ್ಲಿ ರೂಢಿಯ ಲ್ಲಿದ್ದ ಅರhೂನ್ ಇದು. ಉಸ್ಮಾನ್ ಬಿನ್ ಅಪ್ಫಾನ್ ರವರ ಆಡಳಿತ ಕಾಲವಾದಾಗ ಜನಸಂಖ್ಯೆ ಜಾಸ್ತಿಯಾಯಿತು. ಜುಮುಅಃ ವೇಳೆ ಆಯಿತು ಎಂಬ ಸೂಚನೆ ಕೊಡುವ ಸಲುವಾಗಿ ಮದೀನಾ ನಗರದಲ್ಲಿದ್ದ ಎತ್ತರದ ಜಾಗವಾದ `ಝೌರಾ' ಎಂಬಲ್ಲಿ ನಿಂತುಕೊಂಡು ಜುಮುಅಃ ಅರhೂನ್‍ಗೆ ಮೊದಲು ಇನ್ನೊಂದು ಅರhೂನ್ ಕೊಡುವ ರೂಢಿಯನ್ನು ಉಸ್ಮಾನ್ ಬಿನ್ ಅಪ್ಫಾನ್ ಪ್ರಾರಂಭಿಸಿದರು. ಆ ಕಾಲದಲ್ಲಿ ಇದ್ದ ಸಹಾಬಿಗಳು ಮತ್ತು ತಾಬಿಅï ಗಳು ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸದೆ ಅಂಗೀಕಾರ ನೀಡಿದರು. ಆದ್ದರಿಂದ ಈ ರೂಢಿ ಇಜ್‍ಮಾ (ಒಮ್ಮತ)ದ ನಿರ್ಧಾರವೆನಿಸಿತು. (ಫತ್ಹುಲ್ ಬಾರಿ). ಸಹಾಬಿಗಳ ಚರ್ಯೆಯನ್ನು ಅನುಸರಿಸಿರಿ ಎಂದು ನಬಿವರ್ಯ ರು ಆದೇಶ ನೀಡಿದ ಪ್ರಕಾರ ಈ ರೂಢಿಯನ್ನು ಅನುಸರಿಸುವುದು ನಬಿ ಚರ್ಯೆಯನ್ನು ಅನುಸರಿಸುವುದೇ ಆಗಿರುತ್ತದೆ. ಇಮಾಮ್ ಬುಖಾರಿಯವರ ವರದಿಯಲ್ಲಿ ``ಕಾರ್ಯವು ಹಾಗೇ ಸ್ಥಿರಪಟ್ಟಿತು'' ಎಂದಿದೆ. ಇಬ್ನುಖುಝೈಮಾರವರ ವರದಿಯಲ್ಲಿ ``ಈ ಕಾರ್ಯವು ವಿಶ್ವದ ಅಂತ್ಯದವರೆಗೂ ಸ್ಥಿರವಾಯಿತು'' ಎಂದಿದೆ. ಆದ್ದರಿಂದ ಜಗತ್ತಿನಾದ್ಯಂತ ಮಸೀದಿಗಳಲ್ಲಿ ಇಂದಿಗೂ ಜುಮಾದಂದು ಮಧ್ಯಾಹ್ನ ಎರಡು ಅಝಾನ್ ರೂಢಿಯಲ್ಲಿದೆ. ``ಅಲ್ಲಾಹನ ದ್ಸಿಕ್ರ್‍ಗೆ ಧಾವಿಸಿರಿ'' ಎಂದರೆ ಖುತ್ಬಾಗೆ ಧಾವಿಸಿರಿ ಎಂದರ್ಥ. ಹೆಚ್ಚಿನ ಖುರ್‍ಆನ್ ವ್ಯಾಖಾನಕಾರರೂ ಇದರ ಉದ್ದೇಶ ಖುತ್ಬಾ ಎಂದಿ ದ್ದಾರೆಂದು ಇಮಾಮ್ ರಾಝಿಯವರು (28/8) ಪ್ರಸ್ತಾಪಿಸಿದ್ದಾರೆ. ಇಮಾಮ್ ನಸಫೀಯವರು `ಮದಾರಿಕ್'ನಲ್ಲೂ ಇದನ್ನೇ ಹೇಳಿದ್ದಾರೆ. ಬೈಳಾವೀ (5/133) ಕೂಡಾ ಪ್ರಾಧಾನ್ಯ ನೀಡಿದ್ದು ಇದೇ ವ್ಯಾಖ್ಯಾನಕ್ಕೆ. ಕೆಲವರು ಖುತ್ಬಾದ ಜತೆ ಜುಮಾ ನಮಾಝನ್ನು ಕೂಡಾ ಸೇರಿಸಿದ್ದಾರೆ. ಒಟ್ಟಿನಲ್ಲಿ ಖುತ್ಬಾ ಕೇವಲ ಒಂದು ಭಾಷಣವಲ್ಲ; ದ್ಸಿಕ್ರುಲ್ಲಾಹ್ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ. ಹದೀಸ್‍ನಲ್ಲೂ ಖುತುಬಕ್ಕೆ ದ್ಸಿಕ್ರ್ ಎಂಬ ಪದ ಪ್ರಯೋಗವಾಗಿದೆ. ಪ್ರವಾದಿವರ್ಯ ರು ಹೇಳಿರುವರು; ಜುಮುಅಕ್ಕೆ ಬರುವವರ ಪೈಕಿ ಬೇಗನೇ ಬರುವವರ ಹೆಸರು ಗಳನ್ನು ಬರೆದಿಡಲು ಮಸೀದಿಗಳ ದ್ವಾರಗಳಲ್ಲೇ ದೇವಚರರು ಕುಳಿತುಕೊಳ್ಳುವರು. ಇಮಾಮರು ಖುತ್ಬಾ ನಿರ್ವಹಿಸಲು ಹೊರಟರೆ ಬರೆಯುವ ಹೆಸರು ಗಳನ್ನು ಬರೆದಿಡಲು ಮಸೀದಿಗಳ ದ್ವಾರಗಳಲ್ಲೇ ದೇವಚರರು ಕುಳಿತುಕೊಳ್ಳುವರು. ಇಮಾಮರು ಖುತ್ಬಾ ನಿರ್ವಹಿಸಲು ಹೊರಟರೆ ಬರೆಯುವ ದಾಖಲೆ ಕಡತಗಳನ್ನು ಸುರುಟಿ ದೇವಚರರು ದಿಕ್ರ್ ಕೇಳಲು ಹಾಜರಾಗುವರು. (ಬುಖಾರಿ 1/127) ಅಲ್ಲದೆ ಇಬ್ನುಕಸೀರ್, ಇಮಾಮ್ ನವವಿ ಮುಂತಾದವರು ವ್ಯಕ್ತಪಡಿಸಿರುವಂತೆ ಖುತ್ಬಾ ಒಂದು ಆರಾಧನೆ ಕೂಡಾ. ಆದ್ದರಿಂದಲೇ ಅದಕ್ಕೆ ಕೆಲವು ಅವಿಭಾಜ್ಯ ಘಟಕಗಳನ್ನೂ ನಿಬಂಧನೆಗಳನ್ನೂ ಇಡಲಾಗಿದೆ. ಆದ್ದರಿಂದ ನಬಿವರ್ಯ ರು ಖುತ್ಬಾ ನಡೆಸಿದ ಪ್ರಕಾರವೇ ನಾವೂ ನಡೆಸಬೇಕಾಗಿದೆ. ಅವರು ಎರಡು ಖುತ್ಬಾ ನಿರ್ವಹಿಸುತ್ತಿದ್ದರು. ನಡುವೆ ಒಂದು ಬಾರಿ ಕುಳಿತು ಕೊಳ್ಳುತ್ತಿದ್ದರು. ನಿಂತುಕೊಂಡೇ ಖುತ್ಬಾ ನಿರ್ವಹಿಸುತ್ತಿದ್ದರು. ಅರಬಿ ಭಾಷೆಯಲ್ಲೇ ನಿರ್ವಹಿಸಿದ್ದರು. ತದನಂತರ ಅರಬಿಯೇತರ ರಾಜ್ಯಗಳು ಇಸ್ಲಾಮಿಗೆ ಸೇರಿದ ಬಳಿಕ ಅಲ್ಲೆಲ್ಲ ಅರಬಿ ತಿಳಿಯದವರು ಹಾಜರಿದ್ದು ಕೂಡಾ ಸಹಾಬಿಗಳು ಮತ್ತು ತಾಬಿಇಗಳು