Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 11

74:11
ذَرۡنِي وَمَنۡ خَلَقۡتُ وَحِيدٗا ١١
ನನ್ನನ್ನು ಮತ್ತು ಏಕನಾದ ಸ್ಥಿತಿಯಲ್ಲಿ ನನ್ನಿಂದ ಸೃಷ್ಠಿಯಾಗಿರುವ ಒಬ್ಬನನ್ನು ನಮ್ಮಿಬ್ಬರ ಪಾಡಿಗೆ ಬಿಡು1.
Footnotes
  • [1] 11ರಿಂದ 30ರ ವರೆಗಿನ ಆಯತ್‍ಗಳು ಖುರೈಶಿ ಪ್ರಮುಖನಾಗಿದ್ದ ವಲೀದ್ ಬಿನ್ ಮುಗೀರಾನ ಬಗ್ಗೆಯಾಗಿದೆ. ಘಟನೆಯ ಒಟ್ಟು ಸಾರಾಂಶ ಹೀಗಿದೆ; ಒಮ್ಮೆ ನಬಿಯವರಿಂದ ಖುರ್‍ಆನ್ ಆಲಿಸಿ ಮನಪರಿವರ್ತನೆ ಹೊಂದಿದ ಆತ ತನ್ನ ಸಂಗಡಿಗರಲ್ಲಿ, ಖುರ್‍ಆನ್, ಮನುಷ್ಯ, ಜಿನ್ನ್‍ಗಳ ನುಡಿಯಲ್ಲ. ಕವಿತೆಯೋ, ಜ್ಯೋತಿಷ್ಯವೋ ಅಲ್ಲ. ಅದಕ್ಕೆ ಅನಂತ ಮಾಧುರ್ಯವಿದೆ. ಸೊಗಸು ಇದೆ. ಅದರ ತಳಭಾಗ ಹಚ್ಚಹಸಿರು. ಮೇಲ್ಭಾಗ ಫಲ ಸಂಪುಷ್ಟ. ಅದು ಮೇಲೇರುವಲ್ಲಿದೆ. ಕೆಳಗಿಳಿಯಲಾರದು’ ಎಂದು ಹೇಳಿದನು. ವಲೀದ್ ಇಸ್ಲಾಮಿಗೆ ಸೇರಿ ಬಿಡುವನೇನೋ ಎಂದು ಹೆದರಿದ ಖುರೈಶಿಗಳು ಅವನನ್ನು ಪರಿಹಾಸ್ಯ ಮಾಡಿದರು. ಅಜೂಜಹಲನು ತೀವ್ರ ಪ್ರಯತ್ನ ನಡೆಸಿ ವಲೀದನು ಜನರೊಂದಿಗೆ ‘ಖುರ್‍ಆನ್ ಒಂದು ವಿಧ ಪರಂಪರಾಗತ ಮಾಟ’ ಎಂದು ಹೇಳುವಂತೆ ಮಾಡಿಬಿಟ್ಟನು. ಹಾಗೆ ಸತ್ಯವನ್ನು ಗ್ರಹಿಸಿಕೊಂಡ ನಂತರ ಕೂಡಾ ತನ್ನ ಸಂಗಡಿಗರ ಮಸಲತ್ತಿಗೆ ಬಲಿಯಾಗಿ ವಲೀದನು ಖುರ್‍ಆನ್ ಬಗ್ಗೆ ಕೆಟ್ಟ ಮಾತನ್ನು ಆಡಿದನು. ಈ ಸಂದರ್ಭದಲ್ಲಿ ಈ ಆಯತ್‍ಗಳು ಅವತೀರ್ಣವಾದವು. ‘ಏಕನಾದ ಸ್ಥಿತಿಯಲ್ಲಿ ಸೃಷ್ಟಿಸಿದೆ.’ ಎಂಬುದಕ್ಕೆ ಎರಡು ವ್ಯಾಖ್ಯಾನಗಳಿವೆ. 1. ನಾನು ಏಕನಾಗಿ (ಬೇರೆ ದೇವನಿಲ್ಲದ ಏಕೈಕನು) ಅವನನ್ನು ಸೃಷ್ಟಿಸಿದೆ. 2. ಅವನ ಜೊತೆಗೆ ಈಗ ಇರುವ ಮಡದಿ, ಮಕ್ಕಳು, ಸೊತ್ತು, ಪರಿವಾರ ಯಾವುದೂ ಇಲ್ಲದೆ ಅವನು ಏಕನಾದ ಸ್ಥಿತಿಯಲ್ಲಿ ಜನಿಸಿದ. ಅದನ್ನೆಲ್ಲ ನಂತರ ನಾನು ನೀಡಿದ್ದು. ಅವನಿಗೆ ಶಿಕ್ಷೆ ನೀಡಲು ನÀನಗೆ ಪ್ರಯಾಸವಿಲ್ಲ.