Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 27

79:27
ءَأَنتُمۡ أَشَدُّ خَلۡقًا أَمِ ٱلسَّمَآءُۚ بَنَىٰهَا ٢٧
ನಿಮ್ಮನ್ನು ಸೃಷ್ಟಿಸುವುದೋ ಅಥವಾ ಆಕಾಶವನ್ನು ಸೃಷ್ಟಿಸುವುದೋ ಹೆಚ್ಚು ಪ್ರಯಾಸಕರ? ಅವನು ಆಕಾಶವನ್ನು ಸೃಷ್ಟಿಸಿದನು1.
Footnotes
  • [1] ಪುನರ್ಜೀವವನ್ನು ನಿಷೇಧಿಸುವವರು ಚಿಂತಿಸಲಿಕ್ಕಾಗಿ ಅವರೊಂದಿಗೆ ಅಲ್ಲಾಹನು ಕೇಳಿದ ಪ್ರಶ್ನೆಯಾಗಿದೆ ಇದು. ಅಂದರೆ ನಕ್ಷತ್ರಗಳು, ಉಪಗ್ರಹಗಳು, ಉಲ್ಕೆಗಳು ಮುಂತಾದವುಗಳನ್ನು ಒಳಗೊಂಡ ಅತ್ಯಂತ ವಿಶಾಲವಾದ ಆಕಾಶವನ್ನು ಸೃಷ್ಟಿಸಿದ್ದನ್ನು ಗಮನಿಸಿದರೆ ಮನುಷ್ಯನನ್ನು ಸೃಷ್ಟಿಸುವುದು ಒಂದು ವಿಶೇಷವೇ ಅಲ್ಲ ಎಂದು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಮರಣದ ಬಳಿಕ ಅವರನ್ನು ಪುನರ್ಜಿವಗೊಳಿಸುವುದು ಆಕಾಶವನ್ನು ಸೃಷ್ಟಿಸುವುದಕ್ಕಿಂತ ಎಷ್ಟೋ ಸುಲಭವಾಗಿದೆ.