Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 27

67:27
فَلَمَّا رَأَوۡهُ زُلۡفَةٗ سِيٓـَٔتۡ وُجُوهُ ٱلَّذِينَ كَفَرُواْ وَقِيلَ هَٰذَا ٱلَّذِي كُنتُم بِهِۦ تَدَّعُونَ ٢٧
ಮುಂದೆ ಶಿಕ್ಷೆಯು ಸಮೀಪವಾಗಿರುವುದನ್ನು ಅವರು ಕಂಡಾಗ, ಸತ್ಯನಿಷೇಧಿಗಳ ಮುಖಗಳಿಗೆ ಮ್ಲಾನತೆ ಬಾಧಿಸುವುದು. ನೀವು (ಇಲ್ಲವೆಂದು) ವಾದಿಸುತ್ತಿದ್ದ ವಿಚಾರವು ಇದುವೇ ಆಗಿದೆ’ ಎಂದು (ಅವರಿಗೆ) ಹೇಳಲಾಗುವುದು1.
Footnotes
  • [1] 25, 26, 27ನೇ ಆಯತ್'ಗಳಲ್ಲಿ ಮುಶ್ರಿಕರು ಪರಲೋಕವನ್ನು ನಿಷೇಧಿಸಿದುದರ ಪ್ರಸ್ತಾಪವಿದೆ. ಅಂತ್ಯದಿನ ಯಾವಾಗ? ಎಂದವರು ಪ್ರವಾದಿಯವರಲ್ಲಿ ಕುಚೋದ್ಯ ಮಾಡುತ್ತಿದ್ದರು. ಅದಕ್ಕೆ ಉತ್ತರವಾಗಿ ಆ ಅರಿವು ಅಲ್ಲಾಹನಿಗೆ ಮಾತ್ರ ಇದೆ. ಆದರೆ ಅದು ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುವಂತೆ ಅಲ್ಲಾಹು ಆದೇಶ ಕೊಡುತ್ತಿದ್ದಾನೆ. ವಾಸ್ತವದಲ್ಲಿ ಅಂತ್ಯದಿನ ಸಂಭವಿಸಿದಾಗ ನಿಷೆದಿಸಿದವನ ಮುಖದಲ್ಲಿ ಮ್ಲಾನತೆ ಆವರಿಸುವುದು. ಸಂಭವಿಸುವುದಿಲ್ಲವೆಂದು ನೀವು ವಾದ ಹೂಡುತ್ತಿದ್ದ ವಿಚಾರ ಇದೋ ಸಂಭವಿಸಿದೆ ಎಂದು ಅವರೊಂದಿಗೆ ಅಂದು ಹೇಳಲಾಗುವುದು. ಇದು ಅವರ ಖೇದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅವಮಾನವೂ ಉಂಟಾಗುತ್ತದೆ.