Kannada Translation

Ayah by Ayah

Tags

Download Links

Kannada Translation translation for Surah Al-Qiyamah — Ayah 17

75:17
إِنَّ عَلَيۡنَا جَمۡعَهُۥ وَقُرۡءَانَهُۥ ١٧
ಅದನ್ನು ಒಗ್ಗೂಡಿಸಿಕೊಡುವ ಮತ್ತು ಓದಿಸಿ ಕೊಡುವ ಹೊಣೆ ನಮ್ಮದೇ ಆಗಿರುತ್ತದೆ1.
Footnotes
  • [1] ಜಿಬ್‍ರೀಲರು ಓದಿ ಮುಗಿಸುವ ಮುನ್ನವೇ ಮರೆತು ಬಿಡುವ ಭಯದಿಂದ ನಬಿಯವರು ಅವಸರಪಟ್ಟು ಓದುತ್ತಿದ್ದರು. ಇದು ಅವರ ತೀವ್ರ ಕಾಳಜಿಯ ದ್ಯೋತಕವಾಗಿತ್ತು. ಹಾಗೆ ಅವಸರ ಪಡಬೇಕಿಲ್ಲ, ಖುರ್‍ಆನನ್ನು ಉಳಿಸುವ ಹೊಣೆ ನನ್ನದು. ಆದ್ದರಿಂದ ಮರೆಯುವ ಸಂಭವ ಇಲ್ಲ ಎಂದಿಲ್ಲಿ ಹೇಳಲಾಗಿದೆ. ಜಮ್‍ಅಹೂ (ಒಟ್ಟುಗೂಡಿಸುವುದು) ಅಂದರೆ ಬೇರೆ ಬೇರೆ ಸಂದರ್ಭಗಳಲ್ಲಿ ಸ್ವಲ್ಪಸ್ವಲ್ಪವಾಗಿ ಬರುತ್ತಿದ್ದ ವಾಕ್ಯಗಳನ್ನು ನಬಿಯವರ ಮನದಲ್ಲಿ ಮರೆಯದಂತೆ ಕಾಪಾಡುವುದು ಎಂದರ್ಥ. ಅಲ್ಲಾಹನ ವಾಗ್ಧಾನದಂತೆ ಖುರ್‍ಆನ್ ಒಂದು ಬಿಂದುವಿನ ವ್ಯತ್ಯಾಸವಿಲ್ಲದೆ ಇಂದಿಗೂ ಅವತೀರ್ಣಗೊಂಡ ಸ್ವರೂಪದಲ್ಲಿಯೇ ಉಳಿದಿದೆ. ಲೋಕಾವಸಾನದ ತನಕ ಹೀಗೆಯೇ ಉಳಿಯಲಿದೆ.