ನಡೆಸಿದ್ದು ಅರಬಿಯಲ್ಲೇ. ಸಲಫು ಸ್ವಾಲಿಹ್‍ಗಳ ಕ್ರಮವು ಖುತ್ಬಾ ಅರಬಿಯಲ್ಲೇ ಆಗಬೇಕೆಂಬುದಕ್ಕೆ ಪ್ರಬಲ ಪುರಾವೆಯೆನಿಸಿದೆ. ಆದ್ದರಿಂದಲೇ ಫಿಕ್ಹ್ ತಜ್ಞರು ಖುತ್ಬಾ ಅರಬಿಯಲ್ಲೇ ನಡೆಯಬೇಕೆಂದು ನಿಬಂಧನೆ ವಿಧಿಸಿದರು. ‘ಅಲ್ಲಾಹನ ದಿಕ್ರ್‍ನ ಕಡೆಗೆ ಧಾವಿಸಿರಿ’ ಎಂದರೆ ಓಡೋಡಿ ಬನ್ನಿರಿ ಎಂದಲ್ಲ. ಹೃದಯ, ಸಂಕಲ್ಪ, ಭಯ ಭಕ್ತಿಯಿಂದ ಮುಂದೊತ್ತಿ ಬನ್ನಿರಿ ಎಂದರ್ಥ. ‘ನಮಾಝ್‍ಗೆ ಓಡೋಡಿ ಬರಬೇಡಿರಿ. ಸಮಚಿತ್ತತೆ ಹಾಗೂ ಗಾಂಭೀರ್ಯದಿಂದ ಬನ್ನಿರಿ’ ಎಂದು ಹದೀಸ್‍ನಲ್ಲಿ ಆದೇಶಿಸಲಾಗಿದೆ. `ವ್ಯಾಪಾರವನ್ನು ತ್ಯಜಿಸಿರಿ' ಅಂದರೆ ಜುಮು ಅಃಕ್ಕೆ ಹಾಜರಾಗುವುದಕ್ಕೆ ಅಡ್ಡಿಯಾಗುವ ಎಲ್ಲ ಕೆಲಸಗಳನ್ನು ತ್ಯಜಿಸಿರಿ ಎಂದರ್ಥ. ಜುಮುಅಃ ಮುಗಿದ ನಂತರ ಜೀವನ ಮಾರ್ಗದಲ್ಲಿ ನಿರತರಾಗಿರಿ ಎಂಬ ಆದೇಶದೊಂದಿಗೆ ಅಲ್ಲಾಹನ ಸ್ಮರಣೆ ತೊರೆಯಬೇಡಿರಿ ಎಂಬ ಎಚ್ಚರಿಕೆಯೂ ಇವೆ. ನಮಾಝ್ ಮುಗಿದ ಕೂಡಲೇ ಜೀವನಾಧಾರ ಹುಡುಕಿಕೊಂಡು ಹೊರಟು ಹೋಗಿರಿ ಎಂದಿರುವುದು ಕಡ್ಡಾಯ ಆದೇಶವಲ್ಲ, ಅನುಮತಿಯಾಗಿದೆ. ನಮಾಝ್ ನಂತರದ ದ್ಸಿಕ್ರ್, ದುಆ, ಸುನ್ನತ್ ನಮಾಝ್‍ಗಳ ನಿರ್ವಹಣೆ ಮುಂತಾದವುಗಳನ್ನು ನಿರ್ವಹಿಸದೆ ತಕ್ಷಣ ಎದ್ದು ಹೋಗಿರಿ ಎಂದು ಇದಕ್ಕೆ ಅರ್ಥವಿಲ್ಲ. ಅಂತಹ ಅರ್ಥ ಕೊಡುವುದಾದರೆ ಜೀವನಾಧಾರವಾದ ಕಸುಬು, ಕೆಲಸ, ವ್ಯಾಪಾರ ಮುಂತಾದವುಗಳಲ್ಲಿ ತಕ್ಷಣ ನಿರತರಾಗುವುದು ಕೂಡಾ ಕಡ್ಡಾಯ ಎಂಬ ಅರ್ಥ ಕೊಡಬೇಕಾದೀತು. ಆದ್ದರಿಂದ ಮನೆಗೆ ಹೋಗದೆ ಸೀದಾ ಕೆಲಸದ ಕಡೆಗೂ ವ್ಯಾಪಾರಿಗಳು ಅಂಗಡಿ ತೆರೆಯಲೂ ಹೋಗುವುದು ಕಡ್ಡಾಯ ಎಂದಾದೀತು. (ಅತ್ತ ಸ್‍ಹೀಲ್ 4/119, ಖುರ್ತುಬಿ 18/103)