Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 2

80:2
أَن جَآءَهُ ٱلۡأَعۡمَىٰ ٢
ಅಂಧ ವ್ಯಕ್ತಿಯು (ಇಬ್‍ನು ಉಮ್ಮಿ ಮಕ್ತೂಮ್) ಅವರ ಬಳಿ ಬಂದ ಕಾರಣಕ್ಕಾಗಿ1.
Footnotes
  • [1] ನಿರ್ಲಕ್ಷಮುಖಿಯಾದ ವ್ಯಕ್ತಿ ಪ್ರವಾದಿವರ್ಯ ರು. ಇಲ್ಲಿ ಯಾರೆಂದು ಪ್ರತ್ಯಕ್ಷವಾಗಿ ಹೇಳದೆ ‘ಅವರು’ ಎಂದು ಪರೋಕ್ಷವಾಗಿ ಹೇಳಿರುವುದು ಪ್ರವಾದಿ ವರ್ಯ ರನ್ನು ಗೌರವಿಸುವ ಹಾಗೂ ಅವರ ಮೇಲೆ ಅನುಕಂಪ ತೋರುವ ಉದ್ದೇಶದಿಂದಾಗಿದೆ. ಅಂಧ ವ್ಯಕ್ತಿ ಖದೀಜ ಬೀವಿಯವರ ಸೋದರತ್ತೆಯ ಮಗನಾದ ಅಬ್ದುಲ್ಲಾಹ್ ಬಿನ್ ಉಮ್ಮಿ ಮಕ್ತೂಮ್. ಒಮ್ಮೆ ಪ್ರವಾದಿವರ್ಯ ರು ಮಕ್ಕಾ ಮುಶ್ರಿಕರ ಪರಮೋಚ್ಚ ನಾಯಕರುಗಳಾಗಿದ್ದ ಉತ್‍ಬಃ, ಶೈಬಃ, ಅಬೂ ಜಹಲ್, ಅಬ್ಬಾಸ್ ಬಿನ್ ಅಬ್ದಿಲ್ ಮುತ್ತಲಿಬ್, ಉಮಯ್ಯತ್ ಬಿನ್ ಖಲಫ್, ವಲೀದ್ ಬಿನ್ ಮುಗೀರಃ ಮುಂತಾದವರ ಜತೆ ಇಸ್ಲಾಮ್ ಧರ್ಮದ ತತ್ವಾ ದರ್ಶಗಳ ಕುರಿತು ಚರ್ಚಿಸುತ್ತಾ ಅವರನ್ನು ತನ್ನ ಧರ್ಮದತ್ತ ಆಮಂತ್ರಿಸಲು ಪ್ರಯತ್ನಪಡುತ್ತಿದ್ದರು. ಅವರು ಮುಸ್ಲಿಮರಾಗಿ ಬಿಟ್ಟರೆ ಇಡೀ ಮಕ್ಕಾ ಪ್ರದೇಶವೇ ಪ್ರವಾದಿವರ್ಯ ರ ಆದರ್ಶದ ಅಧೀನಕ್ಕೆ ಬರುವ ನಿರೀಕ್ಷೆಯಿತ್ತು. ಆ ಮಧ್ಯೆ ಅಂಧರಾಗಿದ್ದ ಸ್ವಹಾಬಿಯೊಬ್ಬರ ಮಧ್ಯಪ್ರವೇಶ ಮತ್ತು ನನಗೆ ಕಲಿಸಿಕೊಡಿ ಎಂಬ ಆವರ್ತಿತ ಅಪೇಕ್ಷೆಯನ್ನು ಪ್ರವಾದಿವರ್ಯ ರು ಆ ಕ್ಷಣದಲ್ಲಿ ಗಮನಿಸದೆ ಹೋಗಿದ್ದರೆ ಅದು ಸಹಜವಷ್ಟೇ. ಗಂಭೀರ ಚಿಂತನೆ ಮತ್ತು ಚರ್ಚೆ ಯಲ್ಲಿ ತೊಡಗಿದ್ದ ಪ್ರವಾದಿವರ್ಯರಿಗೆ ಸ್ವಹಾಬಿಯ ಮಧ್ಯಪ್ರವೇಶದ ಮೂಲಕ ಚರ್ಚೆ ಸ್ಥಗಿತಗೊಳ್ಳುವ ಭಯವಿದ್ದುದರಿಂದ ಅವರು ಇನ್ನಷ್ಟು ಗಂಭೀರವದನರಾಗಿ ಚರ್ಚೆ ಮುಂದುವರಿಸಿದರು. ಮತ್ತು ಆ ಕ್ಷಣಕ್ಕೆ ಅಬ್ದುಲ್ಲಾಹಿಬ್‍ನು ಉಮ್ಮಿ ಮಕ್ತೂಮರ ಮಾತಿನ ಕಡೆಗೆ ಗಮನ ನೀಡಲಿಲ್ಲ. ಈ ಘಟನೆಯಲ್ಲಿ ಮನುಷ್ಯ ವರ್ತನೆಯ ರೀತಿ ರಿವಾಜುಗಳನ್ನು ಸ್ವಹಾಬಿಗಳಿಗೆ ಕಲಿಸಿ ಅವರಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಮೂಡಿಸುವ ಇರಾದೆಯೂ ಪ್ರವಾದಿಯವರಿಗಿತ್ತು.