Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 5

79:5
فَٱلۡمُدَبِّرَٰتِ أَمۡرٗا ٥
(ಪ್ರಪಂಚದ) ಕಾರ್ಯಗಳನ್ನು ನಿಯಂತ್ರಿಸುವವರಾಣೆ!1
Footnotes
  • [1] ಈ ಐದು ವಾಕ್ಯಗಳಲ್ಲಿ ಪ್ರತಿಪಾದಿಸಲಾದ ವಿಚಾರಗಳು ಮಲಕ್‍ಗಳ ಕುರಿತಾಗುವ ಪ್ರಬಲ ಸಾಧ್ಯತೆಯಿದೆ. ಇದರ ಪ್ರಕಾರ `ಮುಳುಗಿ ಎಳೆಯುವವರು' ಎಂದರೆ ಅತ್ಯಂತ ಭೀಭತ್ಸ ರೀತಿಯಲ್ಲಿ ದುಷ್ಕರ್ಮಿಗಳ ಆತ್ಮವನ್ನು ಹಿಡಿದೆಳೆಯುವ ದೇವಚರರು. ಆ ಸಂಧರ್ಭದಲ್ಲಿ ಸಹಿಸಲಸಾಧ್ಯವಾದ ನೋವು ಅವರಿಗೆ ಅನುಭವವಾಗುತ್ತದೆ. ಮೃದುವಾಗಿ ತೆಗೆದೊಯ್ಯುವವರು ಎಂದರೆ, ಅಲ್ಲಾಹು ಹಾಗೂ ಪ್ರವಾದಿವರ್ಯ ರವರನ್ನು ಅನುಸರಿಸಿ ಜೀವಿಸಿದ ಸತ್ಯವಿಶ್ವಾಸಿಗಳ ಆತ್ಮಗಳನ್ನು ಅತ್ಯಂತ ನಾಜೂಕಾಗಿಯೂ ನಯವಾಗಿಯೂ ಹಿಡಿಯುವ ದೇವಚರರು. ಅವರಿಗೆ ಮರಣವು ಕ್ಲಿಷ್ಟಕರವಾಗಿರಲಾರದು. ಇನ್ನು ಈ ಐದು ವಾಕ್ಯಗಳ ತಾತ್ಪರ್ಯವು ಮನುಷ್ಯರ ಆತ್ಮಗಳಿಗೂ ಅನ್ವಯಿಸಬಹುದಾದ ಸಾಧ್ಯತೆಯಿದೆಯೆಂದೂ ಇಮಾಮ್ ರಾಝಿ ವ್ಯಾಖ್ಯಾನಿಸಿದ್ದಾರೆ. ಆಗ ಅವುಗಳ ಅರ್ಥವು ಈ ಕೆಳಗಿನಂತೆ ಇರುತ್ತದೆ. ಮರಣದ ತೀವ್ರತೆಗೆ ತಲುಪುತ್ತಿರುವ ಮನುಷ್ಯರ ಆತ್ಮಗಳಾಣೆ, ಸರಳವಾಗಿ ಹೊರಟು ಹೋಗುವ ಆತ್ಮಗಳಾಣೆ, ಐಹಿಕಲೋಕಕ್ಕೆ ಹಿಮ್ಮುಖವಾಗಿ ಪರಮೋನ್ನತ ಸ್ಥಾನದತ್ತ ಧಾವಿಸುವ ಆತ್ಮಗಳಾಣೆ, ತನ್ನ ಆಧ್ಯಾತ್ಮ sಸಾಧನೆಗಳ ಮೂಲಕ ಪ್ರಾಪಂಚಿಕ ವ್ಯವಹಾರಗಳನ್ನು ನಿಯಂತ್ರಿಸಲು ಶಕ್ತರಾದ ಆತ್ಮಗಳಾಣೆ. ಭವಬಂಧನದಿಂದ ಹೊರಬಂದು ಸೃಷ್ಟಿಕರ್ತನ ಅನುಸರಣೆಯ ಮೂಲಕ ಉನ್ನತಿಗೇರಿದ ಆತ್ಮಗಳು ಕೆಲವು ಅಸಾಮಾನ್ಯ ಸಂಗತಿಗಳನ್ನು ಉಂಟುಮಾಡುತ್ತವೆ. (ತಫ್ಸೀರುಲ್ ಕಬೀರ್ 31/32).