Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 18

72:18
وَأَنَّ ٱلۡمَسَٰجِدَ لِلَّهِ فَلَا تَدۡعُواْ مَعَ ٱللَّهِ أَحَدٗا ١٨
ಮಸೀದಿಗಳು ಅಲ್ಲಾಹನಿಗಿರುವುದಾಗಿವೆ. ಆದುದರಿಂದ ಅವುಗಳಲ್ಲಿ ಅಲ್ಲಾಹನೊಂದಿಗೆ ಇತರ ಯಾರನ್ನೂ ಆರಾಧಿಸಬೇಡಿರಿ1.
Footnotes
  • [1] ಅಲ್ಲಾಹನ ಮಸೀದಿಯಲ್ಲಿ ಅಲ್ಲಾಹನ ಹೊರತು ಬೇರೆ ಯಾರಿಗೂ ಆರಾಧಿಸಬೇಡಿರಿ ಎಂದರ್ಥ. ಮಸ್‍ಜಿದ್ ಎಂದಿರುವುದರಲ್ಲಿ ಆ ಕಾಲದಲ್ಲಿದ್ದ ಜೂದ ಕ್ರೈಸ್ತರ ಆರಾಧನಾಲಯಗಳೂ ಒಳಪಡುತ್ತವೆ. ಅವರು ಅಲ್ಲಾಹೇತರರಿಗೆ ಆರಾಧಿಸುತ್ತಿದ್ದರು. ಆದ್ದರಿಂದ ಅವುಗಳನ್ನು ಕೂಡಾ ಶಿರ್ಕ್ ಮುಕ್ತಗೊಳಿಸಿರಿ ಎಂಬ ಆದೇಶವಿದು. ಇಮಾಮ್ ಅಲ್-ಹಸನ್‍ರವರ ಪ್ರಕಾರ ಮಸಾಜಿದ್ ಅಂದರೆ ಇದೇ ಭೂಮಿ. `ಭೂಮಿಯನ್ನು ನನಗೆ ಮಸ್ಜಿದ್ ಮಾಡಿಕೊಡಲಾಗಿದೆ.' ಎಂದಿದ್ದಾರೆ ನಬಿಯವರು. ಅಂದರೆ ಎಲ್ಲೂ ನಮಾಝ್(ಸಾಷ್ಟಾಂಗ) ಸಮ್ಮತ ಎಂದರ್ಥ. ಆದ್ದರಿಂದ ಅಲ್ಲಾಹನು ಭೂಮಿಯನ್ನು ಸೃಷ್ಟಿಸಿದ ತನಗೆ ಹೊರತು ಬೇರೆ ಯಾರಿಗೂ ಭೂಮಿಯಲ್ಲಿ ಎಲ್ಲೂ ಸುಜೂದ್ ಮಾಡಬೇಡಿರಿ ಎಂದು ಹೇಳಿದ್ದಾನೆ ಎಂದರ್ಥ. ಸಈದ್ ಬಿನ್ ಮುಸಯ್ಯಬ್ ರವರು `ಮಸಾಜಿದ್'ಗೆ ಸುಜೂದ್ ಮಾಡುವ ಅಂಗಗಳು ಎಂಬ ಅರ್ಥ ಹೇಳಿದ್ದಾರೆ. ಆ ಅಂಗಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಆ ಅಂಗಗಳ ಮೂಲಕ ಸುಜೂದ್ ಮಾಡಿರಿ, ಬೇರೆ ಯಾರಿಗೂ ಮಾಡಬೇಡಿರಿ ಎಂದರ್ಥ. (ತಫ್ಸೀರ್ ರಾಝಿ : 30:163)