Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 31

74:31
وَمَا جَعَلۡنَآ أَصۡحَٰبَ ٱلنَّارِ إِلَّا مَلَٰٓئِكَةٗۖ وَمَا جَعَلۡنَا عِدَّتَهُمۡ إِلَّا فِتۡنَةٗ لِّلَّذِينَ كَفَرُواْ لِيَسۡتَيۡقِنَ ٱلَّذِينَ أُوتُواْ ٱلۡكِتَٰبَ وَيَزۡدَادَ ٱلَّذِينَ ءَامَنُوٓاْ إِيمَٰنٗا وَلَا يَرۡتَابَ ٱلَّذِينَ أُوتُواْ ٱلۡكِتَٰبَ وَٱلۡمُؤۡمِنُونَ وَلِيَقُولَ ٱلَّذِينَ فِي قُلُوبِهِم مَّرَضٞ وَٱلۡكَٰفِرُونَ مَاذَآ أَرَادَ ٱللَّهُ بِهَٰذَا مَثَلٗاۚ كَذَٰلِكَ يُضِلُّ ٱللَّهُ مَن يَشَآءُ وَيَهۡدِي مَن يَشَآءُۚ وَمَا يَعۡلَمُ جُنُودَ رَبِّكَ إِلَّا هُوَۚ وَمَا هِيَ إِلَّا ذِكۡرَىٰ لِلۡبَشَرِ ٣١
ನಾವು ನರಕದ ಕಾರ್ಯಕರ್ತರನ್ನಾಗಿ ನೇಮಿಸಿರುವುದು ದೇವಚರರನ್ನು ಮಾತ್ರವಾಗಿದೆ1. ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಒಂದು ಪರೀಕ್ಷಾ ಸಾಧನವಾಗಿ ಮಾಡಿದ್ದೇವೆ. ಗ್ರಂಥ ನೀಡಲ್ಪಟ್ಟವರಿಗೆ ದೃಢನಂಬಿಕೆ ಉಂಟಾಗಲಿಕ್ಕಾಗಿ, ಸತ್ಯವಿಶ್ವಾಸಿಗಳ ವಿಶ್ವಾಸವು ವರ್ಧಿಸಲಿಕ್ಕಾಗಿ, ಗ್ರಂಥ ನೀಡಲ್ಪಟ್ಟವರು ಮತ್ತು ವಿಶ್ವಾಸಿಗಳು ಸಂಶಯದಲ್ಲಿ ಬೀಳದಿರಲಿಕ್ಕಾಗಿ ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಸತ್ಯ ನಿಷೇಧಿಗಳು ಈ ಉದಾಹರಣೆಯ ಮೂಲಕ ಅಲ್ಲಾಹನು ಉದ್ದೇಶಿಸುವುದಾದರೂ ಏನನ್ನು? ಎಂದು ಹೇಳುವಂತಾಗಲು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ನೇರ ದಾರಿ ತೋರುತ್ತಾನೆ. ತಮ್ಮ ಪ್ರಭುವಿನ ಸೇನೆಗಳನ್ನು ಸ್ವತಃ ಅವನ ಹೊರತು ಇನ್ನಾರೂ ಅರಿತಿಲ್ಲ. ಇದು ಮನುಷ್ಯರಿಗೆ ಒಂದು ಉದ್ಭೋಧನೆಯಲ್ಲದೆ ಇನ್ನೇನೂ ಅಲ್ಲ.
Footnotes
  • [1] ನರಕದ ಪಾಳೆಯಗಾರರು 19 ಮಂದಿ ಎಂದಾಗ ‘ಇಷ್ಟೇನಾ? ಅವರನ್ನು ಎದುರಿಸಲು ನಮಗೆ ಸಾಧ್ಯ’ ಎಂದು ಅಬೂಜಹಲ್ ಮತ್ತು ಸಂಗಡಿಗರು ಹೇಳಿದರು. ಹತ್ತೊಂಬತ್ತು ಯಾಕೆ? ಇಪ್ಪತ್ತಾಗಬಾರದಿತ್ತೇ? ಎಂದೆಲ್ಲ ಪರಿಹಾಸ್ಯವನ್ನು ಮಾಡಿದರು. ಈ ಆಯತ್ ಇದಕ್ಕೆ ಉತ್ತರವಾಗಿದೆ. ನರಕದ ಮೇಲ್ನೋಟಕರಾದ ಮಲಕ್‍ಗಳನ್ನು ಎದುರಿಸಲು ಮನುಷ್ಯರಿಗೆ ಸಾಧ್ಯವಿಲ್ಲ ಎಂದು ಖಚಿತಪಡಿಸಲಾಗಿದೆ.