Kannada Translation

Ayah by Ayah

Tags

Download Links

Kannada Translation translation for Surah Ad-Duhaa — Ayah 7

93:7
وَوَجَدَكَ ضَآلّٗا فَهَدَىٰ ٧
ತಮ್ಮನ್ನು ದಾರಿ ತಿಳಿಯದವರಾಗಿ ಕಂಡಾಗ ಸರಿಯಾದ ದಾರಿಯನ್ನು ತೋರಲಿಲ್ಲವೇ?1
Footnotes
  • [1] ಇದರ ಇನ್ನೊಂದು ಅರ್ಥವೇನೆಂದರೆ, ಅವನು ನಿಮ್ಮನ್ನು ಧರ್ಮಶಾಸ್ತ್ರದ ಜ್ಞಾನದಿಂದ ವಂಚಿತರಾಗಿ ಕಂಡನು. ಆಗ ಅವನು ನಿಮ್ಮನ್ನು ಅದರ ಕಡೆಗೆ ಮಾರ್ಗದರ್ಶನ ಮಾಡಿದನು. ಖುರ್‍ಆನಿನ ಒಂದೆಡೆ ‘ಗ್ರಂಥವೆಂದರೇನು ಎಂಬುದಾಗಲಿ ವಿಶ್ವಾಸವೆಂದರೇನು ಎಂಬುದಾಗಲಿ ನಿಮಗೆ ತಿಳಿದಿರಲಿಲ್ಲ’ (42:52) ಎಂದು ಹೇಳಲಾಗಿದೆ. ಮೂಲದಲ್ಲಿ ‘ಳಾಲ್ಲನ್’ ಎಂಬ ಪದಪ್ರಯೋಗವಿದೆ. ಇದು ‘ಳಲಾಲತ್’ ಎಂಬುದರ ಉತ್ಪತ್ತಿ. ಅಬೂಹಯ್ಯಾನ್ ಹೇಳುತ್ತಾರೆ; ಈ ಪದವನ್ನು ಸನ್ಮಾರ್ಗದ ವಿರುದ್ಧಾರ್ಥವಿರುವ ‘ದುರ್ಮಾರ್ಗ’ ಎಂಬ ಅರ್ಥದಲ್ಲಿ ಬಳಸುವಂತಿಲ್ಲ. ಏಕೆಂದರೆ ಪ್ರವಾದಿಗಳು ಅದರಿಂದ ಸುರಕ್ಷಿತರಾಗಿದ್ದಾರೆ.