Kannada Translation

Ayah by Ayah

Tags

Download Links

Kannada Translation translation for Surah At-Tin — Ayah 1

95:1
وَٱلتِّينِ وَٱلزَّيۡتُونِ ١
ಅಂಜೂರ ಮತ್ತು ಆಲಿವ್ ಹಣ್ಣಿನಾಣೆ1.
Footnotes
  • [1] *`ತೀನ್' ಎಂದರೆ ಅಂಜೂರ ಎಂದರ್ಥ. ಅಂಜೂರ ಹಾಗೂ ಇಪ್ಪೆಯ ಹೆಸರಲ್ಲಿ ಆಣೆ ಹಾಕುವ ಮೂಲಕ ಈ ಅಧ್ಯಾಯವನ್ನು ಪ್ರಾರಂಭಿಸಿರುವುದರಿಂದ ಆ ಹೆಸರು ಬಂದಿದೆ. ಇಲ್ಲಿ ಅಂಜೂರ ಹಾಗೂ ಇಪ್ಪೆಯ ಸಮೃದ್ಧಿ ಹಾಗೂ ವಿಶಿಷ್ಠ ಪ್ರಯೋಜನಗಳ ಕಾರಣ ಅವುಗಳ ಆಣೆ ಹಾಕಲಾಗಿದೆ. ಅಂಜೂರದ ಹಣ್ಣನ್ನು ಪ್ರವಾದಿವರ್ಯ ರು ಸ್ವರ್ಗದ ಹಣ್ಣಿನ ಜತೆ ಹೋಲಿಸಿ ಅದರ ಅನೇಕ ಪ್ರಯೋಜನಗಳನ್ನು ವಿವರಿಸಿದ್ದಾರೆ. ಆಲಿವ್ (ಇಪ್ಪೆ) ವೃಕ್ಷವೆಂದರೆ ಒಂದು ರೀತಿಯ ಎಣ್ಣೆಯನ್ನು ಉತ್ಪಾದಿಸುವ ಮರವಾಗಿದ್ದು ಇದರಲ್ಲಿ ಔಷಧ ಗುಣವಿದೆ. ಪ್ರವಾದಿ ಮುಹಮ್ಮದ್ ಮತ್ತು ಪೂರ್ವಿಕ ಪ್ರವಾದಿಗಳು ಹಲ್ಲುಜ್ಜಲು ಬಳಸುತ್ತಿದ್ದುದು ಝೈತೂನ್ ಮರದ ಕಡ್ಡಿಯನ್ನಾಗಿತ್ತೆಂದು ಹದೀಸ್‍ನಲ್ಲಿ ವರದಿಯಾಗಿದೆ. (ನಸಫೀ) ಆದರೆ ಇಮಾಮ್ ಇಕ್ರಿಮಃ ವ್ಯಾಖ್ಯಾನಿಸಿದ ಪ್ರಕಾರ ಅಂಜೂರ ಮತ್ತು ಇಪ್ಪೆ ಬೆಳೆಯುವ ಪ್ರದೇಶ ಎಂದಾಗಿದೆ. ಏಕೆಂದರೆ ಅಂಜೂರವು ಡÀಮಸ್ಕಸ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಪ್ಪೆಯು ಬೈತುಲ್ ಮುಖದ್ದಸ್‍ನಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. (ಖುರ್ತುಬಿ 19/110, ಬಹ್ರುಲ್ ಮುಹೀತ್ 8/489) 1119