Kannada Translation

Ayah by Ayah

Tags

Download Links

Kannada Translation translation for Surah Al-Insan — Ayah 19

76:19
۞ وَيَطُوفُ عَلَيۡهِمۡ وِلۡدَٰنٞ مُّخَلَّدُونَ إِذَا رَأَيۡتَهُمۡ حَسِبۡتَهُمۡ لُؤۡلُؤٗا مَّنثُورٗا ١٩
ಅವರ (ಸ್ವರ್ಗವಾಸಿಗಳ) ಮಧ್ಯೆ ಚಿರಕುಮಾರ ರಾದ ಕೆಲವು ಬಾಲಕರು ಸುತ್ತಾಡುತ್ತಿರುವರು. ತಾವು ಅವರನ್ನು ಕಂಡರೆ ಹರಡಿದ ಮುತ್ತುಗಳೆಂದೇ ಭಾವಿಸುವಿರಿ1.
Footnotes
  • [1] ಬೆಳ್ಳಿಯ ಪಾತ್ರೆಗಳು ಇಲ್ಲಿನಂತಹ ಬೆಳ್ಳಿಯದ್ದಲ್ಲ. ಅವು ಸ್ಫಟಿಕ ಸಮಾನವಾದುದು. ‘ಅವುಗಳನ್ನು ಅವರ ಸುತ್ತ ತರಲಾಗುವುದು’ ಎಂದಿಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದ್ದರೆ ಸುತ್ತ ತರುವವರು ಯಾರು ಎಂದು 19ನೇ ಆಯತ್‍ನಲ್ಲಿ ವಿವರಣೆ ನೀಡಲಾಗಿದೆ. ಸ್ವರ್ಗದಲ್ಲೇ ಸೃಷ್ಟಿಯಾದ ಸುರಸುಂದರರಾದ ಬಾಲಕರು ಸೇವಕರಾಗಿರುವರು. ಅವರು ಅಮೂಲ್ಯವಾದ ಪಾತ್ರೆಗಳಲ್ಲಿ ಪಾನಕವನ್ನು ಹಿಡಿದುಕೊಂಡು ವಿನಯ ಹಾಗೂ ಮಂದಸ್ಮಿತರಾಗಿ ಪಾನ ಸರಬರಾಜು ಮಾಡುತ್ತಿರುವರು. ‘ಅವರು ಆ ಪಾತ್ರೆಗಳಿಗೆ ಒಂದು ಪ್ರಮಾಣ ಕಲ್ಪಿಸುವರು.’ ಎಂದಿರುವುದರ ತಾತ್ಪರ್ಯವೇನೆಂದರೆ ಕುಡಿಯುತ್ತಾ ಆಗ್ರಹ ಮುಗಿದು ಇನ್ನು ಸಾಕು ಎಂದಾಗುವಷ್ಟರಲ್ಲಿ ಪಾತ್ರೆಯಲ್ಲಿ ಉಳಿದ ಪಾನಕ ಸ್ವಯಂ ಖಾಲಿಯಾಗುವುದು ಎಂದರ್ಥ. 5ನೇ ಆಯತ್‍ನಲ್ಲಿ ಪಾನಕಕ್ಕೆ ‘ಕಾಫೂರ್’ (ಕರ್ಪೂರ) ಸೇರಿಸಲಾಗುತ್ತದೆ ಎಂದೂ 17ರಲ್ಲಿ ‘ಝನ್ಜಬೀಲ್’ (ಶುಂಠಿ) ಸೇರಿಸಲಾಗುತ್ತದೆ ಎಂದೂ ಬಂದಿದೆ. ಶುಂಠಿ ರಸವು ಬಹಳ ರುಚಿದಾಯಕ. ಕರ್ಪೂರ ಇಲ್ಲಿ ಬಳಸುವಂತದ್ದಲ್ಲ; ಅದು ಸ್ವರ್ಗದ ಪರಿಮಳಯುಕ್ತ ಹಾಗೂ ಪರಮ ಸ್ವಾದಿಷ್ಟವಾದ ಒಂದು ವಸ್ತು. ಶುಂಠಿ ಕೂಡಾ ಇಲ್ಲಿನಂತಿರುವುದಿಲ್ಲ. ಅದು ಸ್ವರ್ಗದ ಶುಂಠಿ. ಆದ್ದರಿಂದ ಅದರ ಗುಣಮಟ್ಟ ಸ್ವರ್ಗೀಯವಾಗಿರುವುದು. ಸೇವಕರಾಗಿ ಅಲ್ಲಿಯೇ ಸೃಷ್ಟಿಯಾದ ಬಾಲಕರನ್ನು ‘ಹರಡಲಾದ ಮುತ್ತುಗಳಂತೆ’ ಎಂದು ಉಪಮಿಸಲಾಗಿದೆ, (ಆಯತ್ 19) ಇದು ಆ ಬಾಲಕರ ಸೌಂದರ್ಯ, ಚುರುಕು, ಗುಣಮಟ್ಟಗಳ ಪಾರಮ್ಯತೆ ಹಾಗೂ ಸಂಖ್ಯೆಯಲ್ಲಿ ಆಧಿಕ್ಯವನ್ನು ಸೂಚಿಸುತ್ತದೆ.