Kannada Translation

Ayah by Ayah

Tags

Download Links

Kannada Translation translation for Surah Al-Ghashiyah — Ayah 20

88:20
وَإِلَى ٱلۡأَرۡضِ كَيۡفَ سُطِحَتۡ ٢٠
ಭೂಮಿಯನ್ನು ಹೇಗೆ ಹಾಸಲಾಗಿದೆಯೆಂದೂ !1
Footnotes
  • [1] ಅರ್ಥಾತ್ ಒಂಟೆ, ಆಕಾಶ, ಪರ್ವತ ಹಾಗೂ ಭೂಮಿಗಳನ್ನು ಕ್ರಮಬದ್ಧವಾದ ರೀತಿಯಲ್ಲಿ ಸೃಷ್ಟಿಸಲು ಅಲ್ಲಾಹನಿಂದಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಅಲ್ಲಾಹನಿಗೆ ಜೀವಿಗಳನ್ನು ಪುನರ್ಜೀವಗೊಳಿಸಲೂ ಅವರಿಗೆ ತಕ್ಕುದಾದ ಪ್ರತಿಫಲಗಳನ್ನು ನೀಡಲೂ ಸಾಧ್ಯವಿದೆ. ಸ್ವರ್ಗೀಯೋದ್ಯಾನಗಳ ಅದ್ಭುತಕರವಾದ ವಿನ್ಯಾಸಗಳನ್ನು ಮತ್ತು ಅಲ್ಲಿನ ಅವರ್ಣನೀಯ ಅನುಗ್ರಹಗಳನ್ನು ವಿವರಿಸಿದಾಗ ಅತಿಶಯಗೊಂಡ ಮುಶ್ರಿಕರು ಅದನ್ನು ನಂಬಲು ಸಾಧ್ಯವಾಗದೆ ಸಾರಸಗಟಾಗಿ ತಳ್ಳಿಹಾಕಿದರು. ಆದರೆ ಅಲ್ಲಾಹನು ಇದಾವುದೂ ತನಗೆ ಶ್ರಮಕರವಾದ ಕೆಲಸವೇ ಅಲ್ಲವೆಂದು ತೋರಿಸಲು ಅವರ ನಿತ್ಯ ಸಂಗಾತಿಗಳಾದ ಒಂಟೆ ಹಾಗೂ ಭೂಮ್ಯಾಕಾಶ ಮತ್ತು ಪರ್ವತಗಳ ಸೃಷ್ಟಿಯ ಕುರಿತು ಯೋಚಿಸುವಂತೆ ಕರೆ ನೀಡುತ್ತಾನೆ. ಇದೆಲ್ಲವನ್ನೂ ಸೃಷ್ಟಿಸಿದ ಅಲ್ಲಾಹನಿಗೆ ಸ್ವರ್ಗೀಯ ಅನುಗ್ರಹಗಳನ್ನು ಮಾತ್ರ ಸೃಷ್ಟಿಸುವುದು ಬಲು ಪ್ರಯಾಸಕರವಾಗುವುದು ಹೇಗೆಂದು ಅವರೊಂದಿಗೆ ಪ್ರಶ್ನಿಸಲಾಗಿದೆ.