Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 10

66:10
ضَرَبَ ٱللَّهُ مَثَلٗا لِّلَّذِينَ كَفَرُواْ ٱمۡرَأَتَ نُوحٖ وَٱمۡرَأَتَ لُوطٖۖ كَانَتَا تَحۡتَ عَبۡدَيۡنِ مِنۡ عِبَادِنَا صَٰلِحَيۡنِ فَخَانَتَاهُمَا فَلَمۡ يُغۡنِيَا عَنۡهُمَا مِنَ ٱللَّهِ شَيۡـٔٗا وَقِيلَ ٱدۡخُلَا ٱلنَّارَ مَعَ ٱلدَّٰخِلِينَ ١٠
ಅಲ್ಲಾಹನು ನೂಹರ ಪತ್ನಿಯನ್ನು ಮತ್ತು ಲೂಥರ ಪತ್ನಿಯನ್ನು ಸತ್ಯನಿಷೇಧಿಗಳಿಗೆ ಉದಾ ಹರಣೆಯಾಗಿ ಮುಂದಿಡುತ್ತಾನೆ. ಆ ಇಬ್ಬರು ಸ್ತ್ರೀಯರು ನಮ್ಮ ದಾಸರ ಪೈಕಿ ಇಬ್ಬರು ಸಜ್ಜನ ದಾಸರ ದಾಂಪತ್ಯ ಬಂಧನದಲ್ಲಿದ್ದರು. ಅವರೀರ್ವರೂ ತಮ್ಮ ಪತಿಯರನ್ನು ವಂಚಿಸಿದರ1. ಆ ಇಬ್ಬರು ಸ್ತ್ರೀಯರನ್ನೂ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡಲು ಆ ಪ್ರವಾದಿಗಳಿಗೆ ಸಾಧ್ಯವಾಗಲಿಲ್ಲ. ‘ಅಗ್ನಿಯಲ್ಲಿ ಬೀಳುವವರ ಜೊತೆಗೆ ನೀವಿಬ್ಬರೂ ಬೀಳಿರಿ’ ಎಂದು ಹೇಳಲಾಯಿತು.
Footnotes
  • [1] ಇಬ್ಬರು ಮಹಿಳೆಯರು ಅವರ ಪತಿಯವರಿಗೆ ವಂಚನೆ ಮಾಡಿದರು ಎಂಬುದರ ಅರ್ಥ ಸಾಮಾನ್ಯವಾಗಿ ಗ್ರಹಿಸಿಕೊಳ್ಳುವಂತೆ ಅನೈತಿಕ ಕೃತ್ಯ ನಡೆಸಿದರು ಎಂದಲ್ಲ. ಪತಿಯಂದಿರ ಆಶಯಾದರ್ಶಗಳಲ್ಲಿ ವಿಶ್ವಾಸವಿಡದೆ ದ್ರೋಹವೆಸಗಿದರು ಎಂದರ್ಥ.