Kannada Translation

Ayah by Ayah

Tags

Download Links

Kannada Translation translation for Surah At-Tahrim — Ayah 6

66:6
يَٰٓأَيُّهَا ٱلَّذِينَ ءَامَنُواْ قُوٓاْ أَنفُسَكُمۡ وَأَهۡلِيكُمۡ نَارٗا وَقُودُهَا ٱلنَّاسُ وَٱلۡحِجَارَةُ عَلَيۡهَا مَلَٰٓئِكَةٌ غِلَاظٞ شِدَادٞ لَّا يَعۡصُونَ ٱللَّهَ مَآ أَمَرَهُمۡ وَيَفۡعَلُونَ مَا يُؤۡمَرُونَ ٦
ಸತ್ಯವಿಶ್ವಾಸಿಗಳೇ, ನೀವು ಸ್ವಶರೀರಗಳನ್ನೂ, ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ1. ಮನುಷ್ಯರು ಮತ್ತು ಕಲ್ಲುಗಳು ಅದರ ಇಂಧನವಾಗಿರುವುದು2. ಅದರ ಮೇಲೆ ಅತ್ಯಂತ ಕಠೋರ ಮತ್ತು ಬಲಾಡ್ಯರಾದ ದೇವಚರರು ನಿಯುಕ್ತರಾಗಿರುವರು. ಅವರೆಂದೂ ಅಲ್ಲಾಹನ ಅಜ್ಞೋಲ್ಲಂಘನೆ ಮಾಡುವುದಿಲ್ಲ. ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಅವರು ಪಾಲಿಸುತ್ತಾರೆ.
Footnotes
  • [1] ಕುಟುಂಬದ ಮುಖ್ಯಸ್ಥರ ಹೊಣೆಗಾರಿಕೆಯಿದು. ಕುಟುಂಬದವರನ್ನು ನರಕದಿಂದ ಪಾರಾಗಿ ಶಾಶ್ವತ ಜಯಗಳಿಸುವ ದಾರಿಗೆ ಹಚ್ಚುವುದು ಕುಟುಂಬದ ಯಜಮಾನನ ಹೊಣೆಗಾರಿಕೆಯಾಗಿದೆ. ದೀನೀಜ್ಞಾನ ನೀಡಿ ದೀನೀನಿಷ್ಠೆಗೆ ತರಬೇತು ಕೊಟ್ಟು, ರೂಪರೇಷÉೀಗಳನ್ನು ನೀಡಿ ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿ ಜೀವಿಸುವಂತೆ ಮಾಡುವುದು ಹಾಗೂ ಮನೆಮಂದಿ ತನ್ನಿಚ್ಛೆ ಪ್ರಕಾರ ನಡೆಯದಂತೆ ನೋಡಿಕೊಳ್ಳುವುದು ಅವರ ಜವಾಬ್ಧಾರಿ.
  • [2] ನರಕದ ಬೆಂಕಿಗೆ ಇಲ್ಲಿನ ಬೆಂಕಿಗಿಂತ ಎಪ್ಪತ್ತು ಪಟ್ಟು ಬಿಸಿ ಜಾಸ್ತಿ. ಭೂಲೋಕದ ಬೆಂಕಿಗೆ ನರಕದ ಬೆಂಕಿಯ 70ರಲ್ಲಿ ಒಂದಂಶ ಮಾತ್ರ ಇರುವುದು ಎಂದು ಮುಸ್ಲಿಮ್ ಉಲ್ಲೇಖಿಸುವ ಹದೀಸ್‍ನಲ್ಲಿದೆ. ಅಂತಹ ನರಕದಲ್ಲಿ ಉರಿಸುವ ಉರುವಲು ಮನುಷ್ಯರು ಮತ್ತು ಕಲ್ಲು ಎಂದು ಇಲ್ಲಿ ಪ್ರಸ್ತಾಪಿಸಲಾಗಿದೆ. ಕಲ್ಲು ಎಂಬುದರ ಉದ್ದೇಶವು ಮುಶ್ರಿಕರು ಆರಾಧಿಸುತ್ತಿರುವ ಕಲ್ಲಿನ ವಿಗ್ರಹಗಳು ಎಂದು ಒಂದು ಅಭಿಪ್ರಾಯ. ಮುಶ್ರಿಕರ ಆರಾಧ್ಯವಸ್ತುಗಳೆಲ್ಲ ನರಕದ ಉರುವಲುಗಳು ಎಂದು 20-98ರಲ್ಲಿ ಅಲ್ಲಾಹನ ಪ್ರಸ್ತಾಪವಿದೆ. ಇನ್ನೊಂದು ಅಭಿಪ್ರಾಯ ಪ್ರಕಾರ ಬಹಳ ದುರ್ಗಂಧ ಬೀರುವ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಬೆಂಕಿ ಹಿಡಿಯುವಂತಹ ಒಂದು ವಿಧ ಕಲ್ಲುಗಳು ಎಂದಾಗಿದೆ. ಇಲ್ಲಿನ `ಕಲ್ಲು' ಎಂದಿರುವುದರ ಉದ್ದೇಶ.