Kannada Translation

Ayah by Ayah

Tags

Download Links

Kannada Translation translation for Surah At-Talaq — Ayah 4

65:4
وَٱلَّٰٓـِٔي يَئِسۡنَ مِنَ ٱلۡمَحِيضِ مِن نِّسَآئِكُمۡ إِنِ ٱرۡتَبۡتُمۡ فَعِدَّتُهُنَّ ثَلَٰثَةُ أَشۡهُرٖ وَٱلَّٰٓـِٔي لَمۡ يَحِضۡنَۚ وَأُوْلَٰتُ ٱلۡأَحۡمَالِ أَجَلُهُنَّ أَن يَضَعۡنَ حَمۡلَهُنَّۚ وَمَن يَتَّقِ ٱللَّهَ يَجۡعَل لَّهُۥ مِنۡ أَمۡرِهِۦ يُسۡرٗا ٤
ನಿಮ್ಮ ಸ್ತ್ರೀಯರ ಪೈಕಿ ಋತುಸ್ರಾವದ ಬಗ್ಗೆ ನಿರಾಶರಾದವರ (ಅವರ ಇದ್ದತ್‍ನ) ಕುರಿತು ನಿಮಗೇನಾದರೂ ಸಂಶಯ ಬಂದರೆ, ಅವರ ಇದ್ದತಿನ ಅವಧಿಯು ಮೂರು ತಿಂಗಳಾಗಿದೆ. ಇನ್ನೂ ಋತುಮತಿಯರಾಗದವರಿಗೂ ಇದೇ ನಿಯಮವಿದೆ. ಮತ್ತು ಗರ್ಭಿಣಿಯರ (ಇದ್ದತಿನ) ಅವಧಿಯು ಅವರ ಹೆರಿಗೆಯ ತನಕವಿದೆ1. ಅಲ್ಲಾಹನ ಆದೇಶಗಳ ಬಗ್ಗೆ ಕಟ್ಟೆಚ್ಚರ ಪಾಲಿಸುವವರಿಗೆ ಅಲ್ಲಾಹನು ಸರಳತೆಯನ್ನು ದಯಪಾಲಿಸುತ್ತಾನೆ.
Footnotes
  • [1] ಪ್ರಾಯದಿಂದಾಗಿ ಮುಟ್ಟು ನಿಂತವಳು ಮತ್ತು ತೀರಾ ಮುಟ್ಟು ಆಗದ ಹೆಣ್ಣುಗಳಿಗೆ ಇದ್ದತ್‍ನ ಅವಧಿ ಮೂರು ತಿಂಗಳು ಎಂದಿಲ್ಲಿ ಸ್ಪಷ್ಟಪಡಿಸಲಾಗಿದೆ. ಬಸುರಿಯ ಇದ್ದತ್ ಅವಳು ಹೆರಿಗೆಯಾಗುವ ತನಕ. ಹೆರಿಗೆಯು ತಕ್ಷಣವೇ ಆದರೂ ತುಂಬ ವಿಳಂಬವಾದರೂ ಸರಿ. ಗಂಡ ತೀರಿದ ಇದ್ದತ್ ಹಾಗೂ ತಲಾಕ್‍ನ ಇದ್ದತ್ ಎರಡಕ್ಕೂ ಇದು ಅನ್ವಯ. ರದ್ದುಪಡಿಸಲಾಗುವ ತಲಾಕ್ ಆಗಿದ್ದರೂ ರದ್ದುಪಡಿಸಲಾಗದ ತಲಾಕ್ ಆಗಿದ್ದರೂ ಹೆರಿಗೆಯ ವರೆಗೆ ಅವಳ ವೆಚ್ಚವನ್ನು ತಲಾಕ್ ಹೇಳಿದ ಗಂಡ ಕೊಡತಕ್ಕದ್ದು ಎಂದು ಬಹುಮತಾಭಿಪ್ರಾಯ. ರದ್ದುಪಡಿಸಲಾಗುವ ತಲಾಕ್‍ಗೊಳಪಟ್ಟವಳ ವಿಷಯ ಇಲ್ಲಿನ ಪ್ರಸ್ತಾವ್ಯ ವಿಷಯವಾದುದರಿಂದ ಅವಳಿಗೆ ಮಾತ್ರ ಈ ಆಯತ್ ಅನ್ವಯ ಎಂದಾಗಿದೆ ಇನ್ನೊಂದು ಅಭಿಪ್ರಾಯ.