Kannada Translation

Ayah by Ayah

Tags

Download Links

Kannada Translation translation for Surah Al-Mursalat — Ayah 6

77:6
عُذۡرًا أَوۡ نُذۡرًا ٦
ನಿರಂತರ ರವಾನಿಸಲ್ಪಡುವ, ಅನಂತರ ರಭಸದಿಂದ ಬೀಸಿ ಬರುವ, ತದನಂತರ (ಮಳೆಯನ್ನು) ಹರಡುವ ವಾಯುವಿನ ಆಣೆ!. ಬೇರ್ಪಡಿಸಿ ವಿವೇಚಿಸುವ ಹಾಗೂ ನೆಪ ಗಳ ನಿವಾರಣೆಯಾಗಿಯೋ, ಮುನ್ನೆಚ್ಚರಿಕೆಯಾಗಿಯೋ ಸಂದೇಶಗಳನ್ನು ಹಾಕಿಕೊಡುವ (ಮಲಕ್‍ಗಳ) ಆಣೆ!1.
Footnotes
  • [1] ಬೇರ್ಪಡಿಸಿ ವಿವೇಚಿಸುವುದು ಅಂದರೆ ಸತ್ಯಾಸತ್ಯ ವಿವೇಚಿಸುವ ಸಂದೇಶಗಳನ್ನು ತರುವವರು ಎಂದರ್ಥ. ದ್ಸಿಕ್ರ್ ಅಂದರೆ ಖುರ್‍ಆನಿನಂತಹ ದಿವ್ಯ ಸಂದೇಶಗಳು. ವಹ್ಯ್‍ನ ವಾಹಕರು ಜೀಬ್‍ರೀಲ್ , ಒಬ್ಬನೇ ಆದರೂ ಇಲ್ಲಿ ಬಹುವಚನವಾಗಿ ಹೇಳಿದ್ದು ಒಂದೋ ಅವರಿಗೆ ಗೌರವ ಕೊಟ್ಟಾಗಿರಬಹುದು ಅಥವಾ ವಹೀ ಬರುವಾಗ ಜಿಬ್‍ರೀಲರ ಸುತ್ತಮುತ್ತ ಗೌರವ ರಕ್ಷೆ ನೀಡುತ್ತಾ ಬೇರೆಯೂ ಕೆಲವು ಮಲಕ್‍ಗಳು ಇರುವರು ಎಂದು 72:27ರಲ್ಲಿ ಹೇಳಿ ದಂತೆ ಅವರನ್ನು ಉದ್ದೇಶಿಸಿ ಹೇಳಿದ್ದಾಗಿರಬಹುದು. ಮಲಕ್ ತರುವ ಸಂದೇಶಗಳು ಉದ್‍ರ್ ಮತ್ತು ನುದ್‍ರ್ ಆಗಿರುವುದು ಎಂದಿಲ್ಲಿ ಹೇಳ ಲಾಗಿದೆ. ‘ಉದ್ಸ್‍ರ್’ ಅಂದರೆ ನೆಪ ಎಂದರ್ಥ. ಸತ್ಯನಿಷೇಧಿಗಳು ಪರಲೋಕದಲ್ಲಿ ‘ನಮಗೆ ಗೊತ್ತಿರಲಿಲ್ಲ’ ಎಂಬಂತಹ ನೆಪ ಹೇಳುವುದನ್ನು ಈ ಸಂದೇಶ ಗಳು ಇಲ್ಲವಾಗಿಸುತ್ತವೆ ಎಂದರ್ಥ. `ನುದ್ಸ್‍ರ್' ಅಂದರೆ ತಾಕೀತು. ಸತ್ಯವನ್ನು ಧಿಕ್ಕರಿಸಿದರೆ ಎಂತಹ ಶಿಕ್ಷೆಯಿದೆಯೆಂಬ ತಾಕೀತು ಕೂಡಾ ಸಂದೇಶಗಳಲ್ಲಿ ಇದೆ ಎಂದರ್ಥ.