Kannada Translation

Ayah by Ayah

Tags

Download Links

Kannada Translation translation for Surah Ash-Sharh — Ayah 4

94:4
وَرَفَعۡنَا لَكَ ذِكۡرَكَ ٤
ತಮ್ಮ ಮಹಿಮೆಯನ್ನು ತಮಗೆ ನಾವು ಎತ್ತರಕ್ಕೇರಿಸಲಿಲ್ಲವೇ?1
Footnotes
  • [1] ಇದು ಸಾರ್ವತ್ರಿಕ ಘೋಷಣೆ. ಪ್ರವಾದಿತ್ವ, ಭೂಮ್ಯಾಕಾಶಗಳಲ್ಲಿನ ಕೀರ್ತಿ ಇವೇ ಮುಂತಾದ ಪ್ರವಾದಿವರ್ಯ ರ ಸರ್ವ ಮಹಿಮೆಗಳನ್ನು ಈ ಸೂಕ್ತವು ಒಳಗೊಂಡಿದೆ. ಅಲ್ಲಾಹನು ಹೀಗೆ ಹೇಳುವಂತಿದೆ; ವಿಶ್ವವಿಡೀ ತಮ್ಮ ಅನುಯಾಯಿ ವೃಂದವನ್ನು ನಾನು ಹರಡುವೆನು. ತಮ್ಮ ಸ್ತುತಿ ಕೀರ್ತನೆಗಳನ್ನು ಹಾಡಿ ಹೊಗಳುವ, ತಮ್ಮ ಮೇಲೆ ಸಲಾತ್ ಹೇಳುವ ಮತ್ತು ತಮ್ಮ ಚರ್ಯೆಯನ್ನು ಕಾಯ್ದು ಕಾಪಾಡುವ ಸಮೂಹವನ್ನು ನಾನು ವಿಸ್ತರಿಸುವೆನು. ತಮ್ಮ ಸ್ತುತಿ ವಚನಗಳನ್ನು ಅವರು ಸಂರಕ್ಷಿಸುವರು. ತಮಗೆ ಅವತೀರ್ಣಗೊಂಡ ವೇದಗ್ರಂಥವನ್ನು ಅವರು ವ್ಯಾಖ್ಯಾನಿಸುವರು. ತಮ್ಮ ಸಾರೋಪದೇಶಗಳನ್ನು ಪ್ರವಚನಕಾರರು ಎತ್ತಿ ಹೇಳುವರು. ವಿದ್ವಾಂಸರು ಮತ್ತು ಅಧಿಕಾರಿಗಳು ತಮ್ಮ ಸೇವೆಯಲ್ಲಿ ನಿರತರಾಗುವರು. ತಮ್ಮ ಮನೆ ಬಾಗಿಲ ಬಳಿ ಬಂದು ಸಲಾಮ್ ಹೇಳುವರು. ತಮ್ಮ ಪವಿತ್ರ ಸಮಾಧಿಯ ಮಣ್ಣನ್ನು ಎತ್ತಿ ತಮ್ಮ ಮುಖಕ್ಕೆ ಒರೆಸಿಕೊಳ್ಳುವರು. ತಮ್ಮ ಶಿಫಾರಸ್ಸನ್ನು ಅವರು ಆಗ್ರಹಿಸುವರು. ಈ ರೀತಿ ತಮ್ಮ ಮಹಿಮೆಯು ಅಂತ್ಯದಿನದ ವರೆಗೂ ನೆಲೆ ನಿಲ್ಲುವುದು. (ರಾಝಿ 32/5)