Kannada Translation

Ayah by Ayah

Tags

Download Links

Kannada Translation translation for Surah Al-Qalam — Ayah 16

68:16
سَنَسِمُهُۥ عَلَى ٱلۡخُرۡطُومِ ١٦
ಶೀಘ್ರವೇ ನಾವು ಅವನ ಸೊಂಡಿಲಿಗೆ (ನೀಳ ಮೂಗಿಗೆ) ಬರೆ ಗುರುತು ಎಳೆಯಲಿದ್ದೇವೆ1.
Footnotes
  • [1] ಮಕ್ಕಾ ನಿವಾಸಿಯಾಗಿದ್ದ ಧನಿಕ ವ್ಯಕ್ತಿ ವಲೀದ್‍ಬಿನ್ ಮುಗೀರಾ ಎಂಬ ಕಠಿಣ ಶತ್ರುವೊಬ್ಬನ ವೃತ್ತಾಂತವಿದು. ಆತನು ನಬಿಯವರನ್ನೂ ಇಸ್ಲಾಮ್ ಧರ್ಮವನ್ನೂ ತೀವ್ರ ಪರಿಹಾಸ್ಯ ಮಾಡುತ್ತಿದ್ದ. ಸೊತ್ತು ಸಂತಾನ ಹೇರಳವಿದ್ದುದರಿಂದ ಆತ ಬಲು ದೊಡ್ಡ ಅಹಂಭಾವಿಯೂ ಅಹಂಕಾರಿಯೂ ಆಗಿದ್ದ. ಅವನು ವಾಸ್ತವದಲ್ಲಿ ಜಾರ ಸಂತತಿಯಾಗಿದ್ದ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಖುರ್‍ಆನ್ ಅದನ್ನು ಎತ್ತಿ ಹೇಳಿ ಅವನಿಗೆ ತೀವ್ರತರದ ಅಪಮಾನವನ್ನು ತಂದೊಡ್ಡಿತು. ಅವರ ಉದ್ದನೆಯ ಮೂಗನ್ನು `ಸೊಂಡಿಲು' ಎನ್ನುವ ಮೂಲಕವೂ ಅವನಿಗೆ ಇನ್ನಿಲ್ಲದ ಅವಮಾನಗೊಳಿಸಲಾಯಿತು. ಸೊಂಡಿಲಿಗೆ ಗುರುತು ಹಚ್ಚಲಾಗುವುದು ಎಂದರೆ ಪರಲೋಕದಲ್ಲಿ ಅವನ ಮುಖ ಕಪ್ಪಡರಿದ ಸ್ಥಿತಿಯಲ್ಲಿರುವುದು ಎಂದರ್ಥವೆಂದು ಕೆಲವರು ಪ್ರಸ್ತಾಪಿಸಿದ್ದಾರೆ.