Kannada Translation

Ayah by Ayah

Tags

Download Links

Kannada Translation translation for Surah Al-Qiyamah — Ayah 19

75:19
ثُمَّ إِنَّ عَلَيۡنَا بَيَانَهُۥ ١٩
ಬಳಿಕ ಅದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ1.
Footnotes
  • [1] ಇಲ್ಲಿ ಖುರ್‍ಆನಿನ ಬಯಾನ್ (ವಿವರಣೆ) ನನ್ನ ಬಾಧ್ಯತೆ ಎಂದು ಹೇಳಲಾಗಿದೆ. ಸಂಕ್ಷಿಪ್ತವಾಗಿರುವ ವಾಕ್ಯಗಳನ್ನು ಬೇರೆ ವಾಕ್ಯಗಳಲ್ಲಿ ವಿಶದೀಕರಿಸುವುದು, ಅಸ್ಪಷ್ಟವಾಗಿರುವುದನ್ನು ಅಥವಾ ಸೂಚ್ಯವಾದುದನ್ನು ಸ್ಪಷ್ಟವಾಗಿ ಹೇಳುವುದು ಇದರ ಒಂದು ವಿಧಾನ. ಖುರ್‍ಆನಿನ ಕೆಲವು ಭಾಗಗಳು ಇತರ ಕೆಲವು ಭಾಗಗಳಿಗೆ ವ್ಯಾಖ್ಯಾನ ನೀಡುತ್ತವೆ ಎಂದಿರುವುದು ಇದನ್ನೇ. ಇನ್ನೊಂದು ವಿಧಾನವೇನೆಂದರೆ ಖುರ್‍ಆನ್ ಆಯತ್‍ಗಳಲ್ಲಿಲ್ಲದೆಯೇ ಬೇರೆ ವಿಧಾನ ಮೂಲಕ ನಬಿಯವರಿಗೆ ವಿವರಿಸಿ ತಿಳಿಸುವುದು. ನಬಿಯವರ ವಚನಗಳು ಅಥವಾ ಅವರ ನಡವಳಿಕೆಯಿಂದ ಅದು ನಮಗೆ ಸ್ಪಷ್ಟವಾಗುವುದು. ನಬಿಚರ್ಯೆಯು ಖುರ್‍ಆನಿನ ವ್ಯಾಖ್ಯಾನ ಎನ್ನುತ್ತಿರುವುದು ಇದಕ್ಕೇ ಆಯಿಶಾ ಬೀಬಿ ರವರು ಪ್ರವಾದಿವರ್ಯ ರವರು ಚಲಿಸುವ ಖುರ್‍ಆನ್ ಆಗಿದ್ದರು ಎಂದು ಹೇಳಿರುವುದು ಇಲ್ಲಿ ಗಮನಾರ್ಹ.