Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 16

72:16
وَأَلَّوِ ٱسۡتَقَٰمُواْ عَلَى ٱلطَّرِيقَةِ لَأَسۡقَيۡنَٰهُم مَّآءً غَدَقٗا ١٦
(ಅಲ್ಲಾಹು ಹೇಳುತ್ತಾನೆ) ಅವರು ಸನ್ಮಾರ್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ, ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಕೊಡುತ್ತಿದ್ದೆವು.1
Footnotes
  • [1] ಇಮಾಮ್ ಸ್ವಾವೀ ರವರು ಆ ಆಯತನ್ನು ವ್ಯಾಖ್ಯಾನಿಸುತ್ತಾ ಹೀಗೆ ಹೇಳುತ್ತಾರೆ ``ಬದುಕಿನ ಸುಖಲೋಲುಪತೆಯಿಂದ ಮುಕ್ತರಾಗಿ ಅಲ್ಲಾಹನ ತೃಪ್ತಿಯನ್ನು ಪಡೆದುಕೊಂಡವರು ದೇಹದ ನೆಲೆನಿಲ್ಲುವಿಕೆಗೆ ಅಗತ್ಯವಾದ ನೀರಿನಂತಿರುವರು. ಅವರ ಹೃದಯಗಳಿಗೆ ಪ್ರೀತಿ, ಅದೃಶ್ಯ, ಜ್ಞಾನ, ವಗೈರೆಗಳನ್ನು ಕೊಡಲಾಗುವುದು. ಅದನ್ನು ಪಡೆದುಕೊಂಡಾಗ ಅವರಿಗೆ ಗೌರವ, ಆಸಕ್ತಿಗಳು ಜೊತೆಯಾಗಿ ಹೆಚ್ಚುತ್ತಾ ಹೋಗುವುದು. ಪರಿಣಾಮವಾಗಿ ಅವರಿಗೆ ಮನೆ ಮಾರುಗಳು ಬೇಡವಾಗಬಹುದು. ಕೆಲವರ ಮನಸ್ಸಿನ ಸಮತೋಲನಾವಸ್ಥೆಯು ತಪ್ಪಿ ಹೋದೀತು. ಇನ್ನು ಕೆಲವರು ಅಲ್ಲಾಹನನ್ನು ಹುಡುಕಿಕೊಂಡು ಲಹರಿಯಲ್ಲಿರುವರು. ಪ್ರವಾದಿ ಮೂಸಾ ರವರು ಖಿಳರ್ ರವರನ್ನು ಹುಡುಕಿಕೊಂಡು ಹೋದ ಘಟನೆ ಖುರ್‍ಆನ್ ಹಾಗೂ ಹದೀಸ್‍ಗಳಲ್ಲಿದೆ. ಬೀವಿ ನಫೀಸಾ ಈಜಿಪ್ಟ್‍ನಲ್ಲಿ ವಾಸಿಸುತ್ತಿರುವಾಗ ಇಮಾಮ್ ಶಾಫೀ ರವರು ಕೆಲವೊಮ್ಮೆ ಅಲ್ಲಿಗೆ ಹೋಗಿ ದುಆ ಮಾಡಿಸುತ್ತಿದ್ದರು. ತಾನು ರೋಗ ಶಯ್ಯೆಯಲ್ಲಿದ್ದಾಗ ಬೀವಿಯ ಬಳಿಗೆ ಆಳನ್ನು ಕಳುಹಿಸಿ ದುಆ ಮಾಡಿಸುತ್ತಿದ್ದರು. ಪ್ರಸಿದ್ಧ ಸೂಫಿಯಾಗಿದ್ದ ಶಯ್‍ಬಾನುರ್ರಾಇರವರನ್ನು ಕೂಡ ಶಾಫೀ ಇಮಾಮರು ಸಂದರ್ಶಿಸುತ್ತಿದ್ದರು. ಹಾಗೆಯೇ ಅಹ್ಮದುಬ್‍ನು ಹಂಬಲ್ ಹಾಗೂ ಯಹ್ಯಬಿನು ಮುಈನ್ ಮುಂತಾದ ವಿದ್ವಾಂಸರು ಸೂಫೀ ಪ್ರಮುಖ ಮಅïರೂಫುಲ್ ಖರ್ಕಿರವರನ್ನು ನಿರಂತರವಾಗಿ ಸಂದರ್ಶಿಸುತ್ತಿದ್ದರು.